ಉತ್ತರ ಕೊರಿಯಾ:
ತೀವ್ರ ಕುತೂಹಲ ಕೆರಳಿಸಿದ್ದ ಟ್ರಂಪ್ – ಕಿಮ್ ಜಾಂಗ್ ಉನ್ ನಡುವಿನ 2ನೇ ಮಾತುಕತೆ ವಿಫಲವಾಗಿರುವ ಕಾಟಣ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಐವರು ಉನ್ನತ ಅಧಿಕಾರಿಗಳಿಗೆ ಕಿಮ್ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಉತ್ತರಕೊರಿಯಾದ ಪ್ರತಿಷ್ಠಿತ ಪತ್ರಿಕೆಯೊಂದು ವರದಿ ಮಾಡಿದೆ.
ವಿಶ್ವಾಸದ್ರೋಹ ಎಸಗಿದ್ದಾರೆಂದು ಆರೋಪಿಸಿ ಅಮೆರಿಕದಲ್ಲಿ ಉತ್ತರ ಕೊರಿಯಾದ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಿಮ್ ಹೈಯೋಕ್ ಅವರನ್ನು ಫೈರಿಂಗ್ ಸ್ಕ್ವಾಡ್ ಗುಂಡಿಟ್ಟು ಹತ್ಯೆಗೈದಿರುವುದಾಗಿ ಪತ್ರಿಕೆ ವಿವರಿಸಿದೆ.
ಅಷ್ಟೇ ಅಲ್ಲ ಹೈಯೋಕ್ ಮತ್ತು ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯದ ಇತರ ನಾಲ್ವರು ಅಧಿಕಾರಿಗಳನ್ನು ಮಾರ್ಚ್ ತಿಂಗಳಿನಲ್ಲಿ ಮರಣದಂಡನೆ ಶಿಕ್ಷೆ ನೀಡಿ ಹತ್ಯೆಗೈದಿರುವುದಾಗಿ ಹೇಳಿದೆ.
ಪರಮಾಣು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವೆ ಫೆಬ್ರುವರಿಯಲ್ಲಿ ಹನೋಯ್ ಮತ್ತು ವಿಯೆಟ್ನಾಂನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ, ಅದೇ ರೀತಿ ಉಳಿದ ನಾಲ್ವರು ಅಧಿಕಾರಿಗಳ ಹೆಸರನ್ನೂ ಬಹಿರಂಗಪಡಿಸಿಲ್ಲ ಎಂದು ವರದಿ ತಿಳಿಸಿದೆ.