ನವದೆಹಲಿ:
ಭಾರತೀಯ ವಾಯುಸೇನೆಯ ಮುಂದಿನ ನೂತನ ಮುಖ್ಯಸ್ಥರನ್ನಾಗಿ ಏರ್ ಮಾರ್ಷಲ್ ರಾಕೇಶ್ ಕುಮಾರ್ ಭದೌರಿಯಾ ಅವರನ್ನು ಆಯ್ಕೆ ಮಾಡಲಾಗಿದೆ.
ವಾಯುಪಡೆ ಮುಖ್ಯಸ್ಥ ಸ್ಥಾನಕ್ಕೆ ಬಧೌರಿಯಾ ಅವರನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ ಆರಂಭದಲ್ಲೇ ಆಯ್ಕೆ ಮಾಡಿತ್ತು. ನಿಕಟಪೂರ್ವ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಇಂದು ಬಧೌರಿಯಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದು, ಇಂದಿನಿಂದ ಎರಡು ವರ್ಷಗಳಿಗೆ ಐಎಎಫ್ ಮುಖ್ಯಸ್ಥರಾಗಿ ಬಧೌರಿಯಾ ಕಾರ್ಯನಿರ್ವಹಿಸಲಿದ್ದಾರೆ.
Delhi: Air Chief Marshal BS Dhanoa demits office of the Chief of Air Staff on superannuation; Air Marshal Rakesh Kumar Singh Bhadauria takes charge as the Chief of the Indian Air Force. pic.twitter.com/VknFnrbPuB
— ANI (@ANI) September 30, 2019
ವಾಯುಪಡೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಬಧೌರಿಯಾ, ಐಎಎಫ್ ನ ಸದರನ್ ಏರ್ ಕಮಾಂಡ್ ಮುಖ್ಯಸ್ಥರಾಗಿ ಮಾರ್ಚ್ 2017 ರಿಂದ ಆಗಸ್ಟ್ 2018 ರ ವರೆಗೆ ಕಾರ್ಯನಿರ್ವಹಿಸಿದ್ದಾರೆ. ಬಳಿಕ ವಾಯುಪಡೆಯ ತರಬೇತಿ ಕಮಾಂಡ್ ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
1980ರ ಜೂನ್ 15 ರಂದು ವಾಯುಪಡೆಯ ಗೌರವದ ಜೊತೆ ಅವರು ವಾಯುಸೇನೆಯ ಫೈಟರ್ ವಿಭಾಗಕ್ಕೆ ಸೇರಿದ್ದರು.
ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಕಮಾಂಡೆಂಟ್, ಸೆಂಟ್ರಲ್ ಏರ್ ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿ ಮತ್ತು 2016 ರ ಜನವರಿ 28 ರಿಂದ ಫೆಬ್ರವರಿ 28 ರವರೆಗೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ