ದಾವಣಗೆರೆ:
ಕನ್ನಡ ಜಾನಪದ ಪರಿಷತ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ ರಾಜ್ಯಕೋಷ ಇವುಗಳ ಆಶ್ರಯದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ಅದಮ್ಯ ಕಲಾಸಂಸ್ಥೆ ಸಹಕಾರದೊಂದಿಗೆ ಜು.21ರಂದು ಬೆಳಿಗೆ 7 ಗಂಟೆಯಿಂದ ಸಂಜೆ 6ರ ವರೆಗೆ ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ರಾಜ್ಯ ಮಟ್ಟದ ಜನಪದ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ವಿದ್ವಾನ್ ದ್ವಾರಕೀಶ್ ಎಂ. ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಸ್ಪರ್ಧೆಯ ಉದ್ಘಾಟನೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಘನ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ ನೆರವೇರಿಸಲಿದ್ದಾರೆ. ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಕೋಶದ ಸಂಪರ್ಕಾಧಿಕಾರಿ ಗಣನಾಥ ಎಕ್ಕಾರು, ಹಂಪಿ ಕನ್ನಡ ವಿವಿಯ ಬುಡಕಟ್ಟು ವಿಭಾಗದ ಡಾ.ಚಲುವರಾಜು, ಪರಿಷತ್ ರಾಜ್ಯ ಸಂಚಾಲಕ ಕನಕತಾರಾ, ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಕಾರ್ಯದರ್ಶಿ ಜಯಣ್ಣ, ಪಾಲಿಕೆ ಮಾಜಿ ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ರೇಖಾ ಎ ನಾಗರಾಜ್, ಎಸ್.ಎಸ್. ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ.ಶಶಿಕಲಾ ಪಿ. ಕೃಷ್ಣಮೂರ್ತಿ, ಶ್ರೀರಾಮಕೃಷ್ಣ ನರ್ಸಿಂಗ್ ಹೋಂನ ಡಾ.ಕೆ.ಮಹೇಶ್, ದುರ್ಗಾಂಭಿಕಾ ದೇವಸ್ಥಾನದ ಧರ್ಮದರ್ಶಿ ಗೌಡರ ಚನ್ನಬಸಪ್ಪ, ನಯನ ಎಸ್. ಪಾಟೀಲ್, ವಿಶ್ವಜಿತ್ ಕೆ. ಜಾಧವ್ ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಬಹುಮಾನ ವಿತರಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್. ಆರ್ ಉಪಸ್ಥಿತರಿರಲಿದ್ದಾರೆ. ಜನಪದ ವಿದ್ವಾಂಸ ಪ್ರೊ.ಕೆ.ಎಸ್.ಕೌಜಲಗಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಪೂರ್ಣಿಮಾ ಜೋಗಿ, ಶ್ರೀನಿವಾಸ, ಕುಮಾರ್ ಎಸ್. ಬೆಕ್ಕೇರಿ, ಶ್ರೀನಿವಾಸ ಡಿ. ದಾಸಕರಿಯಪ್ಪ, ವಾಸುದೇವ ರಾಯ್ಕರ್, ಎಚ್.ಸಿ.ಜಯಮ್ಮ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್‍ನ ಎನ್.ಕೆ.ಕೊಟ್ರೇಶ್, ಗೀತಾ ಮಾಲತೇಶ್, ಸವಿತಾ ಕೂಲಂಬಿ, ಗಿರಿಧರ ಟಿ.ವಿ, ಪೃಥ್ವಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
