ಮಧುಗಿರಿ :
ಕೃಷಿ ಮಾರುಕಟ್ಟೆ ಯ ಗೋದಾಮಿನಲ್ಲಿ ಸಂಗ್ರಹವಾಗಿದ್ದ ಸುಮಾರು 300 ಚೀಲದಷ್ಟು ಶೇಂಗಾ ಬೀಜದ ಚೀಲಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಖಾಸಗಿ ಟೇಡ್ರರ್ ಗೆ ಸೇರಿದ ಮಾರುಕಟ್ಟೆಯ ಆವರಣದಲ್ಲಿ ಗೋದಾಮವನ್ನು ಹೊಂದಿದ್ದು ಪ್ರತಿ ದಿನ ರೈತರಿಂದ ಖರೀದಿಸಿದ ಕಡಲೆಕಾಯಿಯ ಚೀಲಗಳನ್ನು ಹಿಡಲಾಗುತ್ತಿತ್ತು.
ಟೇಡ್ರರ್ ನಲ್ಲಿ ಸುಮಾರು 25 ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬುವವನು ಮಾಲೀಕರಿಗೆ ತಿಳಿಯದಂತೆ ಗೋದಾಮಿನಲ್ಲಿನ ಚಿಕ್ಕ ಕಿಟಕಿಯನ್ನು ಮುರಿದು ಒಳ ನುಸುಳಿ ಮುಖ್ಯದ್ವಾರವನ್ನು ತೆಗೆದು. ಕಡಲೆ ಕಾಯಿ ಚೀಲಗಳನ್ನು ಕಳೆದ ಒಂದು ವಾರದಿಂದ ವಾಹನ ದ ಮೂಲಕ ಶಿರಾ ಪಟ್ಟಣದ ಖರೀದಿದಾರರಿಗೆ ಮಾರಾಟ ಮಾಡಿದ್ದನೆಂದು ಹಾಗೂ ಮುಂಗಡವಾಗಿ 50 ಸಾವಿರ ಹಣ ಪಡೆದು ಮಂಜುನಾಥ್ ಮಧುಗಿರಿಗೆ ವಾಪಸ್ ಆಗಿದ್ದನು.
ಶಿರಾದ ಅಂಗಡಿ ಮಾಲೀಕ ಮಧುಗಿರಿಯ ಮಾಲೀಕರಿಗೆ ವಿಷಯ ತಿಳಿಸಿದಾಗ ಕಡಲೆ ಕಾಯಿ ಕಳ್ಳತನ ವಾಗಿರುವುದು ಬೆಳಕಿಗೆ ಬಂದಿದ್ದು ಆರೋಪಿಯು ತಮ್ಮ ಮಾಲೀಕರಿಗೆ ಉಳಿದ 169 ಚೀಲ ಕಡಲೆ ಕಾಯಿ ಮತ್ತು ಎರಡು ಲಕ್ಷ ರೂ ಹಣ ನೀಡಲು ಮುಂದಾಗಿದ್ದು ಮಾರುಕಟ್ಟೆಯ ಹಮಾಲರು ಹಾಗೂ ಮಾಲೀಕರು ರಾಜಿ ಪಂಚಾಯತಿ ಯ ಸಭೆ ನಡೆಸಿ ಪ್ರಕರಣಕ್ಕೆ ನಾಂದಿ ಹಾಡಿದ್ದಾರೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ