ತುಮಕೂರು :
ಜಿಲ್ಲೆಯ ತೋವಿನಕೆರೆ ಹೋಬಳಿಯ ಕುರಂಕೋಟೆ ನಿವಾಸಿಯಿಂದ ಸರ್ಕಾರಿ ಸರ್ವೇಯರ್ ಆದ ಶ್ರೀಮತಿ ಹೆಚ್ ಆರ್.ಮಮತ ರವರು 5000 ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಹಿನ್ನೆಲೆ :
ಆನ್ ಲೈನ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ಅನ್ವಯ ಸರ್ವೆ ಮಾಡಲು ಬಂದ ಅಧಿಕಾರಿಯು ತನ್ನ ಕೆಲಸ ಮುಗಿದಿದ್ದು ತನಗೆ 10000ರೂ ಕೊಡಲೇಬೇಕು ಎಂದಾಗ ಸಂತ್ರಸ್ಥರು ಎಸಿಬಿ ಮೊರೆ ಹೋದರು ಇದಾದ ಮೇಲೆ 5000 ಸಾವಿರ ರೂಗಳನ್ನು ಎರಡು ಕಂತಾಗಿ ತೆಗೆದುಕೊಳ್ಳಲು ಒಪ್ಪಿದ ಮಮತ ಅವರು ಮೊದಲ ಕಂತಾದ 5000ರೂ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.