ಮೊದಲ ಬಾರಿಗೆ 84 ಸಾವಿರ ಗಡಿದಾಟಿ ಇತಿಹಾಸ ಬರೆದ ಸೆನ್ಸೆಕ್ಸ್

ಮುಂಬೈ:

    ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆಯುತ್ತಿದ್ದು ಇಂದು ಷೇರುಮಾರುಕಟ್ಟೆ ಆರಂಭದಲ್ಲೇ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.

   ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 865.14 ಅಂಕಗಳ ಏರಿಕೆಯೊಂದಿಗೆ 84,049.94 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ.ಅಂತೆಯೇ ನಿಫ್ಟಿಕೂಡ ಆರಂಭಿಕ ವಹಿವಾಟಿನಲ್ಲಿ 261.10 ಅಂಶಗಳ ಏರಿಕೆಕಂಡು 25,676.90 ಅಂಕಗಳಿಗೆ ಏರಿಕೆಯಾಗಿದೆ.

   ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವ ನಿರ್ಧಾರದ ನಂತರ ಜಾಗತಿಕ ಮಾರುಕಟ್ಟೆಯು ಏರುಗತಿಯಲ್ಲಿ ಸಾಗಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಅಂದರೆ ಶುಕ್ರವಾರ ನಿಫ್ಟಿ, ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ಭಾರತೀಯ ಷೇರುಗಳು ಹೆಚ್ಚು ಮೌಲ್ಯಯುತವಾಗಿದ್ದು, ಭಾರತೀಯ ಮಾರುಕಟ್ಟೆಗಳಲ್ಲಿ ದೇಶೀಯ ಹೂಡಿಕೆದಾರರ ಬೆಂಬಲ ಮುಂದುವರಿದಿದೆ.

   ಇನ್ನು ಇಂದಿನ ವಹಿವಾಟಿನ ಮೇಲೆ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸಿದ್ದು ಪರಿಣಾಮ ಬೀರಿದೆ. ಕಳೆದ 4 ವರ್ಷಗಳಲ್ಲಿ ಒಮ್ಮೆಯೂ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸಿರಲಿಲ್ಲ. ಇದೇ ಮೊದಲ ಬಾರಿಗೆ ಬಡ್ಡಿದರ ಕಡಿತ ಮಾಡಿದ್ದು, ಇದು ಷೇರುಮಾರುಕಟ್ಟೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

Recent Articles

spot_img

Related Stories

Share via
Copy link
Powered by Social Snap