ಹಳಿಯಾಳ:
ಇಲ್ಲಿನ ಗೌಳಿಗಲ್ಲಿಯಲ್ಲಿರುವ ನಿರ್ಮಲ ವಿರೂಪಾಕ್ಷೀ ಗೌಳಿ ಎಂಬವರ ಮನೆಯಿಂದ ಮನೆಗಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಹಳಿಯಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಮನೆಗಳ್ಳತನ ಮಾಡಲಾಗಿದ್ದ 7.95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಲಕನ್ ಅಶೋಕ ಕುಲಕರ್ಣಿ,ಸಂದೀಪ ದಿಲೀಪ ಲವಟೆ,ವಿವೇಕ ಶಿವಪ್ಪ ಕುಂಬಾರ ಹಾಗು ಅಜಿಜ್ ದಾದಾಪಿರ್ ಮನಗೂಳಿ ಬಂದಿತ ಆರೋಪಿಗಳು. DYSP ಶಿವಾನಂದ ಮದರಕಂಡಿ ಹಾಗು ಸಿಪಿಆಯ್ ಜಯಪಾಲ್ ಪಾಟೀಲ್ ಮಾರ್ಗದರ್ಶನ ಹಾಗೂ ಪಿಎಸ್ಐ ಗಳಾದ ಬಸವರಾಜ ಮಬನುರ್ ಮತ್ತು ಕೃಷ್ಣಾ ಅರಕೇರಿ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಗಣಪತಿ, ಶ್ರೀಶೈಲ್ ಜಿ ಎಮ್,ವಿನೋದ,ಲಕ್ಷ್ಮಣ ಪೂಜಾರಿ,ಅರವಿಂದ ಭಜಂತ್ರಿ,ಮಂಜುನಾಥ ಬಾಲಿ,ಅಯಾಜ ಯಾದವಾಡ,ಕಾಶಿನಾಥ ಬಿಳ್ಕೂರ,ವಿನಾಯಕ ನಾಯ್ಕ,ಯೊಗೇಶ ಗೌಡಾ ಪಾಲ್ಗೊಂಡಿದ್ದರು ಎಂದು ತಿಳಿಸಲಾಗಿದೆ.
