ತುಮಕೂರು
ಮಳೆ ಕೊರತೆ ಹಿನ್ನೆಲೆ ರಾಜ್ಯದ 161ತಾಲ್ಲೂಕುಗಳನ್ನುತೀವ್ರ ಬರ ಪೀಡಿತ ಹಾಗೂ 34 ತಾಲ್ಲೂಕು ಗಳನ್ನು ಸಾಧಾರಣ ಬರ ಪೀಡಿತ ಎಂದು ಘೋಷಿಸಿದ್ದು ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕು ಗಳ ಪೈಕಿ ಒಂಬತ್ತು ತಾಲ್ಲೂಕು ಗಳು ತೀವ್ರ ಬರ ಪೀಡಿತ ತಾಲ್ಲೂಕು ಗಳ ಪಟ್ಟಿಗೆ ಸೇರಿವೆ ಎಂದು ಜಿಲ್ಲಾ ಧಿಕಾರಿ ಶ್ರೀ ನಿವಾಸ್ ಮಾಹಿತಿ ನೀಡಿದ್ದಾರೆ.
ತುಮಕೂರು ತಾಲ್ಲೂಕು ನ್ನು ಹೊರತುಪಡಿಸಿ ಉಳಿದ 9ತಾಲ್ಲೂಕುಗಳಾದ ಗುಬ್ಬಿ, ಚಿ. ನಾ. ಹಳ್ಳಿ, ಮಧುಗಿರಿ, ಕೊರಟಗೆರೆ, ಪಾವಗಡ, ತಿಪಟೂರು, ತುರುವೇಕೆರೆ, ಕುಣಿಗಲ್, ಸಿರಾ ತಾಲ್ಲೂಕು ಗಳನ್ನು ತೀವ್ರ ಬರ ಪೀಡಿತ ತಾಲ್ಲೂಕು ಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದು ತುಮಕೂರು ತಾಲ್ಲೂಕನ್ನು ಸಾಧಾರಣ ಬರ ಪೀಡಿತ ತಾಲ್ಲೂಕು ಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಹತ್ತು ತಾಲ್ಲೂಕು ಗಳನ್ನು ಬರ ಪೀಡಿತ ವೆಂದು ಘೋಷಿಸುವಂತೆ ಮುಖ್ಯ ಮಂತ್ರಿ ಗಳಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಪತ್ರ ಬರೆದು ಕೋರಿದ್ದರ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ವಹಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ