40 ಪರ್ಸೆಂಟ್ ಕಮಿಷನ್ ಹಗರಣ

ಬೆಳಗಾವಿ:

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸದನದ ಒಳಗೂ, ಹೊರಗೂ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕರು, ಗುತ್ತಿಗೆದಾರರ ಸಂಘ ಆರೋಪಿಸಿರುವ 40 ಪರ್ಸೆಂಟ್ ಕಮೀಷನ್ ಹಗರಣವನ್ನು ಮುಂದಿಕೊಂಡು ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ನಲ್ಲಿ ದಾಳಿ ಇಟ್ಟರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಕಾಂಗ್ರೆಸ್‍ನ ಎಲ್ಲ ಪ್ರಮುಖ ನಾಯಕರು, ಶಾಸಕರುಗಳು ಟ್ರ್ಯಾಕ್ಟರ್‍ನಲ್ಲೇ ಸುವರ್ಣಸೌಧದವರೆಗೂ ಮೆರವಣಿಗೆ ಮೂಲಕ ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕುಂದಾ ನಗರಿಯಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ, ಆಕ್ರೋಶ ಹೊರ ಹಾಕಿದರು. ಬೆಳಗಾವಿಯ ಸುವರ್ಣಸೌಧಕ್ಕೆ ಟ್ರ್ಯಾಕ್ಟರ್‍ನಲ್ಲೇ ಲಗ್ಗೆ ಹಾಕಿದ ಕಾಂಗ್ರೆಸ್ ನಾಯಕರು, ಸುವರ್ಣಸೌಧ ಪ್ರವೇಶಿಸಲು ಹರಸಾಹಸ ನಡೆಸಿದರು. ಸುವರ್ಣಸೌಧ ಗೇಟ್‍ನಲ್ಲಿ ಹೈ ಡ್ರಾಮವೇ ನಡೆದು, ಕೊನೆಗೂ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್‍ನಲ್ಲೇ ಸುವರ್ಣಸೌಧದ ಮುಖ್ಯ ಬಾಗಿಲಿಗೆ ಬರುವಲ್ಲಿ ಯಶಸ್ವಿಯಾದರು.

ಕಾಂಗ್ರೆಸ್ ನಾಯಕರ ಟ್ರ್ಯಾಕ್ಟರ್ ಹಿಂಬಾಲಿಸಿದ ನೂರಾರು ಕಾರ್ಯಕರ್ತರು ದಾರಿಯುದ್ಧಕ್ಕೂ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕಾಂಗ್ರೆಸ್ ಧ್ವಜವನ್ನು ಹಿಡಿದು ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಗೆ ಸಾತ್ ನೀಡಿದರು.

ರಾಜ್ಯದ ಬಿಜೆಪಿ ಸರ್ಕಾರ ಶೇ. 40 ರಷ್ಟು ಕಮಿಷನ್ ಸರ್ಕಾರ. ಬಿಜೆಪಿ ಲೂಟಿ, ಲೂಟಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಟ್ರ್ಯಾಕ್ಟರ್‍ನಲ್ಲಿ ಸುವರ್ಣಸೌಧದ ಗೇಟಿಗೆ ಆಗಮಿಸಿದ ಕೈ ನಾಯಕರನ್ನು ಪೆÇಲೀಸರು ಒಳಬಿಡದೆ ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿದರು. ಆಗ ಕೈ ನಾಯಕರು ಪೆÇಲೀಸರೊಂದಿಗೆ ವಾಗ್ವಾದಕ್ಕೆ ಇಳಿದರಾದರೂ ಸಭಾಧ್ಯಕ್ಷರ ಅನುಮತಿ ಇಲ್ಲದೆ ಒಳಬಿಡುವುದಿಲ್ಲ ಎಂದು ಹೇಳಿ ಕೈ ಶಾಸಕರನ್ನು ಒಳಬಿಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ರ್ಯಾಕ್ಟರ್ ಸಮೇತ ಒಳಬಿಡದಿದ್ದರೆ ಇಲ್ಲಿಯೇ ಮಲಗುತ್ತೇವೆ ಎಂದು ಹೇಳಿ ಸುವರ್ಣಸೌಧದ ಗೇಟಿನಲ್ಲೇ ಶಾಸಕರೊಂದಿಗೆ ಧರಣಿ ನಡೆಸಿದರು.

ಸುಮಾರು ಹೊತ್ತು ಪ್ರತಿಭಟನೆ ನಡೆದು ಕೊನೆಗೂ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನುಮತಿ ನೀಡಿದ ನಂತರ ಪೆÇಲೀಸರು ಕೈ ನಾಯಕರನ್ನು ಟ್ರ್ಯಾಕ್ಟರ್ ಸಮೇತ ಒಳ ಬಿಟ್ಟರು. ಯುದ್ಧ ಗೆದ್ದ ಸಂಭ್ರಮದಲ್ಲಿದ್ದ ಕೈ ನಾಯಕರು ಟ್ರ್ಯಾಕ್ಟರ್‍ನಲ್ಲೆ ಸುವರ್ಣಸೌಧದ ಮುಖ್ಯ ಬಾಗಿಲಿಗೆ ಆಗಮಿಸಿ ಟ್ರ್ಯಾಕ್ಟರ್‍ನಿಂದ ಇಳಿದು ಒಬ್ಬೊಬ್ಬರೇ ಸುವರ್ಣಸೌಧದ ಒಳ ಪ್ರವೇಶಿಸಿದರು. ಸುವರ್ಣ ಸೌಧದ ಗೇಟಿನಿಂದ ಮುಖ್ಯ ದ್ವಾರದವರೆಗೂ ಶಾಸಕ ಭೈರತಿ ಸುರೇಶ್ ಟ್ರ್ಯಾಕ್ಟರ್ ಚಾಲನೆ ಮಾಡಿದ್ದು ಗಮನ ಸೆಳೆಯಿತು.

ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಗುರುವಾರದಿಂದ ಮೂರು ದಿನಗಳ ಕಾಲ ಪ್ರತಿ ದಿನವೂ ಸದನದ ಹೊರಗೆ, ಒಳಗೆ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ನಾಯಕರು ಇದೇ ಸಂದರ್ಭದಲ್ಲಿ ಘೋಷಿಸಿದರು. ಹೋರಾಟ ನಡೆಸುವುದು ನಮ್ಮ ಹಕ್ಕು. ಮುಖ್ಯಮಂತ್ರಿಗಳನ್ನು ಕೇಳಿ ನಾವು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಪ್ರಪಂಚದಲ್ಲೇ ಕುಖ್ಯಾತಿ ಪಡೆದಿದೆ. ಇದು ಶೇ. 40ರ ಕಮಿಷನ್ ಸರ್ಕಾರ ಎಂದು ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಬೆಳಗಾವಿಯ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೂ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್‍ನಲ್ಲಿ ಬಂದರೆ, ನೂರಾರು ಕಾರ್ಯಕರ್ತರು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ನಾಯಕರನ್ನು ಹಿಂಬಾಲಿಸಿಕೊಂಡು ಬಂದರು.

ಕಾಂಗ್ರೆಸ್‍ನ ಈ ಪ್ರತಿಭಟನಾ ರ್ಯಾಲಿಯಿಂದ ಬೆಳಗಾವಿ ನಗರ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ, ವಾಹನ ಸವಾರರು ಪರದಾಡುವಂತಾಯಿತು.

ಕಮಿಷನ್ ಸರ್ಕಾರ :
ರಾಜ್ಯ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40ರಷ್ಟು ಕಮಿಷನ್ ಆರೋಪದ ಬಗ್ಗೆ ತನಿಖೆ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಭಟನಾ ಸಂದರ್ಭದಲ್ಲಿ ಒತ್ತಾಯಿಸಿದರು. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರೆ ಈ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ಇಲ್ಲವೇ ಸದನ ಸಮಿತಿಯಿಂದ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಬಿಟ್‍ಕಾಯಿನ್ ಸರ್ಕಾರ ಲಂಚ ಸ್ವೀಕರಿಸುತ್ತಿದೆ. ನಮ್ಮ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಿ ನಮ್ಮದೇನೂ ಅಭ್ಯಂತರವಿಲ್ಲ. ಬೆಳೆ ಹಾನಿ ಪರಿಹಾರವನ್ನು ಕೂಡಲೆ ನೀಡಬೇಕು. ಬೇರೆ ಕಾಮಗಾರಿಗಳನ್ನು ನಿಲ್ಲಿಸಿ ರೈತರಿಗೆ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link