ಬೆಂಗಳೂರು:
ನಿಸ್ಸಾನ್ ಕಂಪನಿಯು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕೇವಲ ಒಂದು ಕಾರನ್ನು ಮಾತ್ರ ಮಾರಾಟ ಮಾಡುತ್ತಿದೆ. ಅದು ನಿಸ್ಸಾನ್ ಮ್ಯಾಗ್ನೈಟ್ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಇಷ್ಟು ದೊಡ್ಡ ಬ್ರ್ಯಾಂಡ್ ಕೇವಲ ಒಂದು ಕಾರು ಮಾರಾಟದ ಆಧಾರದ ಮೇಲೆ ನೆಲೆ ನಿಂತಿದೆ.
ನಿಸ್ಸಾನ್ ಹೊಸ ಎಸ್‍ಯುವಿಯನ್ನು ಭಾರತದ ಮಾರುಕಟ್ಟೆಗೆ ತರಲು ಮುಂದಾಗಿದೆ. ಯಾಕೆಂದರೆ ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಕೇವಲ ಒಂದು ಮಾದರಿ ಮಾರಾಟದ ಮೇಲೆ ನಿಸ್ಸಾನ್ ನಂತಹ ದೊಡ್ಡ ಕಂಪನಿ ನೆಲೆ ನಿಲ್ಲವುದು ಕಷ್ಟಕರ ಕೆಲಸವಾಗಿದೆ. ಇದೇ ಕಾರಣಕ್ಕೆ ಮೂರು-ಸಾಲು ಪ್ರೀಮಿಯಂ ಎಸ್‍ಯುವಿಯನ್ನು ನಿಸ್ಸಾನ್ ಕಂಪನಿಯು ಭಾರತದಲ್ಲಿ ಅನಾವರಣ ಮಾಡಿದೆ.
ನಿಸ್ಸಾನ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ನಿಸ್ಸಾನ್ X-ಟ್ರಯಲ್ ಎಸ್‍ಯುವಿಯನ್ನು ಅನಾವರಣಗೊಳಿಸಲಾಗಿದೆ. ಈ ಹೊಸ ನಿಸ್ಸಾನ್ X-ಟ್ರಯಲ್ ಎಸ್‍ಯುವಿಯು 2024ರ ಆಗಸ್ಟ್ 1ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಇದಕ್ಕೂ ಮೊದಲು ಭಾರತದಲ್ಲಿನ ಆಯ್ದ ಡೀಲರ್ ಔಟ್‌ಲೆಟ್‌ಗಳಲ್ಲಿ ಅನಧಿಕೃತ ಬುಕಿಂಗ್‌ಗಳು ಪ್ರಾರಂಭವಾಗಿವೆ.
ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ 1.5-ಲೀಟರ್, 3-ಸಿಲಿಂಡರ್, ಟರ್ಬೋಚಾರ್ಜ್ಡ್ ಎಂನಿನ್ ಅನ್ನು ಹೊಂದಿದೆ. ಈ ಎಂಜಿನ್ ಒಟ್ಟು 163hp ಮತ್ತು 300Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ 12V ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಮುಂಬರುವ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿಯಲ್ಲಿ ಯಾವುದೇ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಇಲ್ಲ ಮತ್ತು ಮಾದರಿಯು ಶಿಫ್ಟ್-ಬೈ-ವೈರ್ ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ X-ಟ್ರಯಲ್ ಎಸ್‍ಯುವಿಯನ್ನು 3 ಸಾಲುಗಳ ಸೀಟುಗಳೊಂದಿಗೆ (7-ಸೀಟುಗಳು) ಬಿಡುಗಡೆ ಮಾಡುತ್ತದೆ ಈ ನಿಸ್ಸಾನ್ ಮ್ಯಾಗ್ನೈಟ್‌ಗಿಂತ ಭಿನ್ನವಾಗಿ, ಮುಂಬರುವ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿಯನ್ನು ಭಾರತದಲ್ಲಿ ತಯಾರಿಸಲಾಗುವುದಿಲ್ಲ ಆದರೆ ಇದು ಸಂಪೂರ್ಣವಾಗಿ ಆಮದು ಮಾಡಲಾದ ಮಾದರಿಯಾಗಿದೆ.
ನಿಸ್ಸಾನ್ ಎಕ್ಸ್-ಟ್ರಯಲ್ ಅದರ ನಾಲ್ಕನೇ ತಲೆಮಾರಿನ ಮಾದರಿಯಾಗಿದೆ. ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯು 4,680 ಎಂಎಂ ಉದ್ದ, 1,840 ಎಂಎಂ ಅಗಲ, 1,725 ಎಂಎಂ ಎತ್ತರ ಮತ್ತು 2,705 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನ್ನು ಹೊಂದಿದೆ. ಇದರ ದೊಡ್ಡ ಗಾತ್ರದ ಹೊರತಾಗಿಯೂ, ನಿಸ್ಸಾನ್ ಎಕ್ಸ್-ಟ್ರಯಲ್ 5.5 ಮೀ ಟರ್ನಿಂಗ್ ರೆಡಿಯಸ್ ಹೊಂದಿದೆ. ಈ ನಿಸ್ಸಾನ್ ಎಕ್ಸ್-ಟ್ರಯಲ್ ಮಾದರಿಯು CMF-C ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
ಈ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಇದರಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ABS, EBD, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಆಟೋ ವೈಪರ್‌ಗಳು ಮತ್ತು ಹೆಚ್ಚಿನವುಗಳನ್ನು ಹೊಂದಿದೆ. ಸುರಕ್ಷತಾ ಎಸ್‍ಯುವಿಗಳಲ್ಲಿ ಇದು ಕೂಡ ಒಂದಾಗಿದೆ. . ಈ ಹೊಸ ನಿಸ್ಸಾನ್ X-ಟ್ರಯಲ್ (Nissan X-Trail) ಎಸ್‍ಯುವಿಯು ಆಕರ್ಷಕವಾಗಿದೆ.
ಈ ಹೊಸ ನಿಸ್ಸಾನ್ ಎಸ್‍ಯುವಿಯು ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಡೋರ್-ಮೌಂಟೆಡ್ ORVM ಗಳು ಮತ್ತು ಸುತ್ತುವ ಟೈಲ್‌ಲೈಟ್‌ಗಳಂತಹ ಅಚ್ಚುಕಟ್ಟಾದ ಅಂಶಗಳನ್ನು ಹೊಂದಿವೆ. ಇದರ ಜೊತೆಗೆ, ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ 360-ಡಿಗ್ರಿ ಪ್ಲಾಸ್ಟಿಕ್ ಕ್ಲಾಡಿಂಗ್ ಮತ್ತು ಎತ್ತರದ 210mm ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಸ್ವಲ್ಪ ಒರಟಾಗಿ ಕಾಣುತ್ತದೆ.
255/45 ಟೈರ್‌ಗಳಲ್ಲಿ ಸುತ್ತುವ ಅದರ ದೊಡ್ಡ 20-ಇಂಚಿನ ವ್ಹೀಲ್ ಗಳೊಂದಿಗೆ ಇದು ಸಾಕಷ್ಟು ಪ್ರೀಮಿಯಂ ಆಗಿ ಕಾಣುತ್ತದೆ. ಹೆಚ್ಚು ಪ್ರೀಮಿಯಂ ಕಾಣಿಸುತ್ತದೆ. ಇನ್ನು ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯ ಒಳಭಾಗದಲ್ಲಿ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, 12.3-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್, ಒಂದೇ ಗಾತ್ರದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, 40/20/40 ಸ್ಪ್ಲಿಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಉತ್ತಮವಾಗಿ ಸಜ್ಜುಗೊಂಡಿದೆ. ಇನ್ನು ಮೂರನೇ ಸಾಲಿನ ಸೀಟುಗಳನ್ನು ಮಡಿಚಿದರೆ ಹೆಚ್ಚು ಸ್ಪೇಸ್ ಸಿಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ