ಮಂಗಳೂರು : ಕಡಲ ಅಲೆಗಳಿಗೆ ಸಿಲಕಿ 2 ಸಾವು

ಮಂಗಳೂರು: 

     ಸೋಮೇಶ್ವರ ಕಡಲತೀರದಲ್ಲಿ ಮುಳುಗಿ ಸಾವಿಗೀಡಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವಗಳನ್ನು ಭಾನುವಾರ ಅದೇ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಂಜತ್ತೂರು ಅಡ್ಕದ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲು ನಿವಾಸಿ ಯುವರಾಜ್ (17) ಶನಿವಾರ ಸಂಜೆ ಕಡಲ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದರು.

    ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನೊಂದಿಗೆ ಕರಾವಳಿ ಪೊಲೀಸರು ಇಬ್ಬರು ವಿದ್ಯಾರ್ಥಿಗಳ ಶವಗಳನ್ನು ಪತ್ತೆ ಮಾಡಿ, ಹೊರಗೆ ತಂದಿದ್ದಾರೆ.ಶನಿವಾರ ರಾತ್ರಿ ಉಚ್ಚಿಲ ಸಮೀಪದ ಬೆಟ್ಟಪಾಡಿ ಪ್ರದೇಶದಲ್ಲಿ ಸ್ಥಳೀಯ ಈಜುಗಾರರ ಸಹಾಯದಿಂದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.

    ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ