ರಕ್ಷಾಬಂಧನ

ಶಿಗ್ಗಾವಿ :

           ಪುರಾಣ ಕಾಲದಿಂದಲೂ ರಕ್ಷಾ ಬಂಧನಕ್ಕೆ ಅದರದೆಯಾದ ಮಹತ್ವ ಅಡಗಿದೆ. ಸಹೋದರಿಯರು ಸಹೋದರರಿಗೆ ಕಟ್ಟುವ ರಕ್ಷಾಬಂಧನ ಸಹೋದರಿಯರಿಗೆ ರಕ್ಷಣೆಯ ಸಂಕೇತವಾಗಿದ್ದು ಸಹೋದರತ್ವ ಭಾಂಧವ್ಯವನ್ನು ಗಟ್ಟಿ ಗೊಳಿಸುವ ಹಬ್ಬವಾಗಿದೆ.
ತಾಲೂಕಿನ ಬಂಕಾಪೂರ ಪಟ್ಟಣದಲ್ಲಿ ರವಿವಾರ ನೂಲುಹುಣ್ಣಿಮೆ ಅಂಗವಾಗಿ ಸಹೋದರಿಯರು ಸಹೋದದರ ಕೈಗೆ ರಾಖಿಯನ್ನು ಕಟ್ಟಿ ಹಣೆಗೆ ತಿಲಕವಿಟ್ಟು ಸಿಹಿ ತಿನ್ನಿಸಿ ಆರತಿ ಬೆಳಗಿ ಮಾಡುವ ಕಾಯಕದಲ್ಲಿ ಎಸಸ್ಸು ಸಿಗಲಿ ಎಂದು ಆ ದೇವರನ್ನು ಪ್ರಾರ್ಥಿಸಿದರೆ ಸಹೋದರರು ಸಹೋದರಿಯರಿಗೆ ಉಡುಗೋರೆ ನೀಡಿ ನಿನ್ನ ರಕ್ಷಣೆಯ ಹೋಣೆ ನನ್ನದು ನೂರು ವರುಷ ಸುಖವಾಗಿ ಬಾಳು ಎಂದು ಹಾರೈಸಿದರು.
ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬರುವ ನೂಲುಹುಣ್ಣಿಮೆಯಂದು ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಒಡ ಹುಟ್ಟಿದ ಸಹೋದರರಲ್ಲದೇ ನೇರೆ,ಹೋರೆಯಮನೆಯವರಿಗೂ, ಶಾಲಾ ಕಾಲೇಜುಗಳಲ್ಲಿಯೂ ಕೂಡಾ ರಾಖಿಯನ್ನು ಕಟ್ಟಿ ದುರಾಲೋಚನೆಯನ್ನು ಬಿಟ್ಟು ಸಹೋದರತ್ವ ಭಾಂಧವ್ಯದಿಂದ ನೆಮ್ಮದಿ ಬದುಕು ಸಾಗಿಸೋಣ ಎಂಬ ಸಂದೇಶ ಸಾರುವ ಬಾರತೀಯ ಸಂಸ್ಕøತಿ ಪ್ರತಿಬಿಂಬದ ಹಬ್ಬವೇ ರಕ್ಷಾ ಬಂಧನ ಹಬ್ಬವಾಗಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link