ಮೇ.26ಕ್ಕೆ ರಸ್ತೆಗಿಳಿಯಲಿವೆ ಮಹೇಂದ್ರ ನೂತನ ಮಿನಿ ಎಸ್‌ ಯು ವಿ

ಬೆಂಗಳೂರು:

   ಭಾರತದ ಅಟೋ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಹಿಡಿತವನ್ನು ಹೊಂದಿರುವ ಮಹೇಂದ್ರ ಆಂಡ್‌ ಮಹೇಂದ್ರ ಕಂಪನಿ ಈ ತಿಂಗಳು ತನ್ನ ನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಪ್ರಿ ಬುಕ್ಕಿಂಗ್ ಆರಂಭವಾಗಿದೆ.

    ಕೇವಲ 7.49 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಈ ಕಾಂಪ್ಯಾಕ್ಟ್ SUV ಕ್ರೇಜ್ ಹೆಚ್ಚಾಗಿದೆ. ಗ್ರಾಹಕರು ಸಹ ಈ ಕಾರ್‌ ಬುಕ್ ಮಾಡಿಕೊಳ್ಳಲು ಮುಂದೆ ಬರುತ್ತಿದ್ದಾರೆ ಎಂದು ಕಂಪನಿಯು ಹೇಳಿಕೊಂಡಿದೆ. ಇದೇ ತಿಂಗಳ 26 ರಂದು ಮಹೀಂದ್ರಾ XUV 3XO ನ ವಿತರಣೆ ಆರಂಭವಾಗಲಿದೆ. ಈ ಕಾರು ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್‌ಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.

    ಮಹೇಂದ್ರಾ ಕಾಂಫ್ಯಾಕ್ಟ್‌ ಎಸ್‌ಯುವಿಯಲ್ಲಿ ಮೂರು ರೀತಿಯ ಇಂಜಿನ್‌ ಆಕ್ಷನ್ ನೀಡಿದೆ. 110 PS ಪವರ್ ಮತ್ತು 200 Nm ಟಾರ್ಕ್, 130 PS ಪವರ್ ಮತ್ತು 230 Nm ಟಾರ್ಕ್ ಮತ್ತು 117 PS ಪವರ್ ಮತ್ತು 300 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತವೆ. XUV 3XO ನ ಮೈಲೇಜ್ 21.2 kmpl ವರೆಗೆ ಇರುತ್ತದೆ ಎಂದು ಕಂಪನಿ ಸ್ಪಷ್ಟ ಪಡಿಸಿದೆ.

   ಮಹೀಂದ್ರಾ XUV 3XO 35 ಗುಣಮಟ್ಟದ ಸುರಕ್ಷತಾ ವ್ಯವಸ್ಥೆಗಳನ್ನು ಈ ಕಾರಿನಲ್ಲಿ ನೀಡಿದೆ. 6 ಏರ್ ಬ್ಯಾಗ್‌, ಡಿಸ್ಕ್ ಬ್ರೇಕ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಸೀಟ್‌ ಬೇಲ್ಟ್‌ಗೆ ಮೂರು ಪಾಯಿಂಟ್‌, ಸೀಟ್‌ ಬೆಲ್ಟ್‌ ಹಾಕಿಕೊಳ್ಳದೇ ಇದ್ದಾಗ ಚಾಲಕನನ್ನು ಎಚ್ಚರಿಸುವ ಸುರಕ್ಷತಾ ವೈಶಿಷ್ಠ್ಯಗಳು ಈ ಕಾರಿನಲ್ಲಿ ಲಭ್ಯ.

    ಮಹೀಂದ್ರ XUV 3XO ತುಂಬಾ ರಿಚ್ ಆಗಿ ಕಾಣುತ್ತಿದೆ. ಇದನ್ನು ಎಂಟು ಬಣ್ಣಗಳಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಈ ಹೊಸ ಕಾರಿನಲ್ಲಿ ಪಿಯಾನೋ ಬ್ಲ್ಯಾಕ್ ಫಿನಿಶ್‌ನೊಂದಿಗೆ ದಪ್ಪ ಮತ್ತು ಹೊಸ ಗ್ರಿಲ್, C- ಆಕಾರದ DRL ಗಳು, LED ಹೆಡ್‌ಲ್ಯಾಂಪ್‌ಗಳು ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ. ಇನ್ನು ಈ ಕಾರ್‌ನ ಲುಕ್‌ನ್ನು 17 ಇಂಚಿನ ಅಲಾಯ್‌ ವೀಲ್‌ಗಳು ಹೆಚ್ಚಿಸಿವೆ.

   ಮಹೀಂದ್ರಾ XUV 3XO ಇಂಟಿರಿಯರ್ ಡಿಸೈನ್‌ ಸಖತ್ ಆಗಿದೆ. ಇದರ ಕ್ಯಾಬಿನ್ ಪ್ರೀಮಿಯಂ ಆಗಿ ಕಾಣುತ್ತಿದೆ. ಸಾಫ್ಟ್ ಟಚ್ ಲೆಥೆರೆಟ್ ಡ್ಯಾಶ್‌ಬೋರ್ಡ್ ಹೊಂದಿದ್ದು, ಆಸನಗಳ ವ್ಯವಸ್ಥೆಯ ಮೇಲೂ ಕಂಪನಿ ಗಮನ ಹರಿಸಿ ಉತ್ತಮ ದರ್ಜೆಯ ಆಸನಗಳನ್ನೇ ನೀಡಿದೆ. ಹೀಗಾಗಿ ಈ ಕಾರ್‌ನಲ್ಲಿ ಕುಳಿತುಕೊಳ್ಳುವ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ.

ಈ ಕಾರಿನಲ್ಲಿಇದು ಸ್ಕೈರೂಫ್ ನೀಡಲಾಗಿದೆ
10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.
10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ ನೀಡಲಾಗುತ್ತದೆ.
ವಾಹನ ಚಾಲನೆ ಮಾಡುವಾಗ ಕಾಲ್‌ ರಿಸೀವ್ ಮಾಡುವ ವ್ಯವಸ್ಥೆ
ವೈರ್‌ಲೆಸ್ ಚಾರ್ಜರ್
65 ವ್ಯಾಟ್ ಯುಎಸ್‌ಬಿ ಟೈಪ್-ಸಿ ಚಾರ್ಜರ್
ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್
ಹಿಂಭಾಗ ಸೀಟ್‌ಗಳಲ್ಲಿ ಆರ್ಮ್‌ರೆಸ್ಟ್

 

Recent Articles

spot_img

Related Stories

Share via
Copy link
Powered by Social Snap