ಆಗ್ನೇಯ ಪದವೀಧರ ಕ್ಷೇತ್ರ: ಕೊರಟಗೆರೆಯಲ್ಲಿ 2399 ಮತದಾರರ ನೋಂದಣಿ

‌ಕೊರಟಗೆರೆ :-

    ಆಗ್ನೇಯ ಪದವಿದಾರರ ಕ್ಷೇತ್ರದಲ್ಲಿ ಇಲ್ಲಿಯವರೆಗೆ 2399 ಪದವಿದಾರರು ನೋಂದಣಿಯಾಗಿದ್ದು , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪದವೀಧರರು ನೋಂದಾಯಿಸಿಕೊಳ್ಳಬೇಕು ಜೊತೆಗೆ ಈವರೆಗಿನ ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆ ಕಂಡು ಬಂದಲ್ಲಿ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ತಹಸಿಲ್ದಾರ್ ಮಂಜುನಾಥ್ ತಿಳಿಸಿದ್ದರು.

    ಸೋಮವಾರ ತಾಲೂಕ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಪಕ್ಷಗಳ ಮುಖಂಡರುಗಳ ಸಭೆಯಲ್ಲಿ ಮಾಹಿತಿ ನೀಡುತ್ತಾ ಈವರೆಗೆ 2399 ಪದವಿದಾರರು ನೋಂದಣಿಯಾಗಿದ್ದು , ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನೋಂದಣಿ ಮಾಡಿಸಿಕೊಳ್ಳುವುದರ ಜೊತೆ ಜೊತೆಯಲಿ ಪ್ರಸ್ತುತ ಮತದಾರ ಪಟ್ಟಿಯ ಆಕ್ಷೇಪಣೆ ಕಂಡು ಬಂದಲ್ಲಿ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಮಾಹಿತಿ ನೀಡಿದರು. 

      ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಪಟ್ಟಂತೆ 30/6/ 2025ರ ಅಧಿಸೂಚನೆಯಂತೆ ನಾಲ್ಕು ಮತಗಟ್ಟೆಗಳನ್ನು ಸಿದ್ಧತೆ ನಡೆಸಲಾಗಿದ್ದು, 6/ 11/ 2025 ಈವರೆಗೆ 2399 ನೋಂದಣಿಯಾಗಿದ್ದು ಇದರಲ್ಲಿ ಕೊರಟಗೆರೆ 902, ಹೊಳವನಹಳ್ಳಿ 542, ತೋವಿನಕೆರೆ 406, ಕೋಳಾಲ 549 ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೋಂದಣಿ ಮಾಡುವುದರ ಜೊತೆಗೆ ಈಗಿನ ಮತದಾರ ಪಟ್ಟಿಯಲ್ಲಿ ಲೋಪ ಕಂಡು ಬಂದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ವಿವಿಧ ಪಕ್ಷಗಳ ಮುಖಂಡರುಗಳಿಗೆ ತಿಳುವಳಿಕೆ ನೀಡಿದರು.

Recent Articles

spot_img

Related Stories

Share via
Copy link