ಬ್ಯಾಡಗಿ:
ಗ್ರಾಹಕರ ಜೀವ ವಿಮಾ ಪಾಲಿಸಿ (ಎಲ್‍ಐಸಿ) ನಂಬರ್ ಹಾಗೂ ಅದರಲ್ಲಿನ ವಿಳಾಸಕ್ಕೂ ಒಂದಕ್ಕೊಂದು ತಾಳೆಯಾಗದೇ ವಿಮೆ ಕಂತು ತುಂಬುವವರನ್ನೇ ದಿಕ್ಕು ತಪ್ಪು ತಪ್ಪುವಂತೆ ಮಾಡಿದ್ದು ಗೊತ್ತಿಲ್ಲದೇ ಹಣ ತುಂಬಿದ ವ್ಯಕ್ತಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿರುವ ಘಟನೆ ಇಲ್ಲಿನ ಜೀವ ವಿಮಾ ನಿಗಮದ ಕಛೇರಿಯಲ್ಲಿ ಬೆಳಕಿಗೆ ಬಂದಿದೆ.
ಮೋಸವಿಲ್ಲದೇ ಮರುಪಾವತಿ ಸೇರಿದಂತೆ, ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಯಾವುದೇ ಸಂದರ್ಭದಲ್ಲೂ ನಷ್ಟಕ್ಕೀಡು ಮಾಡದಂತೆ ವಿಶ್ವಾಸಾರ್ಹತೆ ಗಳಿಸುತ್ತಾ ವಿಶ್ವದ ಅತೀದೊಡ್ಡ ಜೀವವಿಮೆ ಸಂಸ್ಥೆಯಾಗಿ ಮುನ್ನುಗ್ಗುತ್ತಿರುವ ಬೆನ್ನಲ್ಲೇ ತನ್ನ ಖ್ಯಾತಿಗೆ ಕಪ್ಪು ಚುಕ್ಕೆ ಎಂಬಂತೆ ಇದೀಗ ಪಾಲಿಸಿ ನಂಬರ್ ಹಾಗೂ ವಿಳಾಸಕ್ಕೆ ತಾಳೆಯಾಗದಂತೆ ನೋಟಿಸ್‍ಗಳು ಬರುತ್ತಿರುವುದು ಕೆಲ ಗ್ರಾಹಕರನ್ನು ಆತಂಕಕ್ಕೀಡು ಮಾಡಿದೆ.
ತಪ್ಪಾಗಿ ನಮೂದಾಗುತ್ತಿರುವ ವಿಳಾಸ: ಇಲ್ಲಿಯವರೆಗೂ ಎಲ್‍ಐಸಿಯ ಎಲ್ಲ ವ್ಯವಹಾರಗಳು ಕೇವಲ 8 ಡಿಜಿಟ್‍ಗಳ ಪಾಲಸಿ ನಂಬರ್ ಮೆಲೆಯೇ ನಡೆಯುತ್ತಾ ಬಂದಿದೆ ಕೆಲವೊಮ್ಮೆ ಹುಟ್ಟಿದ ದಿನಾಂಕದ ಮೇಲೆಯೂ ನಮ್ಮ ಪಾಲಸಿ ನಂಬರಗಳನ್ನು ಪತ್ತೆ ಹಚ್ಚಬಹುದಾಗಿದೆ ಆದರೆ ಇದೀಗ ಮೊದಲಿದ್ದ ಎಲ್‍ಐಸಿ ಪಾಲಸಿ ನಂಬರ್ ನೋಡಿದರೇ ಅದರಲ್ಲಿರುವ ಇನ್ನಿತರ ವಿವರಗಳು ಸದರಿ ನಂಬರ್‍ಗೆ ಸಂಬಂಧಿಸಿದ ವ್ಯಕ್ತಿಗಳ ಬದಲಾಗಿ ಬೇರೋಬ್ಬ ವ್ಯಕ್ತಿಗಳ ಹೆಸರು ವಿಳಾಸ, ಊರು ಇನ್ನಿತರ ಮಾಹಿತಿಗಳು ಮುದ್ರಣವಾಗಿದ್ದು ಕಂಡು ಬಂದಿದೆ.
ಎರಡರಲ್ಲಿ ಯಾವುದು ಸರಿ..?: ಎಲ್‍ಐಸಿ ಪಾಲಸಿಯಲ್ಲಿ ನಂಬರ್ ತಪ್ಪಾಗಿದೆಯೋ ಅಥವಾ ವಿಳಾಸ ತಪ್ಪಾಗಿದೆಯೋ ಕೆಲ ಗ್ರಾಹಕರಿಗೆ ಇಂದಿಗೂ ಅರ್ಥವಾಗುತ್ತಿಲ್ಲ ಹೀಗಾಗಿ ಯಾವುದನ್ನು ಪರಿಗಣಿಸಿ ವ್ಯವಹರಿಸಬೇಕೋ ಅರ್ಥವಾಗುತ್ತಿಲ್ಲ, ಅದರಲ್ಲೂ ಅನಕ್ಷರಸ್ಥ ಇತ್ತೀಚೆಗೆ ಚಿದಾನಂದಪ್ಪ ಬಿ ಜಂಬೂರ ಎಂಬುವರ ಪಾಲಿಸಿ ನಂಬರ್ ಇರುವ ವಿಮೆ ತುಂಬು ನೋಟಿಸ್ ನನ್ನಿಮಾಬಿ ಮಕರಿ ಎಂಬುವರ ವಿಳಾಸಕ್ಕೆ ಹೋಗಿದೆ, ಅನಕ್ಷರಸ್ಥ ಮಹಿಳೆ ಅದನ್ನೇ ಹಿಡಿದುಕೊಂಡು ಎಲ್‍ಐಸಿ ಕಛೇರಿಗೆ ಬಂದಾಗ ಆಕೆಯ ಪಾಲಿಸಿ ನಂಬರ್ ಬೇರೆ ಇದೆ ಎಂಬುವಂತಹ ಅಂಶ ಬೆಳಕಿಗೆ ಬಂದಿದೆ..
ಕೋಟ್:
ನೋಟಸ್‍ನಲ್ಲಿರುವ ಪಾಲಸಿ ನಂಬರ ತಪ್ಪಾಗಿದೆ: ನನ್ನ ವಿಳಾಸಕ್ಕೆ ಬಂದಂತಹ ನೋಟಿಸ್‍ನಲ್ಲಿ ವಿಳಾಸ ಸರಿಯಿದೆಯಾದರೂ ಬೇರೋಬ್ಬರ ಪಾಲಿಸಿ ನಂಬರ್ ನಮೂದಾಗಿದೆ, ಅನಕ್ಷರಸ್ಥೆಯಾದ ನಾನುನೋಟಿಸ್ ಹಿಡಿದುಕೊಂಡು ಹಣ ತುಂಬಲು ಎಲ್‍ಐಸಿ ಕಛೇರಿಗೆ ಬಂದಾಗ ಅದರಲ್ಲಿದ್ದ ಪಾಲಿಸಿ ನಂಬರ್ ನನ್ನದಲ್ಲ ಎಂಬುದು ಸ್ಪಷ್ಟವಾಯಿತು, ಬಳಿಕ ಹುಟ್ಟಿದ ದಿನಾಂಕದೊಂದಿಗೆ ನನ್ನ ನಂಬರ್ ಪತ್ತೆ ಹಚ್ಚಿ ನನ್ನ ಪಾಲಸಿ ನಂಬರ್ ಕೊಟ್ಟರು, ಒಂದು ವೇಳೆ ಹಣ ಕಟ್ಟಿದ್ದರೇ ಬೆರೋಬ್ಬರಿಗೆ ಸಂದಾಯವಾಗುತ್ತಿತ್ತು ಇದರಿಂದ ಕೆಲಕಾಲ ಸದರಿ ವಿಷಯ ನನ್ನನ್ನು ಮುಜುಗರಕ್ಕೀಡು ಮಾಡಿತ್ತು.
ಕೋಟ್:
ಕಂಪ್ಯೂಟರ್ ದೋಷ ತಪ್ಪಾಗದಂತೆ ಎಚ್ಚರಿಕೆ ವಹಿಸಿದ್ದೇವೆ: ಎಲ್‍ಐಸಿಯ ಎಲ್ಲ ವ್ಯವಹಾರಗಳು ಪಾಲಿಸಿ ನಂಬರ ಮೆಲೆಯೇ ನಡೆಯುತ್ತಿದೆ, ಮುದ್ರಣ ದೋಷದಿಂದ ಅಲ್ಲೊಂದು ಇಲ್ಲೊಂದು ತಪ್ಪಾಗಿರಬಹುದು ಆದರೆ ಹಣ ತುಂಬಿಸಿಕೊಳ್ಳುವಾಗ ಪಾಲಸಿದಾರರ ಎಲ್ಲ ಮಾಹಿತಿಗಳನ್ನು ಮತ್ತೊಮ್ಮೆ ಪರಿಶೀಲಿಸಿಯೇ ಹಣ ಪಡೆದುಕೊಳ್ಳುತ್ತಿದ್ದು ಗ್ರಾಹಕರು ಭಯಪಡುವ ಅಗತ್ಯವಿಲ್ಲ, ಯಾವುದೇ ಕಾರಣಕ್ಕೂ ತುಂಬಿದ ಹಣಕ್ಕೆ ಸೇರಿದಂತೆ ಇನ್ನಿತರ ಎಲ್‍ಐಸಿ ವ್ಯವಹಾರಗಳಿಗೆ ಮೋಸವಾಗಲು ಬಿಡುವುದಿಲ್ಲ, ದೋಷವೆಂದು ಕಂಡು ಬಂದಲ್ಲಿ ತಕ್ಷಣದಲ್ಲೇ ಅದನ್ನು ಪತ್ತೆ ಹಚ್ಚಿ ಸರಿಪಡಿಸಲಾಗುತ್ತಿದೆ.. ವಿಶಾಲ್ ಜಿಂಗಾಡೆ ಎಲ್‍ಐಸಿ ಅಭಿವೃದ್ಧಿ ಅಧಿಕಾರಿ..
ಪ್ರೀಮಿಯಂ ಒಂದೇ ಆಗಿದ್ದರೇ ಕಷ್ಟವಾಗಲಿದೆ: ನೋಟಿಸ್‍ನಲ್ಲಿ ತಪ್ಪಾಗಿ ನಮೂದಾಗಿರುವ ಪಾಲಿಸಿ ನಂಬರ್ ಪ್ರೀಮಿಯಂ ಹಾಗೂ ತಪ್ಪಾದ ವಿಳಾಸಕ್ಕೆ ಹೋಗಿರುವವರ ಪ್ರೀಮಿಯಂ ಹಣ ಒಂದೇ ಆಗಿದ್ದಲ್ಲಿ ಅಥವಾ ಸೂಕ್ತ ಪರಿಶೀಲನೆ ಮಾಡದೇ ಹಣ ತುಂಬಿಸಿಕೊಂಡಿದ್ದೇಲ್ಲಿ ಹಣ ತುಂಬಿದಂತಹ ಗ್ರಾಹಕನಿಗೆ ಮೋಸವಾಗುವುದು ನಿಶ್ಚಿತ, ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಇಂತಹ ತಪ್ಪುಗಳಿಗೆ ಕಡಿವಾಣ ಹಾಕುವುದು ಸೂಕ್ತ.. ವಿಜಯಕುಮಾರ ಮಾಳಗಿ ಎಪಿಎಂಸಿ ನಿರ್ದೇಶಕ ಹಾಗೂ ಗ್ರಾಹಕ..
