ಶಿವಮೊಗ್ಗ : 3ವರ್ಷದಲ್ಲಿ 468 ಪೋಕ್ಸೊ ಪ್ರಕರಣ ….!

ಶಿವಮೊಗ್ಗ:

    ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳ ರಕ್ಷಣೆಗಿರುವ ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 468 ಪ್ರಕರಣಗಳು ದಾಖಲಾಗಿವೆ. ಇದು ಪೋಷಕರನ್ನು ಚಿಂತೆಗೀಡು ಮಾಡಿದೆ.

   2021-22ನೇ ಸಾಲಿನಲ್ಲಿ 154, 2022-23ರಲ್ಲಿ 468 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕಾಲೇಜು ವಿದ್ಯಾರ್ಥಿನಿಯರ ಮೇಲಾಗಿರುವ ದೌರ್ಜನ್ಯ ಪ್ರಕರಣಗಳೇ ಅಧಿಕ. ಕೆಲವು ಪ್ರಕರಣಗಳಲ್ಲಿ ಬಾಲಕಿಯರ ಮೇಲೆ ಪರಿಚಯಸ್ಥರಿಂದಲೇ ದುಷ್ಕೃತ್ಯ ನಡೆದಿದೆ. ಇನ್ನು ಕೆಲವರು ನಾನಾ ರೀತಿಯ ಆಸೆ, ಆಮಿಷಗಳನ್ನೊಡ್ಡಿ ಕೃತ್ಯ ಎಸಗಿದ್ದಾರೆ. ಕೆಲವೆಡೆ ಅಕ್ಕಪಕ್ಕದ ಮನೆಯವರೇ ಕೃತ್ಯ ಎಸಗಿದ್ದಾರೆ.

   ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆ ಕುರಿತಂತೆ ಶಾಲೆ, ಕಾಲೇಜು ಮಟ್ಟದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದಲೂ ಅರಿವು ಮೂಡಿಸಲಾಗುತ್ತದೆ.

ಕಳೆದ 3 ವರ್ಷದಲ್ಲಿ ನಡೆದ ಪೋಕ್ಸೊ ಪ್ರಕರಣಗಳ ಮಾಹಿತಿ:

  • 2022ರಲ್ಲಿ 117 ಪ್ರಕರಣ ದಾಖಲು, 65 ಪ್ರಕರಣ ಇತ್ಯರ್ಥ, 52 ಪ್ರಕರಣ ಬಾಕಿ ಇದೆ.
  • 2023ರಲ್ಲಿ 152 ಪ್ರಕರಣ ದಾಖಲು, 51 ಪ್ರಕರಣ ಇತ್ಯರ್ಥ, 101 ಪ್ರಕರಣ ಬಾಕಿ ಇದೆ.
  • 2024ರ ಮಾರ್ಚ್ ತಿಂಗಳವರೆಗೆ 44 ಪ್ರಕರಣ ದಾಖಲು.

ಪೋಕ್ಸೊ ಪ್ರಕರಣದಲ್ಲಿ 3ರಿಂದ 5 ವರ್ಷದವರೆಗೆ ಶಿಕ್ಷೆ ವಿಧಿಸಬಹುದು. ಗಂಭೀರ ಪ್ರಕರಣದಲ್ಲಿ‌ 14ರಿಂದ 20 ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು. ಬಾಲ್ಯ ವಿವಾಹದಲ್ಲಿ 1 ಲಕ್ಷ ರೂ. ದಂಡ ಹಾಕಬಹುದು. ಜೊತೆಗೆ 2 ವರ್ಷ ಕಾರಾಗೃಹ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಮಕ್ಕಳ ಸಹಾಯವಾಣಿ 1098 ಇದೆ. ಮಕ್ಕಳ ಯಾವುದೇ ಸಮಸ್ಯೆಗಳಿದ್ದರೂ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.‌

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap