ವೈದ್ಯರ ಸಲಹೆಯಿಲ್ಲದೆ ಔಷಧ ಬಳಕೆ : ಶ್ರವಣ ದೋಷಕ್ಕೆ ಕಾರಣ

ತುಮಕೂರು:


ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಶ್ರವಣ ದಿನ ಆಚರಣೆ

ಇತ್ತೀಚಿನ ದಿನಗಳಲ್ಲಿ ಜನರು ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೆ ಉಪಯೋಗಿಸುವುದರಿಂದ ಶ್ರವಣ ದೋಷಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಇಎನ್‍ಟಿ. ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪಿ.ಆರ್.ವೆಂಕಟರಾಜಮ್ಮ ತಿಳಿಸಿದರು.

ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ಮಾ. 3 ರಂದು ವಿಶ್ವ ಶ್ರವಣ ದಿನದ ಅಂಗವಾಗಿ ಕಿವಿ, ಮೂಗು ಮತ್ತು ಗಂಟಲು ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಶ್ರವಣ ದಿನದ ಅಂಗವಾಗಿ ಶ್ರವಣ ಪತ್ತೆ ಹಚ್ಚುವ ಕೆಲಸವನ್ನು ನಾವು ಮಾಡುತ್ತೇವೆ, ಟಿವಿ, ರೇಡಿಯೋ, ಇಯರ್ ಪೋನ್‍ನಂತಹ ಉಪಕರಣಗಳಿಂದ ಹಾಗೂ ಇತರೆ ಜೋರಾದ ಶಬ್ಧಗಳಿಂದ ದೂರವಿರುವ ಮೂಲಕ ನಮ್ಮ ಕಿವಿಗಳನ್ನು ನಾವೇ ರಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ “ಜೀವನವಿಡೀ ಕೇಳಿಸಿಕೊಳ್ಳಲು ಜಾಗ್ರತೆಯಿಂದ ಆಲಿಸಿರಿ” ಎಂಬ 2022 ನೇ ಸಾಲಿನ ಘೋಷವಾಕ್ಯದಡಿ ಇಂದಿನ ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದೆ. ಕಿವಿ ಸೋರುವಿಕೆ, ಮುರುಕಳಿಸುವ ನೋವು ಅಥವಾ ರಕ್ತಸ್ರಾವ, ಗಂಭೀರ ರೋಗ ಕಂಡು ಬಂದಲ್ಲಿ ಆರಂಭದಿಂದಲೇ ವೈದ್ಯರನ್ನು ಸಂಪರ್ಕಿಸಿ ಶ್ರವಣ ದೋಷ ಪರೀಕ್ಷೆಗೊಳಗಾಗಿ ಚಿಕಿತ್ಸೆಯನ್ನು ಪಡೆಯಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಎಂ.ದಿವ್ಯಶ್ರೀ, ಡಾ.ಅಕ್ಷಯ.ಎಸ್, ವಾಕ್ ಮತ್ತು ಶ್ರವಣ ಶಾಸ್ತ್ರಜ್ಞರಾದ ಯದುನಂದನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಕಿರು ನಾಟಕ ಹಾಗೂ ಭಿತ್ತಿ ಪತ್ರದ ಮೂಲಕ ಜಾಗೃತಿ ಮೂಡಿಸಿದರು.

ಶ್ರವಣ ದೋಷವು ಚಿಕ್ಕ ಮಕ್ಕಳಿಯಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಪೋಷಕರು ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಿವುಡುತನ ಹಾಗೂ ಕುರುಡುತನ ಎರಡೂ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇರುತ್ತದೆ.

-ಡಾ.ಪಿ.ಆರ್.ವೆಂಕಟರಾಜಮ್ಮ, ಸಹ ಪ್ರಾಧ್ಯಾಪಕರು

2030 ಕ್ಕೆ 25 ಲಕ್ಷ ಶ್ರವಣ ದೋಷಿಗಳು :

ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಇಎನ್‍ಟಿ ವಿಭಾಗದ ಪ್ರಾಧ್ಯಾಪಕರಾದ ಡಾ.ಎನ್.ಸುಚಿತ್ರ ಅವರು ಮಾತನಾಡಿ, ಸುಮಾರು 2030 ರೊಳಗೆ 25 ಲಕ್ಷದಷ್ಟು ಶ್ರವಣ ದೋಷದಿಂದ ಬಳಲುವವರ ಸಂಖ್ಯೆ ಹೆಚ್ಚಾಗುವುದರಿಂದ ಜನನವಾದ ಮಗುವಿಗೆ ಕಿವಿ, ಕಣ್ಣಿನ ಪರೀಕ್ಷೆ ಮಾಡಿಸಬೇಕು ಎಂದು ಅರ್ಥಪೂರ್ಣವಾಗಿ ವಿವರಿಸಿದರು.

ಜಿಲ್ಲೆಯಲ್ಲಿ ಬೀದಿನಾಟಕ, ಕಿರುನಾಟಕ, ಸ್ಕ್ರೀನಿಂಗ್ ಮೂಲಕ ಶ್ರವಣ ದೋಷದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅತ್ಯಂತ ಆಕರ್ಷಕ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳನ್ನು ನೀಡಲಾಗುತ್ತದೆ ಅಗತ್ಯ ಇದ್ದವರು 0816-2211999 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap