ಕೊಪ್ಪಳ
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇ. 8.79 ರಷ್ಟು ಮತದಾನವಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ತಾಲ್ಲೂಕಿನ ಚಿಲಕಮುಖಿ ಗ್ರಾಮದ ಸರಕಾರಿ ಮಾದರ ಹಿರಿಯ ಪ್ರಾಥಮಿಕ ಶಾಲೆಯ (ಭಾಗ ಸಂಖ್ಯೆ 14) ಮತಗಟ್ಟಿ ಸಂಖ್ಯೆ 13ರಲ್ಲಿ 86 ವರ್ಷದ ಈರಪ್ಪ ಪೂಜಾರ ಅವರು ಸಂವಿಧಾನಬದ್ಧ ಮತದಾನದ ಹಕ್ಕನ್ನು ಚಲಾಯಿಸಿದರು.
ಮತದಾನದ ಮಾಡಲು ಇದೆ ಮತಗಟ್ಟಿಯಲ್ಲಿ ಮಹಿಳಾ ಹಾಗೂ ಪುರುಷ ಮತದಾರರು ಸರತಿ ಸಾಲಿನಲ್ಲಿ ನಿಂತು ಕ್ರಮೇಣವಾಗಿ ತಮ್ಮ ಹಕ್ಕನ್ನು ಚಲಾವಣೆ ಮಾಡಿದರು.
ಕುಕನೂರು ತಾಲೂಕಿನ ಗುದ್ಲೆಪ್ಪನ ಮಠ ವ್ಯಾಪ್ತಿಯಲ್ಲಿ ಮತದಾನ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ. ಮಠದ ಆವರಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಟ್ಟಿ ಸಖಿ ಮತಗಟ್ಟೆಯಲ್ಲಿ ಮತಗಟ್ಟೆ ಸಂಖ್ಯೆ 112 ರಲ್ಲಿ ಮತ ಚಲಾಯಿಸುವವರಿಗೆ ವೆಲ್ಕಮ್ ಡ್ರಿಂಕ್ ನೀಡಿ ಸ್ವಾಗತ ನೀಡಲಾಗುತ್ತಿದೆ. ಉಳಿದಂತೆ ಮತದಾನ ಶಾಂತಿಯುತವಾಗಿ ನಡೆದಿದೆ.