1854 ಎಕರೆ ಭತ್ತದ ಗದ್ದೆ ಜಲಾವೃತ

ಹರಪನಹಳ್ಳಿ:

      ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ತಾಲ್ಲೂಕಿನಲ್ಲಿ ತಾಲ್ಲೂಕಿನ ಹಲವಾಗಲು, ಗರ್ಭಗುಡಿ, ನಿಟ್ಟೂರು, ನಿಟ್ಟೂರು ಬಸಾಪುರ, ಕಡತಿ ಹಾಗೂ ತಾವರಗುಂದಿ ಗ್ರಾಮಗಳ ಸುಮಾರು 1854 ಎಕರೆಗೂ ಹೆಚ್ಚು ಗದ್ದೆಗಳು ಜಲಾವೃತಗೊಂಡಿವೆ.

      ಕಡತಿಯಲ್ಲಿ ಭತ್ತ 400 ಎಕರೆ, ಮೆಕ್ಕೆಜೋಳ 50, ಕಬ್ಬು, 50, ಬಾಳೆ, 3, ಚೆಂಡಹೂ 10, ಕೊತ್ತಂಬ್ರಿ 1 ಒಟ್ಟು 514 ಎಕರೆ, ನಿಟ್ಟೂರಲ್ಲಿ ಭತ್ತ 300, ಮೆಕ್ಕೆಜೋಳ 30, ಈರುಳ್ಳಿ 5 ಒಟ್ಟು 335 ಎಕರೆ, ನಿಟ್ಟೂರು ಬಸಾಪುರ 105 ಎಕರೆ ಭತ್ತದ ಜಮೀನು, ತಾವರಗುಂದಿಯಲ್ಲಿ ಭತ್ತ 350, ಈರುಳ್ಳಿ 5 ಒಟ್ಟು 355 ಎಕರೆ, ಹಲವಾಗಲು ಗ್ರಾಮದಲ್ಲಿ ಭತ್ತ 350, ಮೆಕ್ಕಜೋಳ 150, ಚೆಂಡಹೂ 25, ಸೌತೆ 5, ಅಡಿಕೆ 15 ಒಟ್ಟು 545 ಎಕರೆ ಜಮೀನು ಜಲಾವೃತಗೊಂಡಿದೆ.

      ಗುರುವಾರ ಜಲಾವೃತಗೊಂಡ ಗ್ರಾಮಗಳಿಗೆ ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ ಮುದಗಲ್ಲ, ಸಹಾಯಕ ಜಂಟಿ ಕೃಷಿ ನಿರ್ದೇಶಕಿ ಸ್ಪೂರ್ತಿ, ಸಹಾಯಕ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ, ಪಿಡಿಒ ಯಮುನಾ ನಾಯ್ಕ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

      ಸಂಪರ್ಕ ಕಡಿತ: ನೀರಿನ ಹರಿವು ಹೆಚ್ಚುತ್ತಿರುವುದರಿಂದ ಹಲವಾಗಲು, ಕಣವಿ ತಾಂಡಾ ಸಂಪರ್ಕಿಸುವ ರಸ್ತೆ, ಹಲವಾಗಲು, ಕಡತಿ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದ ರಸ್ತೆ ಸಂಚಾರ ಹಾಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನದಿಪಾತ್ರದ ಗ್ರಾಮಗಳ ತಗ್ಗು ಪ್ರದೇಶದಲ್ಲಿ ಮನೆ ನಿರ್ಮಿಸಲು ಅನುಮತಿ ನೀಡಬಾರದು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಉಪವಿಭಾಗಾಧಿಕಾರಿ ಜಿ.ನಜ್ಮಾ ಅವರು ಸೂಚನೆ ನೀಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link