ತೆಲಂಗಾಣ : ಕಾರು ಕೆರೆಗೆ ಬಿದ್ದು ಐವರ ಸಾವು

ತೆಲಂಗಾಣ:

   ಕಾರೊಂದು ಚಾಲಕನ ನಿಯಂತ್ರಣ ತಪ್ಪಿ  ಕೆರೆಗೆ ಉರುಳಿದ ಘಟನೆ  ತೆಲಂಗಾಣದ ಯಾದಾದ್ರಿ ಭೋಂಗಿರ್‌ನ ಭೂದಾನ ಪೋಚಂಪಲ್ಲಿ ಮಂಡಲದ ಜಲಾಲ್‌ಪುರ ಗ್ರಾಮದ ಬಳಿ ಶನಿವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು  ಒಬ್ಬರು ಗಾಯಗೊಂಡಿದ್ದಾರೆ.

   ಕಾರು ಪ್ರಯಾಣಿಕರು ಹೈದರಾಬಾದ್‌ನ ಎಲ್‌ಬಿ ನಗರ ಪ್ರದೇಶದವರಾಗಿದ್ದು, ಸಂತ್ರಸ್ತರು ಕುಡಿದ ಅಮಲಿನಲ್ಲಿದ್ದರು. ತಡರಾತ್ರಿಯಲ್ಲಿ ಮನೆಯಿಂದ ಹೊರಟು ಮುಂಜಾನೆ ಹಳ್ಳಿಗೆ ಆಗಮಿಸಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ವಂಶಿ (23), ದಿಗ್ನೇಶ್ (21), ಹರ್ಷ (21), ಬಾಲು (19) ಮತ್ತು ವಿನಯ್ (21) ಮತ್ತು ಗಾಯಗೊಂಡ ವ್ಯಕ್ತಿಯನ್ನು ಮಣಿಕಾಂತ್ (21) ಎಂದು ಗುರುತಿಸಲಾಗಿದೆ.

   ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು. ಅಪಘಾತದ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಪಲ್ಟಿಯಾಗಿ ಕೆರೆಗೆ ಉರುಳಿ ಬಿದ್ದುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

   ಘಟನೆಯ ಬಗ್ಗೆ ಮಾಹಿತಿ ಪಡೆದ ತೆಲಂಗಾಣ ಪೊಲೀಸರ ತಂಡವು ಸ್ಥಳಕ್ಕೆ ಆಗಮಿಸಿ, ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಕೆರೆಗೆ ಬಿದ್ದ ಕಾರನ್ನು ತೆಗೆಯಲು ಪೊಲೀಸರೊಂದಿಗೆ ಸ್ಥಳೀಯರು ಸಹಕರಿಸಿದರು.

Recent Articles

spot_img

Related Stories

Share via
Copy link