ಅಕೋಲ
ಭಾರೀ ಮಳೆ ಗಾಳಿಗೆ ಮಹಾರಾಷ್ಟ್ರ ರಾಜ್ಯದ ಅಕೊಲಾ ಜಿಲ್ಲೆಯ ಪರಸ್ ಗ್ರಾಮದಲ್ಲಿ ಹಳೆಯ ಭಾರೀ ಗಾತ್ರದ ಮರ ಟಿನ್ ಶೆಡ್ ಮೇಲೆ ಬಿದ್ದು 7 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಸ್ಥಳೀಯರ ನೆರವಿನೊಂದಿಗೆ ಪೊಲೀಸರು 20ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ತಕ್ಷಣ ಬಾಲಾಪುರ್ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ಅನಿಲ್ ಜುಮ್ಲೆ ತಮ್ಮ ಸಹೋದ್ಯೋಗಿಗಳ ಜೊತೆ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದು ಸ್ಥಳೀಯರ ನೆರವಿನೊಂದಿಗೆ ಮರದ ಕೆಳಗೆ ಸಿಕ್ಕಿಹಾಕಿಕೊಂಡವರನ್ನು ಹೊರತೆಗೆದರು. ಟಿನ್ ಶೆಡ್ ಮೇಲೆ ಬೃಹತ್ ಗಾತ್ರದ ಮರ ಧರೆಗುರುಳಿ 7 ಮಂದಿ ಮೃತಪಟ್ಟು 30ರಿಂದ 40 ಮಂದಿ ಗಾಯಗೊಂಡಿದ್ದಾರೆ.
