2 ಲಕ್ಷ ದಾಟಿದ ನಿರುದ್ಯೋಗ ಭತ್ಯೆ ಅರ್ಜಿಗಳ ಸಂಖ್ಯೆ..!

ವಾಷಿಂಗ್ಟನ್:

   ಅಮೆರಿಕ ಸರ್ಕಾರದಿಂದ ನೀಡಲ್ಪಡುವ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಕಳೆದ ವಾರ ಗಣನೀಯ ಏರಿಕೆಯಾಗಿದೆ ಎಂದು ಅಮೆರಿಕ ಕಾರ್ಮಿಕ ಅಂಕಿ-ಅಂಶ ಇಲಾಖೆ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

    ಕಳೆದ ವಾರ ಅಮೆರಿಕದಲ್ಲಿ ನಿರುದ್ಯೋಗ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಹಿಂದಿನ ವಾರಕ್ಕೆ ಹೋಲಿಸಿದರೆ 6,000 ದಷ್ಟು ಏರಿಕೆಯಾಗಿದ್ದು, 211,000ಕ್ಕೆ ತಲುಪಿದೆ ಎಂದು ಇಲಾಖೆ ತಿಳಿಸಿದೆ. 

    ಹಿಂದಿನ ವಾರದ ಪ್ರಮಾಣವನ್ನು 1,000ರಷ್ಟು ಹೆಚ್ಚಿಸಿ 204,000 ರಿಂದ 205,000 ಕ್ಕೆ ಪರಿಷ್ಕರಿಸಲಾಗಿದೆ ಎಂದು ಬ್ಯೂರೋ ತಿಳಿಸಿದೆ.ಕಳೆದ ಡಿಸೆಂಬರ್ ನಲ್ಲಿ ಸಂಸ್ಥೆಗಳು 1,45,000 ಜನರಿಗೆ ಉದ್ಯೋಗ ನೀಡಿದ್ದಾರೆ ಇಷ್ಟಾದರು ನಿರುದ್ಯೋಗದ ಪ್ರಮಾಣ ಶೇ 3.5 ರಷ್ಟಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link