ಸಿದ್ದರಾಮಯ್ಯನವರ ಸುವರ್ಣ ಆಡಳಿತಕ್ಕೆ ತೆರೆ :  ‘ಹೈ’ ಗೆ ಕೊಟ್ಟ ಮಾತು ಉಳಿಸಿಕೊಂಡ ‘ಟಗರು’

ಹಳ್ಳಿಯ ಕುರಿಗಾಯಿಯಿಂದ ಹದಿನೇಳು ಬಜೆಟ್ ಮಂಡನೆಯವರೆಗೆ ಭಾವನಾತ್ಮಕ ವಿದಾಯ

ಬೆಂಗಳೂರು: ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಎಂಟು ವರ್ಷ, ಎಂಟು ದಿನಗಳ ಕಾಲ ಸುದೀರ್ಘ ಅವಧಿಗೆ ದಾಖಲೆ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಪಕ್ಷದ ವರಿಷ್ಠರಿಗೆ ನೀಡಿದ ವಾಗ್ದಾನದಂತೆ ಪದತ್ಯಾಗ ಮಾಡಿದ್ದಾರೆ. ರಾಜಕಾರಣದಲ್ಲಿ ವಚನ ಪರಿಪಾಲಕರಾಗಿ ಹೊರ ಹೊಮ್ಮಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಸಾಂವಿಧಾನಿಕ ವಿಧಿ -ವಿಧಾನಗಳ ಮೂಲಕ ಮುಂದಿನ ಕ್ರಮಗಳು ನಡೆಯಲಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ನೂತನ ಮುಖ್ಯಮಂತ್ರಿ ದೊರೆಯಲಿದ್ದಾರೆ ಎಂದು ಹೇಳಿದರು.

ಮುಂದಿನ ಮುಖ್ಯಮಂತ್ರಿ ಯಾರು ಎಂದು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ, ಹೈಕಮಾಂಡ್ ನಿರ್ಧರಿಸುತ್ತದೆ ಎಂದರು. ಪಕ್ಕದಲ್ಲೆ ಇದ್ದ ಡಿ.ಕೆ. ಶಿವಕುಮಾರ್ ಹೆಸರನ್ನು ಅವರು ಪ್ರಸ್ತಾಪಿಸಲಿಲ್ಲ. ನಂತರ ಡಿ.ಕೆ. ಶಿವಕುಮಾರ್ ಅವರತ್ತ ತಿರುಗಿ ನಸು ನಕ್ಕರು. ಗುಸು, ಗುಸು ಮಾತನಾಡಿದರು.

ಅಧಿಕಾರ ಹಸ್ತಾಂತರಕ್ಕೆ ಅತ್ಯಂತ ಸೌಹಾರ್ದಯುತ ವಾತಾವರಣವನ್ನು ಸಿದ್ದರಾಮಯ್ಯ ನಿರ್ಮಿಸಿದ್ದಾರೆ. ಹಾಗೆಂದು ಬರುವ ದಿನಗಳಲ್ಲಿ ಸರ್ಕಾರದಲ್ಲಿ ಸಂಘರ್ಷದ ವಾತಾವರಣ ಇರುವುದಿಲ್ಲ ಎಂದಲ್ಲ. ಆದರೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲ ಹಂತ ಸುಗಮವಾಗಿ ನಡೆದಿದೆ. ಪಕ್ಷದ ವರಿಷ್ಠರಿಗೆ ಹಿಂದೆ ನೀಡಿದ್ದ ರಾಜಕೀಯ ವಾಗ್ದಾನದಂತೆ ಅವರು ಪದತ್ಯಾಗ ಮಾಡಿರುವುದು ಕಾಂಗ್ರೆಸ್ ಒಳರಾಜಕಾರಣಕ್ಕೂ, ರಾಜ್ಯದ ಮುಂದಿನ ರಾಜಕೀಯ ದಿಕ್ಕಿಗೂ ದೊಡ್ಡ ಚರ್ಚೆಯ ವಿಷಯವಾಗಿದೆ.

ಹಳ್ಳಿಯ ಸಾಮಾನ್ಯ ಕುಟುಂಬದಿAದ ಬಂದ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನವನ್ನು ಸಮಾಜವಾದಿ ಚಳವಳಿಯಿಂದ ಆರಂಭಿಸಿದರು. ಹಿಂದುಳಿದ ವರ್ಗಗಳ ಧ್ವನಿಯಾಗಿ ಹೊರಹೊಮ್ಮಿದ ಅವರು, ಕ್ರಮೇಣ ರಾಜ್ಯ ರಾಜಕಾರಣದಲ್ಲಿ ಬಲಿಷ್ಠ ನಾಯಕನಾಗಿ ಬೆಳೆದರು. ಶಾಸಕರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಹಾಗೂ ಬಳಿಕ ಮುಖ್ಯಮಂತ್ರಿಯಾಗಿ ಹಲವು ಹಂತಗಳನ್ನು ದಾಟಿದ ಅವರು, ಜನಪರ ಆಡಳಿತದ ಮೂಲಕ ವಿಭಿನ್ನ ಗುರುತನ್ನು ನಿರ್ಮಿಸಿಕೊಂಡರು.

ಅವರ ರಾಜಕೀಯ ಶೈಲಿಯ ಮುಖ್ಯ ಲಕ್ಷಣವೆಂದರೆ ನೇರ, ನಿಷ್ಠುರ ನಡೆ, ನುಡಿ, ಆಡಳಿತದ ಮೇಲೆ ಹಿಡಿತ ಹಾಗೂ ಸಾಮಾಜಿಕ ನ್ಯಾಯದ ಮೇಲಿನ ಒಲವು. ಇದೇ ಕಾರಣದಿಂದ ಅವರು ಗ್ರಾಮೀಣ ಭಾಗದಲ್ಲಿ ಅಪಾರ ಜನಬೆಂಬಲ ಗಳಿಸಿದರು.

ಸಿದ್ದರಾಮಯ್ಯ ಅವರ ಆಡಳಿತಾವಧಿ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ನಿರ್ಧಾರಗಳಿಗೆ ಸಾಕ್ಷಿಯಾಯಿತು. ಅನ್ನಭಾಗ್ಯ, ಕ್ಷೀರಭಾಗ್ಯ, ಗೃಹಲಕ್ಷಿ÷್ಮ, ಶಕ್ತಿ, ಯುವನಿಧಿ, ಗೃಹಜ್ಯೋತಿ ಸೇರಿದಂತೆ ಜನಪರ ಯೋಜನೆಗಳ ಮೂಲಕ ಅವರು ಬಡವರು ಮತ್ತು ಮಧ್ಯಮ ವರ್ಗದ ಜನರ ನಡುವೆ ಬಲವಾದ ರಾಜಕೀಯ ನೆಲೆಯನ್ನು ನಿರ್ಮಿಸಿದರು.

ಅವರ ಆಡಳಿತದ ಅವಧಿಯಲ್ಲಿ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಸಬಲೀಕರಣ, ರೈತರ ನೆರವು, ಮಹಿಳಾ ಕಲ್ಯಾಣ ಹಾಗೂ ಕಲ್ಯಾಣರಾಜ್ಯದ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಲಾಯಿತು. ಕಾಂಗ್ರೆಸ್ ಪಕ್ಷದ ?ಗ್ಯಾರಂಟಿ ರಾಜಕಾರಣ?ವನ್ನು ನೆಲಮಟ್ಟದಲ್ಲಿ ಯಶಸ್ವಿಯಾಗಿ ಜಾರಿಗೆ ತಂದ ನಾಯಕರಾಗಿ ಅವರು ಗುರುತಿಸಿಕೊಂಡರು.

ಇದೇ ವೇಳೆ ಅವರ ಆಡಳಿತ ವಿವಾದಗಳಿಂದಲೂ ದೂರ ಇರಲಿಲ್ಲ. ಭ್ರಷ್ಟಾಚಾರ ಆರೋಪಗಳು, ಒಳರಾಜಕೀಯ ಭಿನ್ನಮತ, ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು, ದೆಹಲಿ ನಾಯಕತ್ವದೊಂದಿಗೆ ಸಮತೋಲನ ಕಾಯ್ದುಕೊಳ್ಳುವ ಸವಾಲುಗಳು ಅವಧಿಯುದ್ದಕ್ಕೂ ಮುಂದುವರಿದವು. ಆದರೂ ಆಡಳಿತದ ಮೇಲಿನ ಹಿಡಿತದಿಂದ ಅವರು ತಮ್ಮ ಸ್ಥಾನವನ್ನು ಬಲವಾಗಿ ಉಳಿಸಿಕೊಂಡಿದ್ದರು.

ಭಾವನಾತ್ಮಕ ವಿದಾಯ
ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಪಕ್ಷದ ಸೈನಿಕ. ಪಕ್ಷದ ನಿರ್ಧಾರವೇ ನನ್ನ ನಿರ್ಧಾರ ಎಂಬ ಸಂದೇಶ ನೀಡಿರುವುದು ಅವರ ರಾಜಕೀಯ ಪರಿಪಕ್ವತೆಯನ್ನು ತೋರಿಸುತ್ತದೆ. ಅಧಿಕಾರಕ್ಕಿಂತ ಪಕ್ಷದ ಏಕತೆಯನ್ನು ಮೇಲುಗೈಗೈದ ನಾಯಕನಾಗಿ ಅವರು ಹೊರಹೊಮ್ಮಿದ್ದಾರೆ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಅವರ ಬೆಂಬಲಿಗರ ದೃಷ್ಟಿಯಲ್ಲಿ ಇದು ರಾಜಕೀಯ ತ್ಯಾಗ, ವಿರೋಧ ಪಕ್ಷಗಳ ದೃಷ್ಟಿಯಲ್ಲಿ ಅಧಿಕಾರ ಹಂಚಿಕೆಯ ಅನಿವಾರ್ಯತೆ. ಆದರೆ ಯಾವ ದೃಷ್ಟಿಯಿಂದ ನೋಡಿದರೂ, ಸಿದ್ದರಾಮಯ್ಯ ಅವರ ರಾಜೀನಾಮೆ ಕರ್ನಾಟಕ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಘಟ್ಟವಾಗಿ ದಾಖಲಾಗಲಿದೆ.

ಎಂಟು ವರ್ಷ, ಎಂಟು ದಿನಗಳ ಆಡಳಿತದ ಬಳಿಕ ಸಿದ್ದರಾಮಯ್ಯ ಅವರ ನಿರ್ಗಮನವು ಕೇವಲ ಒಬ್ಬ ಮುಖ್ಯಮಂತ್ರಿಯ ಪದತ್ಯಾಗವಲ್ಲ; ಅದು ಒಂದು ರಾಜಕೀಯ ಯುಗದ ಅಂತ್ಯ ಮತ್ತು ಮತ್ತೊಂದು ಹೊಸ ಅಧ್ಯಾಯದ ಆರಂಭವಾಗಿದೆ. ಸಾಮಾಜಿಕ ನ್ಯಾಯದ ರಾಜಕಾರಣ, ಜನಪರ ಯೋಜನೆಗಳು ಹಾಗೂ ಬಲಿಷ್ಠ ಆಡಳಿತ ಶೈಲಿಯ ಮೂಲಕ ಅವರು ತಮ್ಮದೇ ಆದ ರಾಜಕೀಯ ಮುದ್ರೆಯನ್ನು ಮೂಡಿಸಿದ್ದಾರೆ.

ನಾನು ಒತ್ತಡ ಮತ್ತು ಪ್ರಭಾವಗಳಿಗೆ ತಲೆಬಾಗುವ ವ್ಯಕ್ತಿಯಲ್ಲ. ಈ ರಾಜೀನಾಮೆ ಪತ್ರವನ್ನೂ ಸಂತೋಷದಿAದ ಮನಪೂರ್ವಕವಾಗಿ ಸಲ್ಲಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮನ್ನು ಎರಡು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ ಬಗ್ಗೆ ಹೈಕಮಾಂಡ್ ಗೆ ಕೃತಜ್ಞತೆ ಸಲ್ಲಿಸಿದ ಅವರು, ಮತದಾರರನ್ನು ಮತದಾರ ದೇವರು ಎಂದು ಕರೆದರು. ಕಾಂಗ್ರೆಸ್ ಪಕ್ಷವು ತಮ್ಮ ಸೈದ್ಧಾಂತಿಕ ಹೋರಾಟಕ್ಕೆ ಮಾನ್ಯತೆ ನೀಡಿ ರಾಜಕೀಯ ಅವಕಾಶ ನೀಡಿದೆ ಎಂದು ಹೇಳಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.

ನಾನು ರಾಜಕಾರಣವನ್ನು ಅಧಿಕಾರ ಅಥವಾ ವ್ಯಾಪಾರದ ಸಾಧನವೆಂದು ನೋಡಿಲ್ಲ. ಅದು ಬಡವರು, ಶೋಷಿತರು ಮತ್ತು ನೊಂದವರಿಗೆ ನೆರವಾಗುವ ಅವಕಾಶ ಎಂದು ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.

ತಮ್ಮ ರಾಜಕೀಯ ಪಯಣದಲ್ಲಿ ರಾಜಪ್ಪ ಮಾಸ್ತರ್, ರೈತನಾಯಕ ಎಂ.ಡಿ. ನಂಜುAಡಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನವನ್ನು ಸ್ಮರಿಸಿದ ಸಿದ್ದರಾಮಯ್ಯ, ಅವರ ನೆರವು ಇಲ್ಲದೆ ಈ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ರಾಜಕೀಯ ಜೀವನದಲ್ಲಿ ಎದುರಿಸಿದ ಟೀಕೆ, ದ್ವೇಷ, ಪಿತೂರಿ ಹಾಗೂ ಕುಟುಂಬದ ಮೇಲಿನ ಆರೋಪಗಳನ್ನು ನೆನಪಿಸಿಕೊಂಡ ಅವರು, ನನ್ನ ಪತ್ನಿಯ ಮೇಲೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಲಾಯಿತು. ಆದರೂ ಹೋರಾಟದ ದಾರಿಯಿಂದ ಹಿಂದೆ ಸರಿಯಲಿಲ್ಲ ಎಂದು ಹೇಳಿದರು.

ಹದಿನೇಳು ಬಜೆಟ್ ಮಂಡಿಸಿರುವ ತೃಪ್ತಿ ವ್ಯಕ್ತಪಡಿಸಿದ ಅವರು, ಇತಿಹಾಸದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಗುರುತಿಸಿಕೊಳ್ಳುವುದಕ್ಕಿಂತ ಜನರ ಏಳಿಗೆಗೆ ಕಾರಣವಾದ ಯೋಜನೆಗಳನ್ನು ನೀಡಿದ ನಾಯಕನಾಗಬೇಕು ಎಂಬ ಆಶಯದಿಂದ ಕೆಲಸ ಮಾಡಿದ್ದೇನೆ ಎಂದು ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.

ಮುಂದಿನ ಮುಖ್ಯಮಂತ್ರಿ ..?

ಸಿದ್ದರಾಮಯ್ಯ ರಾಜೀನಾಮೆಯೊಂದಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕ ಆಯ್ಕೆ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಇನ್ನೊಂದೆಡೆ, ಪಕ್ಷದ ಒಳಗುಂಪು ರಾಜಕೀಯ ಮತ್ತೆ ತಲೆದೋರುವ ಸಾಧ್ಯತೆಗಳನ್ನೂ ರಾಜಕೀಯ ವಲಯಗಳು ವಿಶ್ಲೇಷಿಸುತ್ತಿವೆ. ನಾಯಕತ್ವ ಬದಲಾವಣೆಯ ನಂತರ ಸರ್ಕಾರದ ಸ್ಥಿರತೆ, ಆಡಳಿತದ ವೇಗ ಹಾಗೂ ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಪ್ರಮುಖ ಚರ್ಚೆಯ ವಿಷಯಗಳಾಗಲಿವೆ.

ಕುವೆಂಪು ಹೇಳಿದಂತೆ ಶಾಂತಿಯ ತೋಟ ಆಗಬೇಕು

ಇಡೀ ಸಮಾಜ ಕುವೆಂಪು ಹೇಳಿದಂತೆ ಶಾಂತಿಯ ತೋಟ ಆಗಬೇಕು ಅಂತ ಬಯಸಿದವನು. ಸಮ ಸಮಾಜಕ ನಿರ್ಮಾಣ ಆಗಬೇಕು. ಸಮಾನತೆಯ ಅವಕಾಶ ಎಲ್ಲರಿಗೂ ಸಿಗಬೇಕು. ಸಮಾನ ಅವಕಾಶ ಇಲ್ಲದಿರುವುದರಿಂದಲೇ ನಮ್ಮ ಸಮಾಜದಲ್ಲಿ ಅಸಮಾನತೆ ನೋಡುತ್ತಿದ್ದೇವೆ. ಈ ಅಸಮಾನತೆ ತೊಲಗಬೇಕಾದರೆ ಎಲ್ಲರಿಗೂ ಸಮಾನತೆಯ ಅವಕಾಶ ಸಿಗಲೇಬೇಕು ಎಂದರು.

ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಮ್ಮ ಗ್ಯಾರಂಟಿ ಬಗ್ಗೆ ಮೋದಿ ಸೇರಿ ವಿಪಕ್ಷಗಳು ಅಪಪ್ರಚಾರ ಮಾಡಿದವು. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗಲ್ಲ ಎಂದು ಹೇಳಿದ್ದರು. ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಇರಲ್ಲ ಎಂದು ಅಪಪ್ರಚಾರ ಮಾಡಿದ್ದರು. ಅಭಿವೃದ್ಧಿ ಕೆಲಸ ಆಗಲ್ಲ ರಾಜ್ಯ ದಿವಾಳಿ ಆಗುತ್ತದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆ ಜಾರಿ ಮಾಡಿದ ಮೇಲೆ ಇಡೀ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದೇವೆ ಎಂದು ವಿಪಕ್ಷಗಳಿಗೆ ಸಿದ್ದರಾಮಯ್ಯ ಚಾಟಿ ಬೀಸಿದರು.

ಸಂವಿಧಾನವೇ ನನ್ನ ಧರ್ಮ :ಸಿಎಂ

ನಾನು ಹಳ್ಳಿಯಿಂದ ಬಂದವನು. ನಾನು ಶಾಸಕ, ಸಿಎಂ ಆಗುತ್ತೇನೆ ಎಂದು ಅಂದುಕೊAಡಿರಲಿಲ್ಲ. ನಾನು ರಾಜಕೀಯ ಬಂದಿದ್ದು ಆಕಸ್ಮಿಕ. ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿ ಇರಲಿಲ್ಲ. ರಾಜಕಾರಣಕ್ಕೆ ಬಂದಾಗಿನಿAದಲೂ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ತತ್ವ ಆದರ್ಶದಲ್ಲಿ ನಂಬಿಕೆ ಇಟ್ಟುಕೊಂಡವನು. ಸಂವಿಧಾನದಲ್ಲಿ ಅಪಾರ ಗೌರವ ಇಟ್ಟುಕೊಂಡವನು. ಎಲ್ಲರೂ ಕೂಡ ಒಂದು ಕುಟುಂಬದAತೆ ಇರಬೇಕು ಅಂತಾ ಭಾವಿಸಿದ್ದೆ ಎಂದು ಮಾತನಾಡುತ್ತಲೇ ಸಿದ್ದರಾಮಯ್ಯ ಭಾವುಕರಾದರು.

2006ರಲ್ಲಿ ನಾನು ಕಾಂಗ್ರೆಸ್ ಸೇರಿದ್ದೆ. 2006ರಿಂದ ಕಾರ್ಯಕರ್ತರು, ಶಾಸಕರು, ಸಂಸದರು ಸೇರಿ ಎಲ್ಲರೂ ಪ್ರೀತಿ ತೋರಿಸಿದ್ದಾರೆ, ಅವಕಾಶ ಕಲ್ಪಸಿಕೊಟ್ಟಿದ್ದಾರೆ. ಅವರಿಗೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. 2013ರಿಂದ 18ರವರೆಗೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದೆ. ಬಳಿಕ 2023ರಿಂದ ಇಲ್ಲಿವರೆಗೆ ಸಿಎಂ ಆಗಿದ್ದೆ. ಸಿಎಂ ಆಗಿದ್ದಾಗ ನನ್ನ ಜತೆ ಕೆಲಸ ಮಾಡಿದವರು ಸಹಕರಿಸಿದ್ದರು.

ಅಂದು 8 ಜನ ಶಾಸಕರು ನನ್ನ ಜತೆ ಕಾಂಗ್ರೆಸ್ ಸೇರಿದ್ದರು, ಅದರಲ್ಲಿ ಕೆಲವರು ಸತ್ತು ಹೋಗಿದ್ದಾರೆ. ಯಾರು ನನ್ನ ಜತೆ ಅಂದು ಕಾಂಗ್ರೆಸ್ ಸೇರಿದ್ದರೋ ಅವರಿಗೆ ನಾನು ಚಿರಋಣಿ. ಸಂವಿಧಾನದಲ್ಲಿ ನಂಬಿಕೆ ಇಟ್ಟಿದ್ದೇನೆ. ಒಂದು ವೇಳೆ ಸಂವಿಧಾನ ಇಲ್ಲದೆ ಹೋಗಿದ್ದರೆ ವಿದ್ಯಾವಂತ ಆಗುತ್ತಿರಲಿಲ್ಲ, ಯಾವ ಹುದ್ದೆಯನ್ನೂ ಅಲಂಕರಿಸಲಾಗುತ್ತಿರಲಿಲ್ಲ. ಕುರಿ ಮೇಯಿಸಿಕೊಂಡು ಇರುತ್ತಿದ್ದೆ. ನನ್ನ ತಂದೆ-ತಾಯಿ ಅವಿದ್ಯಾವಂತರು. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಹೋರಾಡುತ್ತೇನೆ. ಜನರ ಸಮಾನತೆಯನ್ನು ಕಾಪಾಡುವ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಮತದಾರರೇ ದೇವರು : ಡಾ.ರಾಜ್ ಕುಮಾರ್ ಸ್ಮರಣೆ

ಇದೇ ವೇಳೆ ದಿವಂಗತ ನಟ ಡಾ.ರಾಜ್ ಕುಮಾರ್ ಅವರನ್ನು ನೆನೆಸಿಕೊಂಡ ಸಿದ್ದರಾಮಯ್ಯ, ರಾಜ್ ಕುಮಾರ್ ಅವರು ಅಭಿಮಾನಿಗಳನ್ನೇ ದೇವರು ಎಂದು ಕರದೆರು. ನಾನು ರಾಜಕಾರಣಿ ನಮಗೆ ಮತದಾರರೇ ನಮ್ಮ ಅಭಿಮಾನಿ ದೇವರುಗಳು.

ಕನ್ನಡನಾಡಿನ 7 ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. 2 ಬಾರಿ ಮುಖ್ಯಮಂತ್ರಿಯಾಗಿದ್ದೆ, 2 ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೆ. ನನಗೆ ಈ ಅವಕಾಶ ಕೊಟ್ಟ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಂದರ್ಭದಲ್ಲಿ ಅಪಾರ ಧನ್ಯವಾದ ತಿಳಿಸುತ್ತೇನೆ.

ನಾನು ಕಾಂಗ್ರೆಸ್ ಸೇರಿದ್ದು 2006ರಲ್ಲಿ. ಅಲ್ಲಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕರಿಗೆ ಮತ್ತು ಸಂಸದರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ. 2013ರಿಂದ 2018ರವೆರಗೆ, 2023ರಿಂದ ಇಲ್ಲಿಯವರೆಗೂ ಸಿಎಂ ಆಗಿದ್ದೇ. ಈ ಸಂದರ್ಭದಲ್ಲಿ ನನ್ ಜೊತೆ ಕೆಲಸ ಮಾಡಿದ ನನ್ನ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ನಾನು ಹಳ್ಳಿಗಾಡಿನಿಂದ ಪಂದವನು, ನಮ್ಮ ಕುಟುಂಬದವರು ಯಾರು ರಾಜಕೀಯದಲ್ಲಿರಲಿಲ್ಲ. ಆದಾಗ್ಯೂ ರಾಜಕೀಯದಲ್ಲಿ ಹಲವು ಉನ್ನತ ಮಟ್ಟಕ್ಕೇರಿದ್ದೆ ಎಂದರು.

ಸಿಎಲ್‌ಪಿ ಸಭೆ ಶನಿವಾರ : ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ಸೇರುವ ಸಾಧ್ಯತೆ ಇದ್ದು, ಅದೇ ದಿನ ಹೊಸ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಮೂಲಗಳ ಪ್ರಕಾರ, ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದು ಅವರ ವೈಯಕ್ತಿಕ ಜ್ಯೋತಿಷಿ ಸೂಚಿಸುವ ಶುಭ ಸಮಯದ ಮೇಲೆ ಅವಲಂಬಿತವಾಗಿರುವುದರಿAದ ಭಾನುವಾರ ಪ್ರಮಾಣ ವಚನ ಸ್ವೀಕಾರ ನಡೆಯುವ ಸಾಧ್ಯತೆಯೂ ಇದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲದೆ, ಲೋಕಸಭೆಯ ಎಲ್‌ಒಪಿ ರಾಹುಲ್ ಗಾಂಧಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲಾಗುವುದು.

ಶಾಲಾ ಮಕ್ಕಳಂತೆ ಅಳುತ್ತಿರುವ ಸಚಿವರು, ಶಾಸಕರು
ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡುವುದು ಖಚಿತವಾಗುತ್ತಿದ್ದಂತೆ ಯಾವ ಮುಖ್ಯಮಂತ್ರಿಗೂ ದೊರೆಯದ ಅಭಿಮಾನ, ಕಣ್ಣೀರಿನ ಪ್ರೀತಿ ದೊರೆಯುತ್ತಿದೆ. ಮೆಚ್ಚಿನ ಮೇಸ್ಟುç ವರ್ಗಾವಣೆಗೊಂಡಾಗ ಮುಗ್ದ ಮಕ್ಕಳು ಅಳುವಂತೆ, ಸಚಿವರುಗಳು, ಶಾಸಕರು, ಮುಖಂಡರು ಕಣ್ಣೀರಾಗುತ್ತಿರುವ ದೃಶ್ಯಗಳು ಸಿದ್ದು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿವೆ. ಪ್ರಥಮ ಬಾರಿಗೆ ವಿಧಾನಸಭಾ ಸಿಬ್ಬಂದಿ, ಅಧಿಕಾರಿಗಳು, ಸರ್ಕಾರಿ ನೌಕಕರು ಬಹಿರಂಗವಾಗಿ ಕಣ್ಣೀರು ಹಾಕುತ್ತಾ, ರಾಜೀನಾಮೆ ಕೊಡಬೇಡಿ ಸರ್ ಎಂದೂ ಕೂಗಿದ್ದಾರೆ. ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮನದ ವೇಳೆ ಈ ರೀತಿಯ ಭಾವನಾತ್ಮಕ ವಾತಾವರಣ ಸಿದ್ದರಾಮಯ್ಯ ಅವರಿಗೆ ಮಾತ್ರ ದೊರೆಯುತ್ತಿದೆ.

 

Recent Articles

spot_img

Related Stories

Share via
Copy link