ಬೆಂಗಳೂರು :

   ಹಳ್ಳಿ ಹೈದ ಹನುಮಂತ ಬಿಗ್ ಬಾಸ್ ಕನ್ನಡ ಸೀಸನ್ 11ರ  ವಿಜೇತರಾಗಿ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಲಿಟ್ಟ ಹನುಮ ಘಟಾನುಘಟಿ ಸ್ಪರ್ಧಿಗಳನ್ನೇ ಹಿಂದಿಕ್ಕಿ ಬಿಗ್ ಬಾಸ್ ಟ್ರೋಫಿಗೆ ಮತ್ತಿಕ್ಕಿದ್ದಾರೆ. ಜೊತೆಗೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಸ್ಪರ್ದಿ ವಿನ್ನರ್ ಅನ್ನೋ ಪಟ್ಟ ಪಡೆದ ದಾಖಲೆ ಮಾಡಿದ್ದಾರೆ. 119ನೇ ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದ ಹನುಮಂತನಿಗೆ ಈ ಬಾರಿ ವಿನ್ನರ್ ಪಟ್ಟ ಸಿಕ್ಕಿದೆ.

    20 ಸ್ಪರ್ಧಿಗಳೊಂದಿಗೆ ಸ್ವರ್ಗ-ನರಕ ಕಾನ್ಸೆಪ್ಟ್ ಮೂಲಕ ಶುರುವಾದ ಶೋನಲ್ಲಿ ಕೊನೆಯಲ್ಲಿ ರಜತ್ ಕಿಶನ್, ಹನುಮಂತ ಹಾಗೂ ತ್ರಿವಿಕ್ರಮ್ ಉಳಿದುಕೊಂಡರು. ಇವರನ್ನು ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಸ್ಟೇಜ್ ಮೇಲೆ ಕರೆದುಕೊಂಡು ಬಂದರು. ಸ್ಟೇಜ್​ಗೆ ಬರುವ ಮುನ್ನ ಸುದೀಪ್ ಅವರು ಬಿಗ್ ಬಾಸ್ ಮನೆಯ ಮೈನ್-ಸ್ವಿಚ್ ಆಫ್ ಮಾಡಿ ಎಲ್ಲ ಲೈಟ್​ಗಳನ್ನು ನಂದಿಸಿ ಹೊರಟರು.

   ಬಳಿಕ ಸ್ಟೇಜ್ ಮೇಲೆ ನಡೆದ ರೆಡ್ ಲೈಟ್ – ಗ್ರೀನ್ ಲೈಟ್ ಚಟುವಟಿಕೆಯಲ್ಲಿ ರೆಡ್ ಲೈಟ್ ಪಡೆದುಕೊಂಡು 2ನೇ ರನ್ನರ್ ಅಪ್ ಆಗಿ ರಜತ್ ಕಿಶನ್ ಹೊರಗುಳಿದರು. ಅಂತಿಮವಾಗಿ ಹನುಮಂತ ಹಾಗೂ ತ್ರಿವಿಕ್ರಮ್ ಪೈಕಿ ಕಿಚ್ಚ ಸುದೀಪ್ ಅವರು ಹಳ್ಳಿ ಹೈದನ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದರು. ಹನುಮಂತತು (5,23,89,318) 5 ಕೋಟಿ 23 ಲಕ್ಷದ 89 ಸಾವಿರದ 318 ವೋಟ್ಸ್​ ಅನ್ನು ಪಡೆದುಕೊಂಡಿದ್ದಾರೆ. ರನ್ನರ್ ಅಪ ತ್ರಿವಿಕ್ರಮ್ ಅವರು 2 ಕೋಟಿಗೂ ಹೆಚ್ಚು ವೋಟ್ ಪಡೆದಿದ್ದಾರೆ.

   ಟ್ರೋಫಿ ಜೊತೆಗೆ ಹನುಮಂತ ಅವರಿಗೆ 50 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ರನ್ನರ್ ಅಪ್ ತ್ರಿವಿಕ್ರಮ್ ಅವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಆದರೆ, ಈ ಹಣ ಸಂಪೂರ್ಣವಾಗಿ ಗೆದ್ದ ವ್ಯಕ್ತಿಗೆ ಸಿಗುವುದಿಲ್ಲ. ಗೆದ್ದ ಹಣಕ್ಕೆ ಸರ್ಕಾರ ದೊಡ್ಡ ಮೊತ್ತದ ಟ್ಯಾಕ್ಸ್ ಹೇರುತ್ತದೆ. ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ.

   ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ. ಕೇವಲ ಹನುಮಂತ ಮಾತ್ರವಲ್ಲದೆ ರನ್ನರ್ ಅಪ್​ ಆದ ತ್ರಿವಿಕ್ರಮ್ ಅವರೂ ತೆರಿಗೆ ಹಣ ಪಾವತಿಸಬೇಕು. ಅವರಿಗೆ ಒಟ್ಟೂ 15 ಲಕ್ಷ ರೂಪಾಯಿ ಸಿಕ್ಕಿದ್ದು, ಇದರಲ್ಲಿ ಅವರಿಗೆ 10,50,000 ಮಾತ್ರ ಸಿಗಲಿದೆ. ರಜತ್ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದ್ದು, ಅವರ ಕೈ ಸೇರೋದು 7 ಲಕ್ಷ ರೂಪಾಯಿ ಮಾತ್ರ.

Recent Articles

spot_img

Related Stories

Share via
Copy link