ತಿಪಟೂರು
ನಗರ ಠಾಣಾ ವ್ಯಾಪ್ತಿಯ ಶಂಕರನಗರ ಬಡಾವಣೆಯಲ್ಲಿ ಕಳೆದ ವರ್ಷ ಹಿಂದೆ ಎರಡು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿ ಮಂಜುನಾಥ ಅಲಿಯಾಸ್ ಕಲ್ಕೆರೆ ಮಂಜ ಬೆಂಗಳೂರು ಅವರನ್ನು ತಿಪಟೂರು ನಗರ ಪೊಲೀಸ್ ಠಾಣಾ ಪೊಲೀಸರು ಹಿಡಿದು ಆರೋಪಿಯಿಂದ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ತಿಪಟೂರು ಗೌರವಾನ್ವಿತ ಹಿರಿಯ ಸಿವಿಲ್ ಜಡ್ಜ್ & ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,
ಘನ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮಹಮದ್ ಆರೀಫುಲ್ಲಾ ಸಿ.ಎಫ್.ರವರು ಎರಡೂ ಪ್ರಕರಣಗಳಲ್ಲಿ ತಲಾ 01 ವರ್ಷದ ಸಾಧಾರಣ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ. ಈ ಪ್ರಕರಣಗಳಲ್ಲಿ ಠಾಣಾ ಇನ್ಸ್ ಪೆಕ್ಟರ್ ಶ್ರೀಶೈಲಮೂರ್ತಿ ಹಾಗೂ ಎ.ಎಸ್.ಐ. ನಿಸಾರ್‌ಅಹಮದ್‌ರವರು ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರಗಳನ್ನು ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಅನ್ಸರ್ ಪಾಷ.ಎಂ. ಅವರು ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
