ಚಾಮರಾಜನಗರ
ಜನ ಎಷ್ಟು ಧನ ದಾಹಿಗಳಅಗಿದ್ದಾರೆ ಎಂದರೆ ಪ್ರಾಣಿಗಳ ದೇಹದ ಭಾಗಗಳು ಕೊಟ್ಯಾಂತರ ರೂಪಾಯಿ ಬೆಲೆ ಬಾಳುತ್ತವೇ ಎಂಬ ಕಾರಣಕ್ಕೆ ಪ್ರಾಣಿಹಿಂಸೆ ಶುರು ಮಾಡಿದರು ಈಗ ಜಗತ್ತಿ ಅತಿ ದೊಡ್ಡ ಸಸ್ತನಿ ಎಂದು ಕರೆಯುವ ತಿಮಿಂಗಿಲ ನೀರಿನಲ್ಲಿ ಮಾಡುವ ವಾಂತಿಯನ್ನು ಬೇರೆ ಬೇರೆ ಕಾರಣಕ್ಕಾಗಿ ಬಳಸುವ ವಿಚಾರ ತಿಳಿದು ಬಂದಿದೆ ಮತ್ತು ಅದರ ಒಂದು ಕೆ.ಜಿ. ವಾಂತಿ ಕೋಟಿ ಬೆಲೆ ಬಾಳಲಿದೆ ಎಂದು ಹಲವರು ಹೇಳುತ್ತಾರೆ.
ಹೀಗೆ ಬೆಳೆ ಬಾಳಲಿದೆ ಎನ್ನುವ ತಿಮಿಂಗಲದ ಕೆಜಿಗಟ್ಟಲೇ ವಾಂತಿ ಯನ್ನು (ಆಂಬರ್ ಗ್ರೀಸ್) ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕೊಳ್ಳೇಗಾಲದ ಬಸ್ ನಿಲ್ದಾಣದ ಸಮೀಪ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಲ್ಲಮಜ್ಜಿ ರಸ್ತೆಯ ಕೆ.ಬಿ.ವಿರೂಪಾಕ್ಷ (62), ಕೇರಳ ಮೂಲದ ಶಂಸುದ್ಧೀನ್ ಒತಿಯೋತ್(48), ತ್ರೆಸೀಮಾ ವರ್ಘಸೆ ಅಲಿಯಾಸ್ ಸುಜಾ(55) ಹಾಗೂ ಸಜಿ ಸುಬಾಸ್(41) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಬೆಂಗಳೂರಿನ ಕಡೆಯ ಕಾಳಸಂತೆಯಲ್ಲಿ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡುತ್ತಿದ್ದರು. ಈ ಖದೀಮರು ಕಾರಿನಲ್ಲಿ ತಿಮಿಂಗಿಲದ ವಾಂತಿಯನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡ ಅರಣ್ಯ ಸಂಚಾರಿ ದಳದ ಪೊಲೀಸರು, ಕೊಳ್ಳೇಗಾಲದ ಬಸ್ ನಿಲ್ದಾಣದ ಸಮೀಪ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








