ತುಮಕೂರು : 35 ವಾರ್ಡ್ಗಳಿಗೆ 500ಕೋಟಿ ವಿಶೇಷ ಅನುದಾನಕ್ಕೆ ಸಿಎಂಗೆ ಮನವಿ

ತುಮಕೂರು: 

    ಜನವರಿ 29ಕ್ಕೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿದ್ದು, 697 ಕೋಟಿ ರೂ. ಮೊತ್ತದ ವಿವಿಧ  ಕಾಮಗಾರಿಗಳಿಗೆ ಅಡಿಗಲ್ಲು, ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತುಮಕೂರು ನಗರದ ಸಮಗ್ರ ಅಭಿವೃದ್ಧಿಗೆ 500 ಕೋಟಿ ವಿಶೇಷ ಅನುದಾನ ಕೋರಲಾಗುವುದು.

    ಅಂತೆಯೇ ತುಮಕೂರು ವಿವಿಯಲ್ಲಿ ಹೊಸ ಅಧ್ಯಯನ ವಿಭಾಗಗಳನ್ನು ತೆರೆಯಲು ಹಾಗೂ ಮೂಲಸೌಕರ್ಯಕ್ಕಾಗಿ ವಿಶೇಷ ಅನುದಾನ, ತುಮಕೂರಿನವರೆಗೆ ಮೆಟ್ರೊ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳ ಗಮನಸೆಳೆಯಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

     ಜಿಲ್ಲಾ ಕ್ರೀಡಾಂಗಣದ ಮುಂಭಾಗ ಸಂವಿಧಾನ ಜಾಗೃತಿ ಸ್ತಬ್ದಚಿತ್ರದ ಜಾಥಾಗೆ ಚಾಲನೆ ನೀಡಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಸಚಿವ ಡಾ. ಜಿ.ಪರಮೇಶ್ವರ ಅವರು ಸ್ಮಾರ್ಟ್ ಸಿಟಿಯಡಿ ಕೇವಲ ಆರೂವರೆ ವಾರ್ಡ್ ಮಾತ್ರ ಅಭಿವೃದ್ಧಿಯಾಗಿದ್ದಾಗ, ಸಮ್ಮಿಶ್ರ ಸರ್ಕಾರದಲ್ಲಿ ನಾನು ಡಿಸಿಎಂ ಆಗಿದ್ದಾಗ ಮಂಜೂರು ಮಾಡಿಸಿದ್ದ ೨೫೦ ಕೋಟಿ ಅನುದಾನವನ್ನು ನಂತರದ ಬಿಜೆಪಿ ಸರ್ಕಾರ ಬಿಡುಗಡೆ ಮಾಡಲಿಲ್ಲ. ಹೀಗಾಗಿ ನಗರದ ಸಮಗ್ರ, ಸಮಾನ ಅಭಿವೃದ್ಧಿಗೆ ೫೦೦ ಕೋಟಿ ವಿಶೇಷ ಅನುದಾನಕ್ಕೆ ಬಜೆಟ್‌ನಲ್ಲಿ ಒದಗಿಸುವುವಂತೆ ಕೋರಲಾಗುವುದು ಎಂದರು.

     ಅಂಬೇಡ್ಕರ್‌ಗೆ ಗೌರವಿಸೋಣ: ಸಂವಿಧಾನದ ಮಹತ್ವ, ಆಶಯ ಮತ್ತು ಸಮಾನತೆ, ತತ್ವಗಳ ಬಗ್ಗೆ ಸಮಾಜದ ಸರ್ವರಿಗೂ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಆದೇಶದಂತೆ ಭಾರತ ಸಂವಿಧಾನದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸಂವಿಧಾನ ಜಾಗೃತಿಯ ಸ್ಥಬ್ಧಚಿತ್ರಗಳೊಂದಿಗೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಸಂಸ್ಥೆ ಹಾಗೂ ೩೩೦ ಗ್ರಾಮಪಂಚಾಯತಿಗಳಲ್ಲಿ ಫೆಬ್ರವರಿ ೨೩ರವರೆಗೆ ಸಂಚರಿಸಲಿದೆ ಎಂದ ಸಚಿವರು ಈ ಅವಿಸ್ಮರಣೀಯ ಜಾಥಾಕ್ಕೆ ಗಣರಾಜ್ಯೋತ್ಸವ ದಿನದಂದು ಜಿಲ್ಲೆಯಲ್ಲಿ  ಚಾಲನೆ ನೀಡಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರತಿಯಿಬ್ಬರು ಭಾಗಿಯಾಗುವ ಮೂಲಕ ವಿಶ್ವಶ್ರೇಷ್ಠ ಭಾರತ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ ಎಂದರು.

 

ನರೇಗಾ ಅನುಷ್ಠಾನದಲ್ಲಿ ಜಿಲ್ಲೆಗೆ ಮೊದಲ ಸ್ಥಾನ

     ತುಮಕೂರು ಜಿಲ್ಲೆಯಲ್ಲಿ 55 ಲಕ್ಷ ಮಾನವ ದಿನಗಳನ್ನು ಖರ್ಚು ಮಾಡಲಾಗಿದೆ. ಸುಮಾರು ೪೫೦ ಕೋಟಿ ರೂ. ಯಷ್ಟು ಕೆಲಸ ಮಾಡಲಾಗಿದೆ. ಇದು ಇಡೀ ರಾಜ್ಯದಲ್ಲಿ ನರೇಗಾ ಅನುಷ್ಠಾನದಲ್ಲಿ ತುಮಕೂರು ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ಒಂದು ಸಾವಿರ ಶಾಲೆಗಳಿಗೆ ಕಾಂಪೌAಡ್, ಶೌಚಾಲಯ, ಆಟದ ಮೈದಾನ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ನೀಡಲು ೮೫ ಕೋಟಿ ರೂ. ಅನುದಾನ ಖರ್ಚು ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

   ಹೇಮಾವತಿ ನೀರು 15 ಟಿಎಂಸಿ ಮಾತ್ರ ಬಂದಿದೆ. ಬಾಕಿ ಉಳಿದ ನೀರನ್ನು ಈ ತಿಂಗಳ ಕೊನೆಗೆ ಅಥವಾ ಮುಂದಿನ ತಿಂಗಳ ಮಧ್ಯಭಾಗದಲ್ಲಿ  ಹರಿಸುವಂತೆ  ಕೋರಲಾಗುವುದು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹಾಸನ ಜಿಲ್ಲಾ ಉಸ್ತುವಾರಿಯಾಗಿರುವುದರಿಂದ ಹೆಚ್ಚು ಅನುಕೂಲವಾಗುತ್ತಿದೆ ಎಂದರು.

ಬಸ್‌ನಿಲ್ದಾಣದ ಮೊದಲ ಹಂತ ಉದ್ಘಾಟನೆ:     

    ಮಹಾನಗರ ಪಾಲಿಕೆ ವಾರ್ಡ್ ವಿಸ್ತರಣೆಗೆ ಪರ ವಿರೋಧ ಸಹಜ. ಒಳ್ಳೆ ದೃಷ್ಟಿಯಿಂದ ಎನು ಮಾಡಬೇಕು ಅದನ್ನು ಮಾಡುತ್ತೇವೆ.ಪದೇಪದೇ ಮುಖ್ಯಮಂತ್ರಿಗಳು ಬರುವುದಿಲ್ಲ. ಹೀಗಾಗಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಮೊದಲ ಹಂತವನ್ನು ರಾಮಮಂದಿರ ಮಾದರಿಯಲ್ಲೆ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟಿಸಲಾಗುವುದು ಎಂದಿ ಮಾರ್ಮಿಕವಾಗಿ ನುಡಿದರು. ಎಂಎಲ್ಸಿ ಆರ್.ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap