ಬ್ಯಾಡಗಿ:
ಶಿಕ್ಷಣದಲ್ಲಿ ದುರ್ಬಲರು ಮುಂದಿನ ದಿನಗಳಲ್ಲಿ ದೇಶಕ್ಕೆ ಹೊರೆಯಾಗುವುದು ನಿಶ್ಚಿತ, ಇನ್ನೂ ಶೈಕ್ಷಣಿಕ ಸಬಲರು ವಿದೇಶಗಳಲ್ಲಿ ಬೀಡು ಬಿಟ್ಟಿದ್ದಾರೆ ಹೇರಳವಾದ ಮಾನವ ಸಂಪನ್ಮೂಲವಿದ್ದರೂ ದೇಶದ ಸುಮಾರು 22 ಲಕ್ಷ ಮಕ್ಕಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗಿರುವುದು ವಿಪರ್ಯಾಸದ ಸಂಗತಿ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಖೇದ ವ್ಯಕ್ತಪ ಡಿಸಿದರು.
ಪಟ್ಟಣದ ಎಸ್.ಎಸ್.ಪಿ.ಎನ್.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶಾಲಾ ಸಂಸತ್ತು ಉದ್ಘಾಟಿಸಿ ಅವರು ಮಾತನಾಡಿದರು. ಕಡ್ಡಾಯ ಶಿಕ್ಷಣ ನಿಯಮದಡಿಯಲ್ಲಿ ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ವನ್ನು ಪಡೆಯಬೇಕಾಗಿದೆ, ಆದರೆ ಸಮಾಜದಲ್ಲಿ ನಡೆಯುತ್ತಿರುವ ಸ್ವೇಚ್ಚಾಚಾರದ ಜೀವನ ಶೈಲಿಯಿಂದ ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಮಕ್ಕಳನ್ನು ಕೀರಿಯ ವಯಸ್ಸಿನಲ್ಲಿಯೇ ಅಪರಾಧ ಜಗತ್ತಿಗೆ ತಳ್ಳಲಾಗುತ್ತಿರುವುದು ಖೇದದ ಸಂಗತಿ ಎಂದರು.
ಸಾತ್ವಿಕ ಬದುಕು ಹಾಗೂ ನೀತಿಪಾಠ ಹೇಳಿಕೊಡಿ:ಇತ್ತೀಚಿನ ದಿನಗಳಲ್ಲಿ ಮೊಬೈಲ್, ಇಂಟರನೆಟ್ ಸೇರಿದಂತೆ ಇನ್ನಿತರ ತಂ ತ್ರಾಂಶಗಳ ಹಾವಳಿಯಿಂದ ಮಕ್ಕಳ ಮನಸ್ಸು ವಿಚಲಿತವಾಗುತ್ತಿದ್ದು, ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಸಾತ್ವಿಕ ಬದುಕು, ದೇಶಪ್ರೇಮ ಇನ್ನಿತರ ನೀತಿಪಾಠಗ ಳನ್ನು ಹೇಳಿಕೊಡುವಂತಹ ಕೆಲಸವಾಗಬೇಕಿದೆ ಎಂದರು.
ಬದುಕಿನುದ್ದಕ್ಕೂ ಬರಲಿದೆ ಶಿಕ್ಷಣ: ವರ್ತಕ ಜಯದೇವಪ್ಪ ಕಬ್ಬೂರ ಮಾತನಾಡಿ, ಶೈಕ್ಷಣಿಕ ಹಿನ್ನೆಡೆಗೆ ದೇಶದಲ್ಲಿರುವ ಬಡತನ ಒಂದು ಕಾರಣ, ಆರ್ಥಿಕವಾಗಿ ಸಬಲರಾದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೂ ಸಹ ಪ್ರತಿಭಾ ಪಲಾಯನದಂತಹ ಕಾರ್ಯಕ್ಕೆ ಕೈಹಾಕಿದ್ದು ವಿದೇಶಗಳಲ್ಲಿ ನೆಲೆಸಿದ್ದಾರೆ, ಹೀಗಾಗಿ ಶಿಕ್ಷಣವನ್ನು ಒಂದು ಪ್ರವೃತ್ತಿ ಅಥವಾ ಕರ್ತವ್ಯ ಎಂದು ಭಾವಿಸಿ ಕೊಳ್ಳುವುದು ಸೂಕ್ತ ಯಾರೂ ಕಸಿದುಕೊಳ್ಳಲಾಗದ ಶಿಕ್ಷಣವು ಬದುಕಿನುದ್ದಕ್ಕೂ ಸಹಾಯಕ್ಕೆ ಬರಲಿದೆ ಎಂದರು.
ಬದುಕನ್ನು ವಿಶ್ವಾಸಕ್ಕೆ ತರಲಿದೆ: ಸಂಸ್ಥೆಯ ಛೇರಮನ್ ಚಂದ್ರಣ್ಣ ಶೆಟ್ಟರ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಸರ್ಕಾರದ ಕೆಲ ಬಿಗಿಯಾದ ಕಾನೂನುಗಳು ಹಣವಂತರ ಬದುಕನ್ನೂ ಕೂಡ ಅಭದ್ರತೆಯತ್ತ ಸಾಗುವಂತೆ ಮಾಡಿದೆ, ಹೀಗಾಗಿ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುವ ಮೂಲಕ ಬದುಕನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವಂತೆ ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪ್ರಾಚಾರ್ಯ ಎಂ.ಕೆ.ಬಳ್ಳಾರಿ, ಬಸವರಾಜ ಸಂಕಣ್ಣನವರ, ವಿರೇಂದ್ರ ಶೆಟ್ಟರ, ಶಂಕ್ರಣ್ಣ ಮಾತನವರ, ಈರಣ್ಣ ಅಕ್ಕಿ, ರವೀಂದ್ರ ಪಟ್ಟಣಶೆಟ್ಟಿ, ಶಿವಣ್ಣ ಶೆಟ್ಟರ, ಎಂ.ಕೆ.ಹೊಡ್ಮನಿ, ಬಿ.ಎಫ್.ದೊಡ್ಮನಿ ಸಿದ್ದು ವಾಲಿಶೆಟ್ಟರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ