150 ಕೋಟಿ ಆರೋಪ: ವಿಷಯ ಡೈವರ್ಟ್‌ ಮಾಡುವ ಹುನ್ನಾರ : ಆರ್‌ ಅಶೋಕ್‌

ಬೆಳಗಾವಿ:

    ಸರ್ಕಾರ ಪಲಾಯನ ಮಾಡುವ ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.ಚಳಿಗಾಲದ ಅಧಿವೇಶನದಲ್ಲಿ ಇವತ್ತಿನ ಕಾರ್ಯಕಲಾಪಗಳು ಶುರುವಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ 150 ಕೋಟಿ ರೂ. ಯಾಕೆ ಕೊಡಬೇಕು. ವಿಷಯ ಡೈವರ್ಟ್‌ ಮಾಡುವ ಹುನ್ನಾರ ಕಾಂಗ್ರೆಸ್‌ ಮಾಡಿದೆ.

   ಕಾಂಗ್ರೆಸ್‌ನವರೇ ಆಮಿಷ ಒಡ್ಡಿದರು ಎಂದು ಮಾಣಿಪ್ಪಾಡಿ ಹೇಳಿದ್ದಾರೆ. ಈಗಾಗಲೇ ಅಧೀವೇಶನದಲ್ಲಿ ವಕ್ಫ್ ವಿಚಾರ ಚರ್ಚಿಸಿದ್ದೇವೆ. ಇಂದು ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಆಗ್ರಹಿಸುತ್ತೇನೆ. ಆದರೆ ಕಾಂಗ್ರೆಸ್ ನಾಯಕರು ಉತ್ತರ ಕರ್ನಾಟಕ ಚರ್ಚೆಗೆ ಸಿದ್ದವಿಲ್ಲ. ಕಾಂಗ್ರೆಸ್ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ಚರ್ಚೆ ಮಾಡಿದರೆ ಹೊರಗೆ ಬರುತ್ತೆ ಅನ್ನೋ ಭಯ, ಸದನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ಆಗಬೇಕಿದೆ, ಮುಡಾ ಹಗರಣದಲ್ಲಿ ಖುದ್ದು ಮುಖ್ಯಮಂತ್ರಿಯವರೇ ಸಿಕ್ಹಾಕಿಕೊಂಡಿದ್ದಾರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರದ ಚರ್ಚೆಯಾಗಬೇಕಿದೆ, ಅಬಕಾರಿ ₹ 700 ಕೋಟಿ ಅವ್ಯವಹಾರ ವರದಿಯಾಗಿದೆ, ವಕ್ಫ್ ಬೋರ್ಡ್ ಭೂಕಬಳಿಕೆಯಿಂದ ರೈತರು ಕಂಗಾಲಾಗಿದ್ದಾರೆ- ಚರ್ಚೆ ನಡೆಸುವ ಬದಲು ಸರ್ಕಾರ ಪಲಾಯನ ಮಾಡುವ ಹವಣಿಕೆಯಲ್ಲಿದೆ ಎಂದರು.

Recent Articles

spot_img

Related Stories

Share via
Copy link