ಸಿಲಿಂಡರ್‌ ಸೋರಿಕೆ : ಉಸಿರುಗಟ್ಟಿ 4 ಜನರ ಸಾವು ….!

ಮೈಸೂರು: 

    ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ.

    ಬಟ್ಟೆಗಳ ಐರನ್‌ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿ (45), ಮಂಜುಳಾ (39), ಅರ್ಚನಾ (19) ಮತ್ತು ಸ್ವಾತಿ (17) ಮೃತಪಟ್ಟವರು. ಮೇಲ್ನೋಟಕ್ಕೆ ಸಿಲಿಂಡರ್‌ ಸೋರಿಕೆಯಿಂದ ಈ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

   ಮಕ್ಕಳು ಬೇರೆ ಬೇರೆ ಕಡೆಯಲ್ಲಿ ಮಲಗಿದ್ದರು, ಅಪ್ಪ ಅಮ್ಮ ರೂಮಿನಲ್ಲಿ ಮಲಗಿದ್ದರು, ಕಳೆದ ಎರಡು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ ಕಾಲೇಜಿಗೆ ಬಾರದಿದ್ದ ಕಾರಣ ಸ್ನೇಹಿತರು ಮನೆಗೆ ಬಂದು ನೋಡಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. 

   ಎರಡು ದಿನಗಳ ಹಿಂದೆ ಅಂದರೆ ಸೋಮವಾರವೇ ನಾಲ್ವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ, ಕುಟುಂಬವೂ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಮೂಲದವರಾಗಿದ್ದು, 30 ವರ್ಷದಿಂದಲೂ ಮೈಸೂರಿನಲ್ಲೇ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

   ಭಾನುವಾರ ಕುಟುಂಬಸ್ಥರ ಮದುವೆಗೆ ಹೋಗಿದ್ದ ಈ ಕುಟುಂಬ ಸದಸ್ಯರು ಸೋಮವಾರ ವಾಪಸ್ ಬಂದು ಮನೆಯಲ್ಲೇ ರಾತ್ರಿ ಮಲಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿಯೇ ಎಲ್ಲರೂ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಪೊಲೀಸ್‌ ಕಮಿಷನರ್‌ ರಮೇಶ್‌ ಬಾನೋತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap