ಕೃಷಿ ಭಾಗ್ಯ ಅವ್ಯವಹಾರ ತನಿಖೆಗೆ ಸರ್ಕಾರದ ಆದೇಶ.!

ಬೆಂಗಳೂರು

    ಕೃಷಿ ಭಾಗ್ಯ ತ್ಯಾಜ್ಯ ವಿಲೇವಾರಿ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಗಳೂ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ನಿರ್ವಹಣಾ ಗುತ್ತಿಗೆ ಬೆಳ್ಳಳ್ಳಿ, ಬಾಗಲೂರು ಮತ್ತು ಮಿಟ್ಟಗಾನಹಳ್ಳಿ ಕ್ವಾರಿಗಳ ಅಳವಡಿಸುವ ಹೆಸರಿನಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಹಗರಣಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಗ್ರ ತನಿಖಾ ವರದಿಗೆ ಆದೇಶಿಸಿದ್ದಾರೆ.

     914 ಕೋಟಿ ಮೊತ್ತದ ಕೃಷಿ ಭಾಗ್ಯ ಯೋಜನೆ ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಕೃಷ್ಣಭೈರೇಗೌಡ ಕೃಷಿ ಇಲಾಖೆ ಕಾರ್ಯದರ್ಶಿಗಳು 26 ಜಿಲ್ಲೆಗಳ ಕೃಷಿ ಇಲಾಖೆಯ ಕೃಷಿ ನಿರ್ದೇಶಕರು, 131 ತಾಲ್ಲೂಕುಗಳು ಉಪನಿರ್ದೇಶಕರಗಳ ವಿರುದ್ಧ ತನಿಖೆ ನಡೆಸಿ, ಎರಡು ತಿಂಗಳೊಳಗೆ ತನಿಖಾ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

     ತ್ಯಾಜ್ಯ ವಿಲೇವಾರಿ ಕಾರ್ಯಗಳಲ್ಲಿ ನಡೆದಿರುವ ಹಗರಣಗಳಿಗೆ ಸಂಬಂಧ ಪಟ್ಟಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ 41 ಮಂದಿ ಕಸವಿಲೇವಾರಿ ಗುತ್ತಿಗೆದಾರರು, ಟಿಪಿಎಸ್ ಸಂಸ್ಥೆಯ ಮುಖ್ಯಸ್ಥರಾದ ರಾಣಾ ಜಾರ್ಜ್‍ನ ಪಾಲುದಾರ ಸಂದೀಪ್ ರೆಡ್ಡಿ ಸೇರಿದಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧವು ಪರಿಶೀಲನಾ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

     1066 ಕೋ.ರೂ. ಮೊತ್ತದ ತ್ಯಾಜ್ಯ ವಿಲೇವಾರಿ ಹಗರಣ 410 ಕೋಟಿ ಮೊತ್ತದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಗಳ ನಿರ್ಮಾಣದ ಹಗರಣದ 96 ಕೋಟಿ ಮೊತ್ತದ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಮತ್ತು ನಿರ್ವಹಣಾ ಗುತ್ತಿಗೆ ಹಗರಣ ಬೆಳ್ಳಳ್ಳಿ , ಬಾಗಲೂರು ಮಿಟ್ಟಗಾನಾ ಹಳ್ಳಿ ಕ್ವಾರಿಗಳಿಗೆ ಲೈನರ್ ಗಳನ್ನು ಅಳವಡಿಸುವಲ್ಲಿ ನಡೆದಿರುವ 109 ಕೋಟಿ. ಹಗರಣವನ್ನು ತನಿಖೆ ನಡೆಸುವಂತೆಯೂ ಅವರು ಸೂಚನೆ ನೀಡಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap