ಕೋಲ್ಕತ್ತಾದಲ್ಲಿ ಭಾರೀ ಮಳೆಯಿಂದ ಐವರು ಸಾವು

ಕೋಲ್ಕತ್ತಾ:

    ಕೋಲ್ಕತ್ತಾದಲ್ಲಿ  ಸೋಮವಾರ ರಾತ್ರಿಯಿಂದ ಧಾರಾಕಾರ ಮಳೆ  ಸುರಿದ ಪರಿಣಾಮ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು  ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಕೋಲ್ಕತ್ತಾ ಪೊಲೀಸರ ಪ್ರಕಾರ, ಹೊಸೈನ್ ಶಾ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ 5:15ರ ಸುಮಾರಿಗೆ 60 ವರ್ಷದ ಜಿತೇಂದ್ರ ಸಿಂಗ್ ಎಂಬಾತ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಮೃತಪಟ್ಟ ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ 

   ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಮಂಗಳವಾರ ಹಲವು ಪ್ರದೇಶಗಳು ಜಲಾವೃತವಾದವು. ರಸ್ತೆಗಳು, ಮನೆಗಳು ಮತ್ತು ವಸತಿ ಸಂಕೀರ್ಣಗಳ ಒಳಗೆ ನೀರು ನುಗ್ಗಿದ್ದು, ಸಂಚಾರ ದಟ್ಟಣೆ ಉಂಟಾಯಿತು. ಭಾರತೀಯ ಹವಾಮಾನ ಇಲಾಖೆ  ಪ್ರಕಾರ, ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಲಯದಿಂದ ದಕ್ಷಿಣ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. 

   ಭಾರೀ ಮಳೆಯಿಂದಾಗಿ ಬ್ಲೂ ಲೈನ್‌ನ ಣೇಶ್ವರ-ಶಹೀದ್ ಖುದಿರಾಮ್) ಮಹಾನಾಯಕ್ ಉತ್ತಮ್ ಕುಮಾರ್ ಮತ್ತು ರವೀಂದ್ರ ಸರೋವರ್ ನಿಲ್ದಾಣಗಳ ನಡುವಿನ ಮಧ್ಯಭಾಗದಲ್ಲಿ ಜಲಾವೃತವಾದ ಕಾರಣ, ಈ ಭಾಗದ ಮೆಟ್ರೋ ಸೇವೆಯನ್ನು ತಕ್ಷಣ ಸ್ಥಗಿತಗೊಳಿಸಲಾಯಿತು. ಮೆಟ್ರೋ ರೈಲ್ವೆ ಕೋಲ್ಕತ್ತಾದ ವಕ್ತಾರರ ಪ್ರಕಾರ, ಶಹೀದ್ ಖುದಿರಾಮ್ ಮತ್ತು ಮೈದಾನ್ ನಿಲ್ದಾಣಗಳ ನಡುವಿನ ಸೇವೆಯನ್ನು ಸಾರ್ವಜನಿಕ ಸುರಕ್ಷತೆಗಾಗಿ ನಿಲ್ಲಿಸಲಾಗಿದೆ.

   ಈ ಭಾರೀ ಮಳೆಯಿಂದಾಗಿ ಕೋಲ್ಕತ್ತಾದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ವರದಿಯ ಪ್ರಕಾರ, ಗರಿಯಾ ಕಾಂದಾಹಾರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿ.ಮೀ. ಮಳೆಯಾಗಿದ್ದು, ಜೋಧ್‌ಪುರ್ ಪಾರ್ಕ್‌ನಲ್ಲಿ 285 ಮಿ.ಮೀ., ಕಾಳಿಘಾಟ್‌ನಲ್ಲಿ 280 ಮಿ.ಮೀ., ಟಾಪ್ಸಿಯಾದಲ್ಲಿ 275 ಮಿ.ಮೀ., ಬಾಲಿಗಂಜ್‌ನಲ್ಲಿ 264 ಮಿ.ಮೀ. ಮಳೆ ದಾಖಲಾಗಿದೆ.

Recent Articles

spot_img

Related Stories

Share via
Copy link