ತುಮಕೂರು ಜಿಲ್ಲೆ: ಇಂದು 40 ನಾಮಪತ್ರ ಸಲ್ಲಿಕೆ

ತುಮಕೂರು

      ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು(ಏಪ್ರಿಲ್ 18, 2023) 40 ನಾಮಪತ್ರಗಳು ಸ್ವೀಕೃತಗೊಂಡಿರುತ್ತವೆ.

     ಒಟ್ಟಾರೆ ಬಿ.ಜೆ.ಪಿ. 4, ಕಾಂಗ್ರೆಸ್ 8, ಆಮ್ ಆದ್ಮಿ ಪಕ್ಷದಿಂದ 2, ಜೆಡಿಎಸ್ 3, ಸ್ವತಂತ್ರ 12 ಮತ್ತು ಇತರೆ ಪಕ್ಷಗಳಿಂದ 11 ನಾಮಪತ್ರಗಳು ಸ್ವೀಕೃತವಾಗಿವೆ.

     128-ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಸಿ.ಬಿ.ಸುರೇಶ್ ಬಾಬು, ಪಕ್ಷೇತರ ಅಭ್ಯರ್ಥಿ ಗಂಗಾಧರಯ್ಯ, ಉತ್ತಮ ಪ್ರಜಾಕೀಯ ಪಕ್ಷದಿಂದ ಜಯರಾಮ್ ಹೆಚ್.ಆರ್., ಭಾರತೀಯ ಜನತಾ ಪಕ್ಷದಿಂದ ಜೆ.ಸಿ.ಮಾಧುಸ್ವಾಮಿ, ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಹನುಮಂತರಾಮನಾಯಕ ಅವರು ನಾಮಪತ್ರ ಸಲ್ಲಿಸಿರುತ್ತಾರೆ.

     129-ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಕೆ.ಷಡಾಕ್ಷರಿ 3 ನಾಮಪತ್ರ, ಕನ್ನಡ ದೇಶದ ಪಕ್ಷದಿಂದ ಅರುಣ್ ಲಿಂಗ 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಬಿ.ಎನ್.ವಿಜಯಕುಮಾರಿ, ಸ್ವತಂತ್ರ ಅಭ್ಯರ್ಥಿ ಭರತ್ ಬಿ.ಎಸ್. ಅವರು ನಾಮಪತ್ರ ಸಲ್ಲಿಸಿರುತ್ತಾರೆ.

     130-ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಬಹುಜನ ಕ್ರಾಂತಿ ದಳದಿಂದ ಹೆಚ್.ಬಿ. ಪುಟ್ಟಪ್ಪ ಅವರು ನಾಮಪತ್ರ ಸಲ್ಲಿಸಿರುತ್ತಾರೆ.

     131-ಕುಣಿಗಲ್ ವಿಧಾನ ಸಭಾ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.

     132-ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಉತ್ತಮ ಪ್ರಜಾಕೀಯ ಪಕ್ಷದಿಂದ ರಾಜೇಶ ಟಿ.ಎನ್., ಸ್ವತಂತ್ರ ಅಭ್ಯರ್ಥಿ ವೀರೇಶ್ ಪ್ರಸಾದ್ ಆರ್., ಆಮ್ ಆದ್ಮಿ ಪಕ್ಷದಿಂದ ಮೊಹಮ್ಮದ್ ಗೌಸ್‌ಪೀರ, ಭಾರತೀಯ ಜನತಾ ಪಕ್ಷದಿಂದ ಜಿ.ಬಿ.ಜ್ಯೋತಿಗಣೇಶ್ ಅವರು ನಾಮಪತ್ರ ಸಲ್ಲಿಸಿರುತ್ತಾರೆ.

      133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸಿದ್ಧರಾಮೇಗೌಡ, ಭಾರತೀಯ ಜನತಾಪಕ್ಷದಿಂದ ಬಿ.ಸುರೇಶ್ ಗೌಡ, ಆಮ್ ಆದ್ಮಿ ಪಕ್ಷದಿಂದ ದಿನೇಶ್ ಕುಮಾರ್ ಬಿ., ಉತ್ತಮ ಪ್ರಜಾಕೀಯ ಪಾರ್ಟಿ ಪಕ್ಷದಿಂದ ದಿನೇಶ್ ಟಿ.ಎನ್. ಅವರು ನಾಮಪತ್ರ ಸಲ್ಲಿಸಿರುತ್ತಾರೆ.

       134-ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಮುನಿಯಪ್ಪ ಕೆ.ಎಂ., ಸ್ವತಂತ್ರ ಅಭ್ಯರ್ಥಿ ಬಿ.ಎನ್. ವಿಜಯಲಕ್ಷ್ಮಿ  ಅವರು ನಾಮಪತ್ರ ಸಲ್ಲಿಸಿರುತ್ತಾರೆ.

        135-ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಎಸ್.ಆರ್. ಶ್ರೀನಿವಾಸ್ 2 ನಾಮಪತ್ರ, ಭಾರತೀಯ ಜನತಾ ಪಾರ್ಟಿ ಪಕ್ಷದಿಂದ ಎಸ್.ಡಿ. ದಿಲೀಪ್ ಕುಮಾರ್, ಸ್ವತಂತ್ರ ಅಭ್ಯರ್ಥಿ ಡಾ: ಭಾವನಾ ಆರ್. ಗಿರಿಧರ್, ಜಾತ್ಯಾತೀತ ಜನತಾದಳ ಅಭ್ಯರ್ಥಿ ನಾಗರಾಜು ಬಿ.ಎಸ್., ಸ್ವತಂತ್ರ ಅಭ್ಯರ್ಥಿ ಶಿವಕುಮಾರ್ ಅವರು ನಾಮಪತ್ರ ಸಲ್ಲಿಸಿರುತ್ತಾರೆ.

         136-ಶಿರಾ ವಿಧಾನ ಸಭಾ ಕ್ಷೇತ್ರಕ್ಕೆ ಭಾರತೀಯ ಬೆಳಕು ಪಕ್ಷದಿಂದ ಎಂ.ಎಲ್.ಎ.ಆರ್. ಕಂಬಣ್ಣ, ಸ್ವತಂತ್ರ ಅಭ್ಯರ್ಥಿ ಬಿ.ಎ.ಮಂಜುನಾಥ, ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪಕ್ಷದಿಂದ ಟಿ.ಬಿ.ಜಯಚಂದ್ರ, ಸ್ವತಂತ್ರ ಅಭ್ಯರ್ಥಿ ಬಂಡಿ ರಂಗನಾಥ ವೈ.ಆರ್., ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಗಿರೀಶ್ ನಾಮಪತ್ರ ಸಲ್ಲಿಸಿರುತ್ತಾರೆ.

          137-ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ನಾಗೇಂದ್ರ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಹೆಚ್.ವಿ.ವೆಂಕಟೇಶ್ 2 ನಾಮಪತ್ರ, ಕರ್ನಾಟಕ ರಾಷ್ಟç ಸಮಿತಿ ಪಕ್ಷದಿಂದ ಗೋವಿಂದಪ್ಪ ವಿ., ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀನಿವಾಸ್ ಎಸ್.ಹೆಚ್. ಅವರು ನಾಮಪತ್ರ ಸಲ್ಲಿಸಿರುತ್ತಾರೆ.

         138-ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಎಂ.ವಿ.ವೀರಭದ್ರಯ್ಯ ಅವರು ನಾಮಪತ್ರ ಸಲ್ಲಿಸಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ