ಪೊಲೀಸ್‌ ಎನ್‌ ಕೌಂಟರ್‌ ನಲ್ಲಿ 3 ನಕ್ಸಲರ ಬಲಿ….!

ಗಡ್ಚಿರೋಲಿ: 

    ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ನಕ್ಸಲೀಯರ ಪೆರಿಮಿಲಿ ದಳದ ಕೆಲವು ಸದಸ್ಯರು ಭಮ್ರಗಡ ತಾಲೂಕಿನ ಕಾಟ್ರಘಟ್ಟ ಗ್ರಾಮದ ಬಳಿ ಅರಣ್ಯದಲ್ಲಿ ಬೀಡುಬಿಟ್ಟ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ಅವರು ಹೇಳಿದ್ದಾರೆ.

    ಗಡ್ಚಿರೋಲಿ ಪೊಲೀಸರ ವಿಶೇಷ ಕೊಂಬ್ಯಾಟ್ ವಿಭಾಗವಾದ ಸಿ-60 ಕಮಾಂಡೋಗಳ ಎರಡು ತುಕಡಿಗಳನ್ನು ತಕ್ಷಣವೇ ಈ ಪ್ರದೇಶದಲ್ಲಿ ಶೋಧಕ್ಕಾಗಿ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

    ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲೀಯರು ಮನಬಂದಂತೆ ಗುಂಡು ಹಾರಿಸಿದರು, ಅದಕ್ಕೆ ಸಿ-60 ಸಿಬ್ಬಂದಿ ಪ್ರತಿದಾಳಿ ನಡೆಸಿದರು ಎಂದು ಅಧಿಕಾರಿ ಹೇಳಿದ್ದಾರೆ.

    ಗುಂಡಿನ ದಾಳಿ ನಿಲ್ಲಿಸಿದ ನಂತರ, ಸ್ಥಳದಲ್ಲಿ ಪುರುಷ ಮತ್ತು ಇಬ್ಬರು ಮಹಿಳಾ ನಕ್ಸಲೀಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಲ್ಲಿ ಒಬ್ಬರು ಪೆರಿಮಿಲಿ ದಳದ ಉಸ್ತುವಾರಿ ಮತ್ತು ಕಮಾಂಡರ್ ವಾಸು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಸ್ಥಳದಲ್ಲಿ ಎಕೆ-47 ರೈಫಲ್, ಕಾರ್ಬೈನ್, ಐಎನ್ಎಸ್ಎಎಸ್ ರೈಫಲ್, ನಕ್ಸಲ್ ಸಾಹಿತ್ಯ ಮತ್ತು ವಸ್ತುಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.ಈ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap