25 ಮತಹಾಕಿಸಲು ಸಾಮಥ್ರ್ಯಹೀನರು ಪಕ್ಷದ ನಾಯಕರು: ಡಿ.ರೆಹಮಾನ್

ಹರಪನಹಳ್ಳಿ:

       ಸ್ಥಳೀಯ ವಾರ್ಡಗಳಲ್ಲಿ 25 ಮತಗಳನ್ನು ಹಾಕಿಸುವ ಸಾಮಥ್ರ್ಯ ಹೀನರು ಪಕ್ಷನಿಷ್ಠರಿಗೆ ಟಿಕೇಟ್ ತಪ್ಪಿಸುವ ಕುತಂತ್ರ ನಡೆಸಿ ಯಶಸ್ವಿಯಾದೆವೆಂದು ಬೀಗಿದರೆ ಮತದಾರ ತಕ್ಕ ಉತ್ತರ ನೀಡಿದ್ದಾರೆ ಎಂದು ನೂತನ ಪುರಸಭೆ ಪಕ್ಷೇತರ ಸದಸ್ಯ ಡಿ.ಅಬ್ದುಲ್ ರೇಹಮಾನ್ ಸಾಹೇಬ್ ಹೇಳಿದರು.

    ಪಟ್ಟಣದ ಹರಿಹರ ವೃತ್ತದಿಂದ ಹೊಸಪೇಟೆ ರಸ್ತೆ ಮೂಲಕ ಹಳೇ ಬಸ್‍ನಿಲ್ದಾಣದವೆಗೂ ಮೇರವಣಿಗೆ ನಡೆಸಿ ನಂತರ ಬಹಿರಂಗವಾಗಿ ಮಾತನಾಡಿದ ಅವರು. ಪಕ್ಷೇತರ ಅಭ್ಯರ್ಥಿಗಳ ಆಯ್ಕೆ ಮತದಾರರ ನಿರ್ಣಯ ಅರ್ಥಪೂರ್ಣವಾಗಿದೆ. ಮತದಾರರ ಮನವೊಲಿಸಲು ಸಾದ್ಯವಾಗದ ರಾಜ್ಯ ನಾಯಕರುಗಳು ವಿಫಲರಾದರು. ಪಕ್ಷನಿಷ್ಟರು ಯಾರು ಎಂದು ಮತದಾರರೇ ಗುರುತಿಸಿ ಪಕ್ಷೇತರರಾದ ನಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಮತದಾರರಿಗೆ ಕೃತಜ್ಞರಾಗಿರುತ್ತೇವೆ ಎಂದರು.

      ರಾಜ್ಯ ನಾಯಕರು ಎಂಬ ಹೆಸರಿನ ಸ್ಥಳೀಯ ನಾಯಕರು ಟಿಕೆಟ್ ತಪ್ಪಿಸಿದರೆ ಪಕ್ಷದ ಟೀಕೆಟ್ ಅವಶ್ಯವಿಲ್ಲ ಎಂದು ಮತದಾರರೇ ಬಿ.ಫಾರಂ ನೀಡಿ ಅಭೂತಪೂರ್ವ ಗೆಲುವು ನೀಡಿದಕ್ಕೆ ಅವರಿಗೆ ನಾವು ಸದಾ ಕೃತಜ್ಞರಾಗಿರುತ್ತೇವೆ. ಕಾಂಗ್ರೆಸ್ ಪಕ್ಷ ಯಾರಪ್ಪನ ಸೊತ್ತಲ್ಲ ಎಂದು ನಾಯಕರುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಾವು ಯಾರಿಗೂ ಹೆದರುವುದಿಲ್ಲ ಕಾನೂನು ಮೀರಿ ವರ್ತಿಸುವುದಿಲ್ಲ, ದೇವರು ಮತ್ತು ಮತದಾರರಿಗೆ ಮಾತ್ರ ಗೌರವ ನೀಡುತ್ತೇವೆ ಎಂದರು.

      13 ನೇ ವಾರ್ಡ್‍ನ ಪಕ್ಷೇತರ ನೂತನ ಸದಸ್ಯ ಡಿ.ರೆಹಮಾನ್ ಸಾಹೇಬ್, 23 ನೇ ವಾರ್ಡ್‍ನ ಸದಸ್ಯೆ ಸಿ.ಹನುಮಕ್ಕ ಬಸಪ್ಪ ನವರ ಜೊತೆಯಲ್ಲಿ 12 ನೇ ವಾರ್ಡ್‍ನ ಜೆಡಿಎಸ್ ಪಕ್ಷದ ಸದಸ್ಯೆ ಶಾಹೀನಾಭೀ ಮಾಬೂಸಾಬ್ ಕೈಜೋಡಿಸಿರುವುದು ಎರಡೂ ಪಕ್ಷಗಳಿಗೂ ಟಾಂಗ್ ನೀಡಿದಂತಾಗಿದೆ.ಮೆರವಣಿಗೆಯಲ್ಲ ವಾರ್ಡ್ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link