ಶಿರಾ:
ಮಾಜಿ ಸಚಿವ ಟಿ.ಬಿ.ಜಯಚಂದ್ರರಿಂದ ಗಂಗಾಪೂಜೆ
ಇಡೀ ಜಿಲ್ಲೆಗೆ ಅತ್ಯಂತ ಬೃಹತ್ ಬ್ಯಾರೇಜ್ ಆದ 16 ಕೋಟಿ ರೂ.ಗಳ ವೆಚ್ಚದ ಬೃಹತ್ ಬ್ಯಾರೇಜ್ ಆಗಿರುವ ಶಿರಾ ತಾಲ್ಲೂಕಿನ ನಾರಾಯಣಪುರ ಬ್ಯಾರೇಜ್ ಮಳೆಯ ನೀರಿನಿಂದ ತುಂಬಿ ಹರಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಬುಧವಾರ ತಮ್ಮ ಬೆಂಬಲಿಗರು ಹಾಗೂ ಗ್ರಾಮಸ್ಥರೊಡಗೂಡಿ ಗಂಗಾಪೂಜೆಯನ್ನು ನೆರವೇರಿಸಿದರು.
ಗಂಗಾಪೂಜೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಬಿ.ಜಯಚಂದ್ರ, ತಾಲ್ಲೂಕಿನ ಅಂತರ್ಜಲವನ್ನು ವೃದ್ಧಿಸುವ ಮೂಲಕ ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಕಳೆದ 5-6 ವರ್ಷಗಳ ಹಿಂದೆ ತಾಲ್ಲೂಕಿಗೆ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ನಮ್ಮ ಅವಧಿಯಲ್ಲಿ ನಿರ್ಮಾಣ ಮಾಡಿದ ಬ್ಯಾರೇಜ್‍ಗಳು ಇಂದು ಮಳೆಯ ನೀರು ಹಾಗೂ ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿರುವುದು ಸಂತಸದ ವಿಷಯ ಎಂದರು.
ತಾಲ್ಲೂಕಿನ ನಾರಾಯಣಪುರ ಬ್ಯಾರೇಜ್ ಇಡೀ ಜಿಲ್ಲೆಗೆ ಒಂದು ಬೃಹತ್ ಪ್ರಮಾಣದ ಬ್ಯಾರೇಜ್ ಆಗಿದ್ದು, 16 ಕೋಟಿ ರೂ.ಗಳ ಅನುದಾನದಿಂದ ಈ ಬ್ಯಾರೇಜ್ ನಿರ್ಮಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಬಂದ ವ್ಯಾಪಕ ಮಳೆಯಿಂದ ಈ ಬ್ಯಾರೇಜ್ ತುಂಬಿ ಹರಿದಿದ್ದು, ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದು ಜಯಚಂದ್ರ ತಿಳಿಸಿದರು.
ತಾಲ್ಲೂಕಿನಲ್ಲಿ ಈ ಹಿಂದೆ ನಾವು ಬ್ಯಾರೇಜ್‍ಗಳ ನಿರ್ಮಾಣ ಮಾಡ ಹೊರಟಾಗ ಅನೇಕ ಮಂದಿ ಟೀಕಿಸಿದ್ದರು. ಅನುದಾನವನ್ನೆಲ್ಲಾ ಎಂದೂ ಕೂಡ ತುಂಬದೆ ಇರುವ ಬ್ಯಾರೇಜ್‍ಗಳಿಗೆ ಹಾಕಿ ಜಯಚಂದ್ರ ತಪ್ಪು ಮಾಡಿದ್ದಾರೆ ಎಂದು ಕೆಲವರ ಟೀಕೆಗೂ ನಾನು ಒಳಗಾಗಿದ್ದೆನು. ಇದೀಗ ಎಲ್ಲಾ ಬ್ಯಾರೇಜ್‍ಗಳೂ ತುಂಬಿದ್ದು, ಅಂತಹ ಟೀಕೆ ಮಾಡಿದವರ ಬಾಯಿ ಕಟ್ಟಿ ಹಾಕಿದಂತಾಗಿದೆ ಎಂದು ಅವರು ತಿಳಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಹುಣಸೇಹಳ್ಳಿ ಶಶಿಧರ್, ಹುಣಸೇಹಳ್ಳಿ ಗ್ರಾ.ಪಂ. ಅಧ್ಯಕ್ಷ ಹನುಮಂತರಾಯಪ್ಪ, ಉಪಾಧ್ಯಕ್ಷೆ ರೇಖಾ, ಬೇವಿನಹಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಹಾರೋಗೆರೆ ಮಹೇಶ್, ಭಾರ್ಗವ ಸೇನಾ, ಲಕ್ಷ್ಮೀರಾಜ್, ನಾಗರಾಜು ಸೇರಿದಂತೆ ಅನೇಕ ಪ್ರಮುಖರು ಇದ್ದರು.
ಶಿರಾ ತಾಲ್ಲೂಕಿನಲ್ಲಿ ಈ ಹಿಂದೆ ನಾವು ಬ್ಯಾರೇಜ್‍ಗಳ ನಿರ್ಮಾಣ ಮಾಡಹೊರಟಾಗ ಅನೇಕ ಮಂದಿ ಟೀಕಿಸಿದ್ದರು. ಅನುದಾನವನ್ನೆಲ್ಲಾ ಎಂದೂ ಕೂಡ ತುಂಬದ ಬ್ಯಾರೇಜ್‍ಗಳಿಗೆ ಹಾಕಿ ಜಯಚಂದ್ರ ತಪ್ಪು ಮಾಡಿದ್ದಾರೆ ಎಂದು ಕೆಲವರ ಟೀಕೆಗೂ ನಾನು ಒಳಗಾಗಿದ್ದೆನು. ಇದೀಗ ಎಲ್ಲಾ ಬ್ಯಾರೇಜ್‍ಗಳೂ ತುಂಬಿದ್ದು, ಅಂತಹ ಟೀಕೆ ಮಾಡಿದವರ ಬಾಯಿ ಕಟ್ಟಿ ಹಾಕಿದಂತಾಗಿದೆ ಎಂದು ಅವರು ತಿಳಿಸಿದರು.
ಶಿರಾ ತಾಲ್ಲೂಕಿನ ನಾರಾಯಣಪುರದ 16 ಕೋಟಿ ರೂ. ವೆಚ್ಚದ ಬ್ಯಾರೇಜ್ ಮಳೆಯ ನೀರಿನಿಂದ ತುಂಬಿ ಹರಿದಿದ್ದು, ಮಾಜಿ ಸಚಿವ ಟಿ.ಬಿ.ಜಯಚಂದ್ರ ಬುಧವಾರ ಗಂಗಾಪೂಜೆ ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
