ಹಾನಿಗೊಳಗಾದ 15 ಕೆ.ಜಿ. ಯಕೃತ್ತು ತೆರವುಗೊಳಿಸಿದ ಬಿಜಿಎಸ್ ಪರಿಣಿತ ವೈದ್ಯಕೀಯ ತಂಡ

ಬೆಂಗಳೂರು

     ಅಪರೂಪದ ಅನುವಂಶಿಕ ಪಾಲಿಸಿಸ್ಟಿಕ್ ಯಕೃತ್ ಮತ್ತು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ದೆಹಲಿಯ 42 ವರ್ಷ ವಯಸ್ಸಿನ ಮಹಿಳೆಗೆ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಯಕೃತ್ತು ಮತ್ತು ಮೂತ್ರಪಿಂಡದ ಕಸಿ ಶಸ್ತç ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

    ಬಿಜಿಎಸ್ ಜಿಜಿಎಚ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ರೋಗಿ ಸಾಮಾನ್ಯವಾದ ಆಯಾಸ, ಸ್ನಾಯುಗಳ ನಷ್ಟ [ಸಾರ್ಕೋಪೇನಿಯಾ] ಮತ್ತು ದೊಡ್ಡ ಸಿಸ್ಟಿಕ್ ಪಿತ್ತ ಜನಕಾಂಗದ ಸಮಸ್ಯೆಯಿಂದಾಗಿ ಹೊಟ್ಟೆಯ ಭಾಗ ಹಿಗ್ಗುವಿಕೆಯ ಸಮಸ್ಯೆಗೆ ಒಳಗಾಗಿದ್ದರು. ಇದರಿಂದ ಆಕೆಯ ದೈನಂದಿನ ಚಟುವಟಿಕೆಗೆ ತೊಡಕಾಗಿತ್ತು. ಯಕೃತ್ ಸಮಸ್ಯೆ ಜೊತೆಗೆ ಡಯಾಲಿಸಿಸ್ ಅಗತ್ಯವಿರುವ ಸೀರಮ್ ಕ್ರಿಯೇಟಿನಿನ್ ನೊಂದಿಗೆ ಮೂತ್ರಪಿಂಡದ ಅಸಮಾನ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಅನುವಂಶಿಕ ಅಸ್ವಸ್ಥತೆಯಿಂದ ಯಕೃತ್ ಮತ್ತು ಮೂತ್ರಪಿಂಡ ಬಾಧಿತವಾಗಿದ್ದವು. ಇದರಿಂದ ಅಂಗಗಳು ಅಸಮಾನ್ಯ ಕ್ರಿಯೆಗೆ ಕಾರಣವಾಗಿದ್ದು, ಜೀವ ಉಳಿಸುವ ವಿಧಾನದೊಂದಿಗೆ ಎರಡೂ ಅಂಗಗಳ ಕಸಿ ಮಾಡಬೇಕಾದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು.

    ರೋಗಿಯ ಪರಿಸ್ಥಿತಿ ಮತ್ತು ವೈದ್ಯಕೀಯ ದಾಖಲೆಗಳನ್ನು ಆಸ್ಪತ್ರೆಯ ಯಕೃತ್ ಮತ್ತು ಮೂತ್ರಪಿಂಡ ಕಸಿ ಶಸ್ತç ಚಿಕಿತ್ಸಾ ತಂಡಗಳು ಪರಿಶೀಲಿಸಿದವು. ಕಸಿ ತಜ್ಞ, ಹಿರಿಯ ಸಮಾಲೋಚಕ ಮತ್ತು ಈ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಎಸ್. ಗೋಪಶೆಟ್ಟಿ ಮತ್ತು ಶಸ್ತç ಚಿಕಿತ್ಸಕರು, ಹಿರಿಯ ಸಮಾಲೋಚಕರಾದ ಡಾ. ಪ್ರದೀಪ್ ಕೃಷ್ಣ, ಡಾ. ರವೀಂದ್ರ ನಿಡೋಣಿ, ಡಾ. ಡಿ.ಎ. ಪ್ರಮೋದ್ ಕುಮಾರ್, ಯಕೃತ್ ಕಸಿ ತಜ್ಞ ಡಾ. ಬಿ.ಟಿ. ಅನಿಲ್ ಕುಮಾರ್, ಮೂತ್ರರೋಗ ಶಾಸ್ತç ವಿಭಾಗದ ಹಿರಿಯ ಸಮಾಲೋಚಕ, ಕಸಿ ವೈದ್ಯ ಡಾ. ಎಸ್. ನರೇಂದ್ರ ನೇತೃತ್ವದ ತಂಡ ಎರಡೂ ಅಂಗಗಳ ಕಸಿ ಶಸ್ತ್ರ  ಚಿಕಿತ್ಸೆ ಏಕಕಾಲಕ್ಕೆ ಮಾಡುವ ಕುರಿತು ರೋಗಿಗೆ ಮನವರಿಕೆ ಮಾಡಿಕೊಟ್ಟಿತು.

     ಒಂದು ಅಂಗ ತೆಗೆದು ಕಸಿ ಮಾಡಿದರೆ ಉಪಯೋಗವಿಲ್ಲ, ಎರಡೂ ಅಂಗಗಳನ್ನು ತೆರವುಗೊಳಿಸಿ ಕಸಿ ಶಸ್ತ್ರ  ಚಿಕಿತ್ಸೆ ನಡೆಸಿದರೆ ಆಗುವ ಲಾಭದ ಬಗ್ಗೆ ತಿಳಿವಳಿಕೆ ನೀಡಿತು. ನಂತರ ಆಕೆಯನ್ನು ಮೃತ ವ್ಯಕ್ತಿಯ ಯಕೃತ್ತು ಮತ್ತು ಮೂತ್ರಪಿಂಡ ಕಸಿಗಾಗಿ ಹೆಸರು ನೋಂದಾಯಿಸಲಾಗಿದ್ದು, ನಂತರ ಮೈಸೂರಿನ ವ್ಯಕ್ತಿಯೊಬ್ಬರಿಂದ ಎರಡೂ ಅಂಗಗಳು ದೊರೆತವು. ಕೇವಲ 12 ಗಂಟೆಗಳ ಅವಧಿಯಲ್ಲಿ ಬಿಜಿಎಸ್ ಜಿಜಿಎಚ್ ಬಹು ಅಂಗಾAಗ ಕಸಿ ತಜ್ಞರ ತಂಡ ಮೈಸೂರಿಗೆ ತೆರಳಿ ಯಶಸ್ವಿಯಾಗಿ ಅಂಗಗಳನ್ನು ತಂದಿತು. ಇದಕ್ಕಾಗಿ ಹಸಿರು ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.

     ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಕಸಿ ಶಸ್ತç ಚಿಕಿತ್ಸೆ ನಡೆಸುತ್ತಿರುವ ತಜ್ಞ ವೈದ್ಯರ ತಂಡ ಯಕೃತ್ ಮತ್ತು ಮೂತ್ರಪಿಂಡದ ಕಸಿ ಶಸ್ತ÷್ತ ಚಿಕಿತ್ಸೆ ನಡೆಸಿತು. ಆಕೆ ಚಿಕಿತ್ಸೆಗೆ ಸ್ಥಿರವಾಗಿ ಸ್ಪಂದಿಸಿದಳು. ಈ ಸಂದರ್ಭದಲ್ಲಿ ಹಾನಿಗೊಳಗಾದ 15 ಕೆ.ಜಿ. ತೂಕದ ಯಕೃತ್ ಅನ್ನು ತೆರವುಗೊಳಿಸಿದ್ದು, ಇದು ಜಗತ್ತಿನಲ್ಲಿ ಹೊರ ತೆಗೆದ ಅತಿ ದೊಡ್ಡ ಯಕೃತ್ ಆಗಿದೆ ಎನ್ನುವುದು ವಿಶೇಷ.

      ಶಸ್ತ್ರ  ಚಿಕಿತ್ಸೆ ಸಂಕಷ್ಟದಾಯಕವಾಗಿತ್ತು. ಏಕೆಂದರೆ ಅತಿ ದೊಡ್ಡದಾದ ಯಕೃತ್ ಕಿಬ್ಬೊಟ್ಟೆಯ ಕುಳಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಯಕೃತ್ ಬೃಹದಾಕಾರಾಗಿದ್ದ ಕಾರಣದಿಂದ ಶಸ್ತç ಚಿಕಿತ್ಸೆಗೆ ಸ್ವಲ್ಪವೇ ಜಾಗವಿತ್ತು. ಯಕೃತ್ತು ಮತ್ತು ಮೂತ್ರಪಿಂಡ ಕಸಿಯನ್ನು ಏಕಕಾಲಕ್ಕೆ ಮಾಡುವುದು ಸಂಕಿರ್ಣದಾಯಕವಾಗಿದ್ದು, ಹಲವಾರು ತಾಂತ್ರಿಕ ಸವಾಲುಗಳ ಜೊತೆಗೆ ಶಸ್ತಚಿಕಿತ್ಸೆಯ ನಂತರದ ಆರೈಕೆಯಲ್ಲಿ ಅಪಾಯವಿತ್ತು. ಸೋಂಕಿನ ಅಪಾಯದ ಜೊತೆಗೆ ಬಹು ಅಂಗಾಂಗ ವೈಫಲ್ಯಕ್ಕೆ ಇದು ಕಾರಣವಾಗಿ ಮಾರಣಾಂತಿಕವಾಗಬಹುದಾದ ಸನ್ನಿವೇಶವೂ ಇತ್ತು.

      ಯಕೃತ್ತಿನ ಹಿಂದೆ ರಕ್ತ ನಾಳಗಳಿದ್ದು, ಇವು ಸಮಸ್ಯೆಗೆ ಕಾರಣವಾಗಬಹುದು ಎನ್ನುವ ಕಳವಳವಿತ್ತು. ಕಸಿ ಶಸ್ತçಚಿಕಿತ್ಸೆಯಲ್ಲಿ ಅರಿವಳಿಕೆ ತಜ್ಞರು, ದಾದಿಯರ ತಂಡ, ಪ್ರತಿಯೊಬ್ಬರ ತಜ್ಞತೆ ನೆರವಿಗೆ ಬಂತು. ಇದರಿಂದ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆ ಸಂಕಿರ್ಣದಾಯಕ ಶಸ್ತ ಚಿಕಿತ್ಸೆಗಳನ್ನು ಸಮರ್ಥವಾಗಿ ನಡೆಸಿ, ಸವಾಲುಗಳನ್ನು ಎದುರಿಸಿ ಜೀವ ಉಳಿಸುವಲ್ಲಿ ಸಫಲವಾಗಿದೆ ಎಂದು ಕಸಿ ತಜ್ಞ, ಹಿರಿಯ ಸಮಾಲೋಚಕ ಮತ್ತು ಈ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಎಸ್. ಗೋಪಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

       ಯಶಸ್ವಿ ಶಸ್ತ್ರ  ಚಿಕಿತ್ಸೆ ನಂತರ ರೋಗಿ 4ನೇ ದಿನದಿಂದ ತನ್ನ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳಲು ಸಹಕಾರಿಯಾಯಿತು. 16 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಹೊಂದಿದ ಆಕೆ ಪೂರ್ಣ ಶಕ್ತಿಯೊಂದಿಗೆ ದೈನಂದಿನ ಬದುಕಿಗೆ ಮರಳಿದ್ದಾಳೆ. ರೋಗಿಯ ಸಹೋದರ ಕೂಡ ಕೆಲವು ವರ್ಷಗಳ ಹಿಂದೆ ಇದೇ ರೀತಿಯ ಅನುವಂಶಿಕ ಅಸ್ವಸ್ಥತೆಗೆ ಇದೇ ರೀತಿಯ ಕಾರ್ಯವಿಧಾನಕ್ಕೆ ಒಳಗಾಗಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap