ತುಮಕೂರು :
ತಿಪಟೂರಿನ ಪ್ರಸಿದ್ಧ ಗಣೇಶನ ಉತ್ಸವ ನೋಡಲು ಹೋದ ಯುವತಿ ಪಟಾಕಿಯ ಅವಘಡಕ್ಕೆ ಬಲಿಯಾಗಿ ಮೃತಪಟ್ಟಿರುವ ಘಟನೆ ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ತುರುವೇಕೆರೆ ತಾಲೂಕಿನ ಅಮ್ಮಸಂದ್ರದ ಹಡವನಹಳ್ಳಿ ಮೈಕ್ ಸೆಟ್ ರಾಜಣ್ಣ ಎಂಬುವರ ಪುತ್ರಿ ಸಿತಾರಾ (21) ಮೃತಪಟ್ಟ ಯುವತಿ. ಜಿಲ್ಲೆಯ ತಿಪಟೂರು ನಗರದಲ್ಲಿ ಈ ದುರಂತ ಸಂಭವಿಸಿದೆ.
ಘಟನೆಯ ವಿವರ:
ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಉತ್ಸವ ನಡೆಯುತ್ತಿತ್ತು. ಮೆರವಣಿಗೆ ನಡೆಯುವ ವೇಳೆ ಸಿಡಿ ಮದ್ದಿನ ಪ್ರದರ್ಶನ ನಡೆಯುತ್ತಿತ್ತು. ಎಲ್ಲರೂ ಸಂಭ್ರಮದಿಂದ ಜಯಘೋಷಗಳನ್ನು ಕೂಗುತ್ತಿದ್ದ ವೇಳೆಯಲ್ಲಿ ಪಟಾಕಿಯಿಂದ ಸಿಡಿದ ಬೆಂಕಿ ಕಿಡಿಯೊಂದು ಸಿಡಿದಿದ್ದರಿಂದ ಯುವತಿ ತಲೆಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಯುವತಿ ಗಂಭೀರವಾಗಿ ಅಲ್ಲಿಯೇ ಕುಸಿದು ಬಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವಾಗ ಮಾರ್ಗ ಮಧ್ಯೆ ಯುವತಿ ಸಾವನ್ನಪ್ಪಿದ್ದಾಳೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ , ಡಿವೈಎಸ್ಪಿ ವೇಣುಗೋಪಾಲ್ , ಇನ್ಸ್‍ಪೆಕ್ಟರ್ ಕಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
