ರೂಪಾಂತರಿ ಕೊರೊನಾ ; ಬೆಂಗಳೂರಲ್ಲೇ ಮೂವರಿಗೆ ಪಾಸಿಟಿವ್..!

ಬೆಂಗಳೂರು: 

      ಇಂಗ್ಲೆಂಡ್ ನಿಂದ ನಗರಕ್ಕೆ ಬಂದಿರುವವರ ಪೈಕಿ ಮೂವರಿಗೆ ಬ್ರಿಟನ್‌ ರೂಪಾಂತರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

      ಕೇಂದ್ರ ಆರೋಗ್ಯ ಇಲಾಖೆ ಈ ಮಾಹಿತಿ ನೀಡಿದ್ದು, ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದ್ದು ಬ್ರಿಟನ್‍ನಿಂದ ರಾಜ್ಯಕ್ಕೆ ಮರಳಿದ್ದವರ ಪೈಕಿ ಮೂವರಲ್ಲಿ ರೂಪಾಂತರಿ ಕೊರೊನಾವಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

     ಇಂಗ್ಲೆಂಡ್ ನಿಂದ ಬಂದ 2,127 ಪ್ರಯಾಣಿಕರ ಪೈಕಿ 1,766 ಮಂದಿಯನ್ನು ಪತ್ತೆಮಾಡಿ ಪರೀಕ್ಷೆಗೊಳಪಡಿಸಲಾಗಿತ್ತು. 27 ಮಂದಿಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಈ ಪೈಕಿ 15 ಮಂದಿ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಇದ್ದಾರೆ. ಇವರಿಗೆ ತಗುಲಿರುವುದು ಬ್ರಿಟನ್ ರೂಪಾಂತರವೇ ಎಂಬುದನ್ನು ತಿಳಿಯಲು ನಿಮ್ಹಾನ್ಸ್ ನಲ್ಲಿ ವಂಶವಾಹಿ ಪರೀಕ್ಷೆ ನಡೆಯುತ್ತಿದೆ. ಇಂಗ್ಲೆಂಡ್‌ನಿಂದ ಬಂದು, ಕೋವಿಡ್‌ಗೆ ತುತ್ತಾದವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 36 ಜನರನ್ನು ಬಿಬಿಎಂಪಿ ಗುರುತಿಸಿದೆ. ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

     ಬ್ರಿಟನ್ ನಿಂದ ಭಾರತಕ್ಕೆ ಬಂದು ಒಟ್ಟು 6 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಪೈಕಿ ಮೂವರು ಬೆಂಗಳೂರಿನ ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಬ್ಬರು ಹೈದರಾಬಾದ್‍ನ ಸಿಸಿಎಂಪಿಯಲ್ಲಿದ್ದಾರೆ, ಒಬ್ಬರು ಎನ್‍ಐವಿ ಪುಣೆಯಲ್ಲಿದ್ದಾರೆ. ಈ ಎಲ್ಲಾ ರೋಗಿಗಳು ಇತ್ತೀಚೆಗಷ್ಟೇ ಬ್ರಿಟನ್‍ನಿಂದ ಭಾರತಕ್ಕೆ ವಾಪಸ್ಸಾಗಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap