ಗುತ್ತಲ:
ಸಮೀಪದ ನೆಗಳೂರಿನ ಸಂಸ್ಥಾನ ಹಿರೇಮಠದ ಲಿಂ.ಷ.ಬ್ರ.ಶಿವಾನಂದ ಶಿವಾಚಾರ್ಯರ 11 ನೇ ವರ್ಷದ ಪುಣ್ಯಸ್ಮರಣೋತ್ಸವವು ವಿಜೃಭಣೆಯಿಂದ ಜರುಗಿತು. ಅಂದು ಬೆಳಿಗ್ಗೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರಾರು ಬಿಲ್ವಾಷ್ಠೋತ್ತರ, ಮಹಾಮಂಗಳಾರತಿ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ನೆಗಳೂರು ಹಿರೇಮಠದ ಗುರುಶಾಂತ ಶಿವಾಚಾರ್ಯರರು ಮಾತನಾಡಿದ ಅವರು, ಲಿಂ. ಶಿವಾನಂದ ಶಿವಾಚಾರ್ಯರು ತಮ್ಮ ಜೀವತಾವಧಿಯಲ್ಲಿ ಸಮಾಜದದಲ್ಲಿ ಆಚಾರ ವಿಚಾರ ಹಾಗೂ ಸಂಸ್ಕಾರದ ಬೀಜ ಬಿತ್ತಿ ಬೆಳೆಸುವ ಮೂಲಕ ಭಕ್ತಾಧಿಗಳಲ್ಲಿ ವೀರಶೈವ ಧರ್ಮದ ಸಾರವನ್ನು ತಿಳಿಸುತ್ತಾ, ಧರ್ಮದ ಆಧಾರದ ಮೇಲೆ ಜೀವನ ನಡೆಸಲು ಮಾರ್ಗದರ್ಶನ ನೀಡುವ ಮೂಲಕ ಭಕ್ತಾಧಿಗಳ ಮಾನಸಕ್ಕೆ ಹತ್ತಿರವಾದವರು ಶಿವಾನಂದ ಶಿವಾಚಾರ್ಯರರ ಬದುಕು ನಮಗೆಲ್ಲ ಆದರ್ಶವಾಗಿದೆ ಎಂದು ಹೇಳಿದರು.
ಸರಳತೆ ಸಮತಾಭಾವದ ಮೂಲಕ ವಿವಿಧ ಭಾಗಗಳಲ್ಲಿ ಲಿಂಗ ದೀಕ್ಷಾ ಸಂಸ್ಕಾರ ನೀಡುವ ಮೂಲಕ ಭಕ್ತಾಧಿಗಳಲ್ಲಿ ವೀರಶೈವ ಪರಂಪರೆಯ ಅರಿವು ಮೂಡಿಸುವುದರ ಜೊತೆಗೆ ಸಾಮರಸ್ಯ ಬದುಕನ್ನು ಸಾಗಿಸಲು ಸಲಹೆಯನ್ನು ನೀಡಿದರು. ನುಡಿದಂತೆ ನಡೆದು ಸ್ವಾಮಿತ್ವದ ಬದುಕನ್ನು ಸಾರ್ಥಕಗೊಳಿಸಿದ ಕಿರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ: ಶಂಬಣ್ಣ ಕುಪ್ಪೇಲೂರ, ಪಕ್ಕೀರಶೆಟ್ರ ವಿಭೂತಿ, ವೀರಣ್ಣ ವಿಭೂತಿ, ಶಿವಬಸಪ್ಪ ಅಂಗಡಿ, ಶಿವಾನಂದ ಹಡಪದ, ಕುಮಾರ ಕಟ್ಟೆಪ್ಪನವರ, ಕುಮಾರ ಹುಲೇಪ್ಪನವರ, ಮೃತ್ಯುಂಜಯ ಹುಚ್ಚಬಸಪ್ಪನವರ, ಶಿವಲಿಂಗ ಸೇರಿದಂತೆ ವಿವಿಧ ಗ್ರಾಮಗಳ ಭಕ್ತಾಧಿಗಳು ಭಾಗವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ