5ನೇ ವಾರ್ಡಿನಲ್ಲಿ ಜೆಡಿಎಸ್ ಬಿರುಸಿನ ಪ್ರಚಾರ ಮೂಲಭೂತ ಸೌಲಬ್ಯ ಕಲ್ಪಿಸಿಕೊಡುವೆ;ಸಿಟಿಕೆ

ಚಿತ್ರದುರ್ಗ;

            ನಗರಸಭೆಯ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ಆ ಪಕ್ಷದ ಅಭ್ಯರ್ಥಿಗಳೂ ಸಹ ತಮ್ಮ ಬೆಂಬಲಿಗರ ಪಡೆ ಕಟ್ಟಿಕೊಂಡು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.

            ಇಲ್ಲಿನ 5ನೇ ವಾರ್ಡಿನಲ್ಲಿ ಜಾತ್ಯಾತೀತ ಜತನಾ ದಳದ ಅಭ್ಯರ್ಥಿ ಸಿ.ಟಿ.ಕೃಷ್ಣಮೂರ್ತಿ ಅವರು ಭಾನುವಾರ ಮತ್ತು ಸೋಮವಾರ ಬಿರುಸಿನ ಪ್ರಚಾರ ನಡೆಸಿದರು. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೆ ಮನೆ ಮನೆಗೆ ಬೇಟಿದ ಸಿ.ಟಿ.ಕೃಷ್ಣಮೂರ್ತಿ ಅವರು, ಈ ಬಾರಿಯ ಚುನಾವಣೆಯಲ್ಲಿ ತಮಗೆ ಬೆಂಬಲಿಸುವಂತೆ ಮತದಾರರನ್ನು ಕೋರಿದರು
ಈ ಸಂದರ್ಭದಲ್ಲಿ ಮಾತನಾಡಿ ಸಿ.ಟಿ.ಕೃಷ್ಣಮೂರ್ತಿ ಅವರು ,ನಾನು ಮೂರು ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದೇನೆ.

           ಈ ಬಾರಿಯೂ ಜನರು ತಮಗೆ ಆಯ್ಕೆ ಮಾಡಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳೀದರುವಾರ್ಡಿನಲ್ಲಿ ನಾಗರೀಕರಿಗೆ ಬೇಕಾಗಿರುವ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಯೂ ಸೇರಿದಂತೆ ಅಗತ್ಯ ಸೌಲಬ್ಯಗಳನ್ನು ಒದಗಿಸಿಕೊಡುತ್ತೇನೆ. ಐದು ವರ್ಷಗಳ ಕಾಲವೂ ಜನರ ಆಶಯಗಳಿಗೆ ಸ್ಪಂದಿಸಿ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿಯೂ ಭರವಸೆ ನೀಡಿದರುರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ನಗರ ಮತ್ತು ವಾರ್ಡಿನ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಅನುದಾನ ತರಲು ಶ್ರಮಿಸಲಾಗುವುದು. ನಗರದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮತ್ತು ಕುಡಿಯುವ ನೀರಿನ ಅಭಾವವಿದೆ .ಈ ವಾರ್ಡಿನಲ್ಲಿಯೂ ಸಾಕಷ್ಟು ನೀರಿನ ಸಮಸ್ಯೆ ಇದ್ದು, ಇದರ ಪರಿಹಾರಕ್ಕೂ ಶ್ರಮಿಸುವುದಾಗಿ ಹೇಳಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap