ಬೆಂಗಳೂರು:
ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆಗೆ ಸುಪಾರಿ ಪಡೆದಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆಗೆ ಜೈಲಿನಿಂದಲೇ ಸ್ಕೆಚ್ ಹಾಕಿದ್ದು, ರಾಬರಿ ಕಿಟ್ಟಿಯಿಂದ ಸುಪಾರಿ ಪಡೆದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಲಿಂಡರ್ ಸುನಿಲ ಹಾಗೂ ಅವಿನಾಶ್ ಬಂಧಿತ ರೌಡಿಗಳು.
ಸೂರಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ರಾಬರಿ ಕಿಟ್ಟಿ, ಕುಣಿಗಲ್ ಗಿರಿಯನ್ನು ಮುಗಿಸಬೇಕೆಂದು ತನ್ನ ಶಿಷ್ಯನಾದ ಸಿಲಿಂಡರ್ ಸುನಿಲನಿಗೆ ಸುಪಾರಿ ನೀಡಿದ್ದ. ಈ ಸಿಲಿಂಡರ್ ಸುನಿಲ ಕೆಂಗೇರಿ ಠಾಣೆಯ ರೌಡಿಶೀಟರ್ ಆಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಸಿಸಿಬಿ ಬಂಧಿಸಿದೆ. ಪರಾರಿಯಾಗಿರುವ ಮತ್ತಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ