5 ಬಾರಿ ಗೆದ್ದು ಇತಿಹಾಸ ಬರೆದ ಸರ್ದಾರ್

ಚಿತ್ರದುರ್ಗ
                ಚಿತ್ರದುರ್ಗ ನಗರಸಭೆಗೆ ಸತತ ಐದು ಬಾರಿ ಗೆಲುವು ಸಾಧಿಸುವ ಮೂಲಕ ಮಾಜಿ ಅಧ್ಯಕ್ಷ ಅಹಮದ್ ಮಹಮದ್ ಪಾಷ ಅವರು ಹೊಸ ಇತಿಹಾಸ ಬರೆದಿದ್ದಾರೆ.
                ಈ ಬಾರಿಯ ಚುನಾವಣೆಯಲ್ಲಿ ಬಹುತೇಕ ಹಾಲಿ ಮತ್ತು ಮಾಜಿ ಸದಸ್ಯರುಗಳು ಸೋಲು ಕಂಡಿದ್ದರೆ ಸರ್ದಾರ್ ಮಾತ್ರ ಮತ್ತೆ ಗೆಲುವು ದಾಖಲಿಸುವ ಮೂಲಕ ಹಿರಿತನ ಕಾಪಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸಿರುವ ಕೀರ್ತಿಯೂ ಸಹ ಇವರಿಗೆ ಸಂದಿದೆ
                 ಕಳೆದ ಆಗಸ್ಟ್ 31ರಂದು ನಗರಸಭೆಯ ಚುನಾವಣೆಗೆ ಮತದಾನ ನಡೆದಿತ್ತು. ಸೋಮವಾರ ಬೆಳಿಗ್ಗೆ ಮತ ಏಣಿಕೆ ನಡೆದಿದ್ದು,23ನೇ ವಾರ್ಡಿನಲ್ಲಿ ಸ್ಪರ್ದಿಸಿದ್ದ ಅಹಮದ್ ಮಹಮದ್ ಪಾಷ ನಿರೀಕ್ಷೆಯಂತೆಯೇ ಗೆದ್ದಿದ್ದಾರೆ. ಇದು ಅವರ ಐದನೇಯ ಗೆಲುವು ಎನ್ನುವುದು ವಿಶೇಷ.
                 ಮೊದಲ ಬಾರಿಗೆ 1995ರಲ್ಲಿ ಕಾಂಗ್ರೆಸ್‍ನಿಂದಲೇ ಗೆದ್ದಿದ್ದ ಸರ್ದಾರ್,ಅಲ್ಲಿಂದ ಇಲ್ಲಿಯ ತನಕ ಸತತವಾಗಿ ಎಲ್ಲಾ ಚುನಾವಣೆಯಲ್ಲಿಯೂ ಗೆಲುವು ಕಂಡಿದ್ದಾರೆ. ಒಮ್ಮೆ ನಗರಸಭೆಯ ಅಧ್ಯಕ್ಷರೂ ಆಗಿದ್ದ ಸರ್ದಾರ್, ತಮ್ಮ ಸತತ ಗೆಲುವಿಗೆ ತಮ್ಮ ಜಾತ್ಯಾತೀತ ಮತ್ತು ಧರ್ಮಾತೀತ ನಡವಳಿಕೆಯೇ ಮುಖ್ಯ ಕಾರಣವೆಂದು ಹೇಳಿದ್ದಾರೆ
                  ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾವು ಗೆದ್ದು ಬರುತ್ತಿರುವ ವಾರ್ಡ್‍ನಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಇದ್ದಾರೆ. ಎಲ್ಲರೊಟ್ಟಿಗೆ ಒಡನಾಟವಿಟ್ಟುಕೊಂಡು ಉತ್ತಮ ಕೆಲಸ ಮಾಡಿದ್ದೇನೆ. ಈ ಕಾರಣಕ್ಕಾಗಿಯೇ ಜನರು ಮತ್ತೊಮ್ಮೆ ಗೆಲ್ಲಿಸಿದ್ದಾರೆ. ಪಕ್ಷ ಯಾವುದೇ ಇರಲಿ ನಗರದ ಅಭಿವೃದ್ದಿಯೇ ನನಗೆ ಮುಖ್ಯವೆಂದು ಇದೇ ವೇಳೆ ಸ್ಪಷ್ಟ ಪಡಿಸಿದರು

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap