ನೀರಿಲ್ಲದೆ ಬಾಯಾರಿದ ದೆಹಲಿ : ಕೇಂದ್ರದ ಮಧ್ಯಸ್ಥಿಕೆ ಆಗ್ರಹ

ನವದೆಹಲಿ: 

    ರಾಷ್ಟ್ರ ರಾಜಧಾನಿ ತೀವ್ರ ಬಿಸಿಲಿನ ನಡುವೆ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಆಮ್ ಆದ್ಮಿ ಪಕ್ಷದ ಶಾಸಕರು ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

    ದೆಹಲಿ ಪರಿಸ್ಥಿತಿ ‘ತುಂಬಾ ನಿರ್ಣಾಯಕ’ವಾಗಿದೆ ಎಂದ ದೆಹಲಿ ವಿಧಾನಸಭೆಯ ಎಎಪಿ ಮುಖ್ಯ ಸಚೇತಕ ದಿಲೀಪ್ ಪಾಂಡೆ, ಯಮುನಾ ನೀರಿನ ಸಮಸ್ಯೆ ಅಂತರರಾಜ್ಯ ಸಮಸ್ಯೆಯಾಗಿದ್ದು, ಇದಕ್ಕೆ ಜಲಶಕ್ತಿ ಸಚಿವಾಲಯದ ಸಮನ್ವಯತೆಯ ಅಗತ್ಯವಿದೆ ಎಂದು ಹೇಳಿದರು.

   ಎಎಪಿ ಶಾಸಕರು ತಮ್ಮ ಪತ್ರದಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಲಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ. 

    ನೀರಿನ ವಿಚಾರದಲ್ಲಿ ರಾಜಕೀಯ ಮಾಡುವ ಬದಲು, ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ದೆಹಲಿಯ ಜನರಿಗೆ ನೀರು ನೀಡಲು ಎಲ್ಲಾ ಪಕ್ಷಗಳು ಶ್ರಮಿಸಬೇಕು ಎಂದು ಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

    ದೆಹಲಿಗೆ ಯಮುನಾ ನದಿ ನೀರಿನ ಪಾಲನ್ನು ಬಿಜೆಪಿ ಆಡಳಿತವಿರು ಹರಿಯಾಣ ಸರ್ಕಾರ ನೀಡುತ್ತಿಲ್ಲ ಎಂದು ಆಡಳಿತಾರೂಢ ಎಎಪಿ ಆರೋಪಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap