ಹೈದರಾಬಾದ್:
ಬಸ್‌ಗಳಲ್ಲಿ ಪ್ರಯಾಣಿಕರನ್ನು ದರೋಡೆ ಮಾಡುತ್ತಿದ್ದ ಐವರನ್ನು ಹೈದರಾಬಾದಿನ ಆರ್ ಸಿ ಪುರಂ ಪೊಲೀಸರು ಬಂಧಿಸಿದ್ದಾರೆ. ಬಸ್ ಗಳಲ್ಲಿ ಸರ ಗಳ್ಳತನ ಮಾಡುತ್ತಿದ್ದ ಐವರನ್ನು ಡೈಮಂಡ್ ಪಾಯಿಂಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಸೈಬರಾಬಾದ್ ಮತ್ತು ಹೈದರಾಬಾದ್ ಕಮಿಷನರೇಟ್ ವ್ಯಾಪ್ತಿಯಲ್ಲಿ 30 ಪ್ರಕರಣಗಳಲ್ಲಿ ಕಳ್ಳರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 25 ರಂದು ಕಾನುಕುಂಟಾ ಸಿಎಂಆರ್ ಶಾಪಿಂಗ್ ಮಾಲ್‌ನಲ್ಲಿ ಸಿಕಂದರಾಬಾದ್‌ಗೆ ತೆರಳುತ್ತಿದ್ದ ಬಸ್ ಹತ್ತುತ್ತಿದ್ದ ವೇಳೆ 1.7 ತೊಲ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವುದಾಗಿ ಅನಿಶೆಟ್ಟಿ ಶ್ರೀನಿವಾಸ್ ಎಂಬುವವರಿಂದ ಆರ್‌ಸಿ ಪುರಂ ಪೊಲೀಸರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.