ಬೆಂಗಳೂರು:
ಮಹಿಳೆಯರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ 50 ಕಡೆ ಆಯುಷ್ಮತಿ ಕ್ಲಿನಿಕ್ ಆರಂಭಿಸಿದೆ.
ಬಿಬಿಎಂಪಿ 8 ವಲಯಗಳ ವ್ಯಾಪ್ತಿಯಲ್ಲಿ ಆಯ್ದ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಗಾಗಿ ಆಯುಷ್ಮತಿ ಕ್ಲಿನಿಕ್ ಗಳನ್ನು ಆರಂಭಿಸಲಾಗಿದೆ. ಸ್ವಸ್ಥ ಮಹಿಳೆಯರು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಪ್ರತಿ ದಿನಾ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಪ್ರತಿ ಸೋಮವಾರ – ಫಿಜಿಷಿಯನ್, ಮಂಗಳವಾರ – ಮೂಳೆ ಮತ್ತು ಕೀಲು ತಜ್ಞರು, ಬುಧವಾರ – ಶಸ್ತçಚಿಕಿತ್ಸಾ ತಜ್ಞರು, ಗುರುವಾರ – ಮಕ್ಕಳ ತಜ್ಞರು, ಶುಕ್ರವಾರ – ಸ್ತ್ರೀರೋಗ ತಜ್ಞರು, ಶನಿವಾರ – ಇತರೆ(ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ, ಮಾನಸಿಕ ರೋಗ ತಜ್ಞರು ಸೇವೆ ನೀಡಲಾಗುತ್ತದೆ.
ಮಹಿಳೆಯರಿಗೋಸ್ಕರ ರೂಪಗೊಂಡ ಈ ಕ್ಲಿನಿಕ್ ನಲ್ಲಿ ಉಚಿತವಾಗಿ ಆಪ್ತಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಿರುತ್ತದೆ. ಈ ಕ್ಲಿನಿಕ್ ಮೂಲಕ ಆಹಾರ ಪದ್ಧತಿ, ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಲಾಗುತ್ತದೆ. ಸಿಕ್ಕ ಅವಕಾಶದಲ್ಲಿಉತ್ತಮ ಸೇವೆಯನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ. ಸರಕಾರಿ ವೈದ್ಯರ ಜತೆಗೆ ಖಾಸಗಿ ತಜ್ಞ ವೈದ್ಯರ ಸಹಭಾಗಿತ್ವದಲ್ಲಿಮಹಿಳೆಯರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲು ಆಯುಷ್ಮತಿ ಕ್ಲಿನಿಕ್ ನೆರವಾಗಲಿದೆ.
