6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಪರೀಷ್ಕತ ವೇತನ ವತ್ತಾಯ

ಹಾವೇರಿ

         ರಾಜ್ಯದಲ್ಲಿ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗೆ 4 ತಿಂಗಳು ಕಳದರೂ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಪರೀಷ್ಕತ ವೇತನ ಶ್ರೇಣಿಗಳನ್ನು ನೀಡದೇ ವಿನಾಕಾರಣ ವಿಳಂಬ ಮಾಡಿ ನೌಕರರಿಗೆ ತೊಂದರೆ ಕೊಡುತ್ತಿರುವದನ್ನು ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಖಂಡಿಸಿದ್ದಾರೆ. 

          6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ದಿ: 01-04-2018 ರಿಂದಲೇ ಎಲ್ಲ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಬರುವಂತೆ ದಿ: 01-03-2018 ರಂದೇ ಸರಕಾರ ಆದೇಶ ಹೊರಡಿಸಿದೆ. ತದನಂತರ ಪರೀಷ್ಕøತ ವೇತನ ಶ್ರೇಣಿಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಿಸಿ ಜಾರಿ ಮಾಡುವಂತೆ ದಿ: 27-07-2018 ರಂದು ಸರಕಾರ ಆದೇಶ ಹೊರಡಿಸಿ ಒಂದು ತಿಂಗಳು ಕಳೆದರೂ ಇಂದಿನವರೆಗೆ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ಸಿಬ್ಬಂದಿಗೆ ಹೊಸ ವೇತನ ಶ್ರೇಣಿಗಳನ್ನು ಜಾರಿ ಮಾಡದೇ ಇರುವದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಈಗಲಾದರೂ ಸಾರ್ವಜನಿಕ ಶಿಕ್ಷಣ ಇಲಾಖÉ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರುಗಳು ಹಾಗೂ ನಿರ್ದೇಶಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯನ್ನು ಅರಿತು ಒಂದು ವಾರದಲ್ಲಿ ಹೊಸ ವೇತನ ಶ್ರೇಣಿಗಳನ್ನು ಖಾಸಗಿ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗೆ ಬಿಡುಗಡೆ ಮಾಡುವಲ್ಲಿ ಕ್ರಮ ಕೈಗೊಳ್ಳಲು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಆಗ್ರಹಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link