ಜುವೆಲ್ಸ್ ಆಫ್ ಇಂಡಿಯಾ ಉತ್ಸವ

ಬೆಂಗಳೂರು

        ಇದೇ 26 ರಿಂದ 29ರವರೆಗೆ ಜುವೆಲ್ಸ್ ಆಫ್ ಇಂಡಿಯಾದಿಂದ ಭಾರತದ ಅತಿ ದೊಡ್ಡ ಚಿಲ್ಲರೆ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಗರದಲ್ಲಿ ಆಯೋಜನೆಗೊಂಡಿದೆ.

         ದೇಶದ ಪ್ರಮುಖ ಆಭರಣ ಸಂಸ್ಥೆಗಳು ತಮ್ಮ ವೈವಿಧ್ಯಮಯ ವಿನ್ಯಾಸಗಳ ಆಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಈ ಬಾರಿಯ ಮೇಳಕ್ಕೆ ಚಿತ್ರನಟಿ ರಾಧಿಕ ಕುಮಾರ ಸ್ವಾಮಿ ರಾಯಬಾರಿಯಾಗಿ ನಿಯೋಜಿತರಾಗಿದ್ದಾರೆ.

        ಮಾರಾಟ ಮೇಳದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೆಂಟ್‍ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿಂದು ಆಭರಣ ತೊಟ್ಟ ಜವ್ವನೆಯರಿಂದ ಆಕರ್ಷಕ ಫ್ಯಾಷನ್ ಶೋ ನಡೆಯಿತು.

        ಚಿತ್ರನಟಿ ಮಯೂರಿ ಅವರ ನೇತೃತ್ವದಲ್ಲಿ ಯುವತಿಯರು ದೇಶದ ವಿವಿಧ ಭಾಗಗಳ ಸಂಪ್ರದಾಯಿಕ ಹಾಗೂ ನವ ನವೀನ ವಿನ್ಯಾಸಗಳ ಆಭರಣ ತೊಟ್ಟು ರ್ಯಾಂಪ್ ಮೇಲೆ ಬಳಕುತ್ತಾ ಹೆಜ್ಜೆ ಹಾಕಿದರು. ಸುಂದರಿಯರು ಧರಿಸಿದ ಆಭರಣ ಫ್ಯಾಷನ್ ಶೋನ ಮೆರಗು ಹೆಚ್ಚಿಸಿದರು.

         ಈ ಮೂಲಕ ದಸರ ಉತ್ಸವ ಋತುಮಾನದ ಕತ್ತಲೆ ಕಳೆದು ಬೆಳಕು ಕಾಣುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅತ್ಯಂತ ಕಾತರದಿಂದ ನಿರೀಕ್ಷಿಸುತ್ತಿರುವ ಚಿಲ್ಲರೆ ಆಭರಣ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ವಿವಿಧ ಅಭಿರುಚಿಯ ಮತ್ತು ತಮ್ಮ ಬಜೆಟ್‍ಗೆ ಹೊಂದುವ ಮನಮೋಹಕ ಆಭರಣಗಳು ಒಂದೇ ಸೂರಿನಡಿ ಲಭ್ಯವಿದೆ. ದೇಶದ 125ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ಈ ಮೇಳದಲ್ಲಿ ತಮ್ಮ ವೈವಿಧ್ಯಮಯ ವಡೆವೆಗಳನ್ನು ಪ್ರದರ್ಶಿಸುತ್ತಿವೆ.

         ಹಲವಾರು ವರ್ಷಗಳಿಂದ ಕರ್ನಾಟಕ, ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಮಹಿಳೆಯರ ಮನಸ್ಸು ಮತ್ತು ಹೃದಯಗಳನ್ನು ಗೆದ್ದಿರುವ ಕನ್ನಡದ ಜನಪ್ರಿಯ ನಟಿ ರಾಧಿಕ ಕುಮಾರ ಸ್ವಾಮಿ ಈ ವರ್ಷದ “ ಜುವೆಲ್ಸ್ ಆಫ್ ಇಂಡಿಯಾ “ ಪ್ರದರ್ಶನದ ರಾಯಭಾರಿಯಾಗಿದ್ದಾರೆ. “ ಈ ಪ್ರದರ್ಶನಕ್ಕೆ ಆಗಮಿಸುವ ಯಾವುದೇ ಮಹಿಳೆಯರು ಬರಿಗೈಲಿ ತೆರಳುವುದಿಲ್ಲ ಎಂದು ಆಭರಣ ಪ್ರದರ್ಶನದ ಸಂಚಾಲಕ ಸಂದೀಪ್ ಬೇಕಲ್ ಹೇಳುತ್ತಾರೆ.

          ರಾಧಿಕ ಕುಮಾರ ಸ್ವಾಮಿ ಅವರ ಪ್ರಕಾರ ಹೇಳುವ ಪ್ರಕಾರ, ದೇಶದಾದ್ಯಂತ ಆಗಮಿಸುತ್ತಿರುವ ಆಭರಣ ವ್ಯಾಪಾರಿಗಳು ಒಂದೇ ವೇದಿಕೆಯಡಿ ತಮ್ಮ ವಿನೂನತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಅಯೋಜಿಸಿದ್ದು, ಆಭರಣ ಖರೀದಿಗೆ ಇದು ಇದು ಪ್ರಶಸ್ತ ಸ್ಥಳ ಎನ್ನುತ್ತಾರೆ ಇಂತಹ ಖ್ಯಾತ ಮತ್ತು ಸುಂದರ ಆಭರಣ ಪ್ರದರ್ಶನದ ರಾಯಭಾರಿಯಾಗಿರುವುದು ತಮಗೆ ರೋಮಾಂಚನವುಂಟು ಮಾಡಿದೆ ಎಂದರು.

       ಈ ಬಾರಿಯ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಜಗತ್ತಿನ ಅತಿ ದೊಡ್ಡ ಆಭರಣ ಸಂಸ್ಥೆಗಳಾದ ಭೀಮಾ ಜುವೆಲರ್ಸ್ ಮತ್ತು ಅಲುಕ್ಕಾಸ್ ಪ್ರಮುಖ ಹಾಗೂ ವಿಶೇಷ ಆಕರ್ಷಣೆಯಾಗಿದೆ ಎಂದು ಸಂಚಾಲಕ ಸಂದೀಪ್ ಬೈಕಲ್ ಹೇಳಿದ್ದಾರೆ. ಭೀಮಾ ಜುವೆಲ್ಸ್ ಗುಣಮಟ್ಟದ ಮತ್ತು ಅದ್ಭುತ ಚಿನ್ನ ಹಾಗೂ ವಜ್ರದ ಆಭರಣ ವಿನ್ಯಾಸಕ್ಕೆ ಖ್ಯಾತಿ ಪಡೆದಿದೆ. ಜುವೆಲ್ಸ್ ಆಫ್ ಇಂಡಿಯಾದಲ್ಲಿ ಭೀಮಾ ಜುವೆಲ್ಸ್ ತನ್ನ “ ಭೀಮಾ ಮಹಾ ಉತ್ಸವ್ “ ಲಕ್ಕಿ ಬಹುಮಾನ ಯೋಜನೆಯನ್ನು ವಿಸ್ತರಿಸಿದೆ. ಅದೃಷ್ಟಶಾಲಿ ಗ್ರಾಹಕರು 11 ಟಾಟಾ ಟಿಯಗೋ ಕಾರುಗಳು ಮತ್ತು 55 ಸ್ಕೂಟರ್‍ಗಳನ್ನು ಬಹುಮಾನವಾಗಿ ಪಡೆಯಲಿದ್ದಾರೆ. ಅಲುಕ್ಕಾಸ್ ಸಂಸ್ಥೆಯು ಸಹ ಪ್ರದರ್ಶನದಲ್ಲಿ ಖರೀದಿಸುವ ಪ್ರತಿಯೊಬ್ಬರಿಗೂ ಖಾತರಿಯಾದ ಉಡುಗೊರೆ ನೀಡುವುದಾಗಿ ಪ್ರಕಟಿಸಿದೆ.

         ಅತಿ ದೊಡ್ಡ ಪ್ರದರ್ಶಕರು ಪ್ರದರ್ಶನದ ಮೆರಗು ಮತ್ತು ಆಕರ್ಷಣೆಯನ್ನು ಹೆಚ್ಚಿಸಲಿದ್ದಾರೆ. ಭೀಮಾ ಜುವೆಲರ್ಸ್, ಜಾಯ್ ಅಲುಕ್ಕಾಸ್, ಕ್ರಿಯೇಷನ್ಸ್ ಜುವೆಲರಿ, ಪಂಚ್ ಕೇಶರಿ ಬಡೆರಾ ಜುವೆಲರ್ಸ್, ಪಿಎಂಜೆ ಜುವೆಲರ್ಸ್, ನೀಲಕಾಂತ್ ಜುವೆಲರ್ಸ್, ನಿಕ್‍ಹಾರ್ ಜುವೆಲ್ಸ್ ಮತ್ತು ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜುವೆಲರಿ ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗಿಯಲಿವೆ.

       ಮುಂಬೈನ ಶೋಭಾ ಶೃಂಗಾರ್ ಸಂಸ್ಥೆ ಆಕರ್ಷಕ ಚಿನ್ನದ ಆಭರಣಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸೂರತ್‍ನ ಚಾರು ಜುವೆಲ್ಸ್, ಪ್ರಾಚೀನ ವಿನ್ಯಾಸದ ಆಭರಣಗಳ ಸಂಗ್ರಹ ಹೊಂದಿರುವ ಬೆಂಗಳೂರಿನ ಸೋವನ್ ಜುವೆಲರ್ಸ್, ವಿಶೇಷ ವಿನ್ಯಾಸಗಳ ಆಭರಣಕ್ಕೆ ಹೆಸರಾದ ಬೆಂಗಳೂರಿನ ವಿವಂತ್, ಕರಾವಳಿ ಉತ್ತರ ಕನ್ನಡದ ಆಭರಣ ವಿನ್ಯಾಸಗಳನ್ನು ಹೊಂದಿರುವ ಮಂಗಳೂರು ಜುವೆಲ್ಸ್ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link