ಪಾಟ್ನಾ:
ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ್-ಜಂದಾಹಾ ರಸ್ತೆಯಲ್ಲಿ ವಾಹನ ವಿದ್ಯುತ್ ತಂತಿಗೆ ತಗುಲಿ ಒಂಬತ್ತು ಮಂದಿ ‘ಕನ್ವಾರಿಯಾ’ ಭಕ್ತರು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದಾರೆ, ಹಲವರಿಗೆ ಸುಟ್ಟ ಗಾಯಗಳಾಗಿವೆ.
ಸೋನೆಪುರದ ಹರಿಹರನಾಥ ದೇವಾಲಯದಲ್ಲಿ ಅರ್ಪಿಸಲು ಪವಿತ್ರ ನೀರನ್ನು ತೆಗೆದುಕೊಳ್ಳಲು ಗಂಗಾ ನದಿಯ ಪಹ್ಲೇಜಾ ಘಾಟ್‌ಗೆ ಕನ್ವಾರಿಯಾಗಳ ಗುಂಪು ತೆರಳುತ್ತಿದ್ದಾಗ ಕಳೆದ ಮಧ್ಯರಾತ್ರಿ ದುರ್ಘಟನೆ ನಡೆದಿದೆ. ಕನ್ವಾರಿಯಾದವರು ಡಿಜೆ ಮೌಂಟೆಡ್ ಟ್ರಾಲಿಯಲ್ಲಿ ಹೋಗುತ್ತಿದ್ದರು. ಡಿಜೆ ಮೌಂಟೆಡ್ ಟ್ರಾಲಿ ತುಂಬಾ ಎತ್ತರದಲ್ಲಿದ್ದು, ತಂತಿಯೊಂದು ಸಿಕ್ಕಿಹಾಕಿಕೊಂಡಿತ್ತು. ಡಿಜೆ ಟ್ರಾಲಿ 11,000 ಹೈ ಟೆನ್ಷನ್ ವೈರ್‌ಗೆ ತಗುಲಿ ಕೆಲವು ಭಕ್ತರು ಮೃತಪಟ್ಟರೆ, ಇನ್ನೂ ಕೆಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸದರ್ ಎಸ್‌ಡಿಪಿಒ ಹಾಜಿಪುರ ಓಂಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದರು.
ಸಂತ್ರಸ್ತರನ್ನು ಹಾಜಿಪುರದ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು, ಅವರಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಟ್ಟಗಾಯಗಳಾಗಿರುವ ಇತರ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈಶಾಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಯಶಪಾಲ್ ಮೀನಾ ಅವರು ಸದರ್ ಆಸ್ಪತ್ರೆಗೆ ಧಾವಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಿವಿಲ್ ಸರ್ಜನ್ ಅವರಿಗೆ ಸೂಚಿಸಿದರು. ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಸದರ್ ಉಪವಿಭಾಗದ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಖಚಿತಪಡಿಸಿದ್ದಾರೆ.ಮೃತಪಟ್ಟವರು ವೈಶಾಲಿ ಜಿಲ್ಲೆಯ ಮಹನಾರ್ ಬಳಿಯ ಸುಲ್ತಾನ್‌ಪುರ ಗ್ರಾಮದ ನಿವಾಸಿಗಳಾಗಿದ್ದಾರೆ.