ನವದೆಹಲಿ :
ಅಕ್ರಮವಾಗಿ 14 ಕೋಟಿ ರೂ. ಮೌಲ್ಯದ ಕೊಕೇನ್ ದೇಶಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಉಗಾಂಡಾದ ಮಹಿಳೆಯನ್ನು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ನಿಂದ ಬಳಲುತ್ತಿರುವ ಶಂಕಿತೆ ಕೊಕೇನ್ ಹೊಂದಿರುವ 91 ವಿಶೇಷವಾಗಿ ವಿನ್ಯಾಸಗೊಳಿಸಿದ ಗುಳಿಗೆಗಳನ್ನು ಸೇವಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಆಕೆಯ ಅಸಾಮಾನ್ಯ ದೇಹದ ಚಲನವಲನಗಳನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು, ಸಹಾಯ ಬೇಕಾಗಿದೆಯೇ ಎಂದು ಆಕೆಯನ್ನು ಸಂಪರ್ಕಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳ ಸಹಾಯನ್ನು ಸ್ವೀಕರಿಸಲು ನಿರಾಕರಿಸಿದ ಈಕೆ, ಮಾತನಾಡಲು ಕೂಡ ಹಿಂದೇಟು ಹಾಕಿದ್ದಾಳೆ. ಈಕೆಯ ಅಸಹಜ ವರ್ತನೆ ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಆಕೆಯ ಮೇಲೆ ನಿಗಾ ಇಟ್ಟಿದ್ದಾರೆ.
ಮಹಿಳೆ ಗ್ರೀನ್ ಚಾನೆಲ್ ನಿರ್ಗಮನ ಗೇಟ್ ಕಡೆಗೆ ಹೋಗುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ಅವಳನ್ನು ತಡೆದಿದ್ದಾರೆ. ಸತತ ವಿಚಾರಣೆಯ ನಂತರ, ಅಂತಿಮವಾಗಿ ಮಾದಕ ವಸ್ತುವಿನ 91 ಕ್ಯಾಪ್ಸುಲ್‌ಗಳನ್ನು ನುಂಗಿರುವುದಾಗಿ ಈಕೆ ಬಹಿರಂಗಪಡಿಸಿದ್ದಾಳೆ. ಕೂಡಲೇ ಆಕೆಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ